ಮರಿ ಗೌಡಗೆ ನ್ಯಾಯಾಂಗ ಬಂಧನ
Update: 2016-08-03 17:47 IST
ಮೈಸೂರು, ಆ.3: ಮೈಸೂರು ಜಿಲ್ಲಾಧಿಕಾರಿ ಸಿ. ಶಿಖಾ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣಕ್ಕೆ ಸಂಬಂಧಿಸಿ ಮೈಸೂರಿನ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಮರಿಗೌಡರಿಗೆ 3ನೆ ಜೆಎಂಎಫ್‌ಸಿ ನ್ಯಾಯಾಲಯ ಆ.16ರ ತನಕ ನ್ಯಾಯಾಂಗ ಬಂಧನ ವಿಧಿಸಿದೆ.
ಬುಧವಾರ ನಜರ್‌ಬಾದ್ ಪೊಲೀಸರಿಗೆ ಶರಣಾಗಿದ್ದ ಮರಿಗೌಡರನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದರು. ನ್ಯಾಯಾಧೀಶೆ ದೀಪಾ ಅವರು ಮರಿಗೌಡರಿಗೆ ನ್ಯಾಯಾಂಗ ಬಂಧನಕ್ಕೆ ಆದೇಶ ನೀಡಿದರು.
ಜು.3 ರಂದು ಮೈಸೂರು ಡಿ.ಸಿ. ಶಿಖಾರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದ ಆರೋಪ ಎದುರಿಸುತ್ತಿರುವ ಮರಿಗೌಡ ಕಳೆದ ಕೆಲವು ಸಮಯದಿಂದ ತಲೆ ಮರೆಸಿಕೊಂಡಿದ್ದರು. ಇಂದು ತನ್ನ ವಕೀಲರೊಂದಿಗೆ ಪೊಲೀಸರಿಗೆ ಶರಣಾಗಿದ್ದರು.