×
Ad

ಹಾಸನ: ಸಂಸದರ ಮನೆ ಮುಂದೆ ಧರಣಿ ಕೂತ ಆಪ್ ಮುಖಂಡ ಅಕ್ಮಲ್ ಜಾವೇದ್ ಕುಟುಂಬ

Update: 2016-08-03 18:45 IST

ಹಾಸನ, ಆ.3: ಮಹಾದಾಯಿ ಯೋಜನೆಯಲ್ಲಿ ನ್ಯಾಯಾಧಿಕರಣ ನೀಡಿರುವ ತೀರ್ಪಿನಿಂದ ಕರ್ನಾಟಕ ರಾಜ್ಯಕ್ಕೆ ಅನ್ಯಾಯವಾಗಿದ್ದು, ಕೂಡಲೇ ಸಂಸದರು ಪ್ರಧಾನಿ ಮೇಲೆ ಒತ್ತಡ ತಂದು ಸರಿಪಡಿಸುವಂತೆ ಒತ್ತಾಯಿಸಿ ಆಮ್ ಆದ್ಮಿ ಪಕ್ಷದ ಮುಖಂಡ ಅಕ್ಮಲ್ ಜಾವೇದ್ ಕುಟುಂಬ ಸಹಿತರಾಗಿ ಸಂಸದರ ಮನೆಮುಂದೆ ಸಾಂಕೇತಿಕ ಧರಣಿ ನಡೆಸುವ ಮೂಲಕ ಗಮನಸೆಳೆದರು.

ನಗರದ ಕೆ.ಆರ್.ಪುರಂ ಬಡಾವಣೆಯಲ್ಲಿರುವ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ನಿವಾಸದ ಮುಂದೆ ಕೆಲ ಸಮಯ ಧರಣಿ ಕೂತ ಅವರು ಮಹಾದಾಯಿ ಯೋಜನೆ ಕುರಿತಂತೆ ರಾಜ್ಯಕ್ಕೆ ನೀಡಿರುವ ತೀರ್ಪು ನಿಜಕ್ಕೂ ಬೇಸರದ ಸಂಗತಿ. ಹತ್ತಾರು ದಶಕಗಳಿಂದ ಉತ್ತರ ಕರ್ನಾಟಕ ಭಾಗದ ರೈತರು ಸೇರಿದಂತೆ ಸಾರ್ವಜನಿಕರು ಈ ಬಗ್ಗೆ ಹೋರಾಟಗಳನ್ನು ನಡೆಸುತ್ತಾ ಬಂದಿದ್ದರೂ, ರಾಜಕೀಯ ಪಕ್ಷಗಳು ಸಮಸ್ಯೆ ಬಗ್ಗೆ ಗಮನಹರಿಸುವ ನಿಟ್ಟಿನಲ್ಲಿ ಮುಂದಾಗಿಲ್ಲ ಎಂದು ದೂರಿದರು.

ರಾಜ್ಯ ಸಲ್ಲಿಸಿದ್ದ ಮಧ್ಯಂತರ ಅರ್ಜಿ ತಿರಸ್ಕಾರಗೊಳಿಸಿದ ನ್ಯಾಯಾಧಿಕರಣದ ವಿರುದ್ಧ ಹಾಗೂ ಕೇಂದ್ರ ಮತ್ತು ರಾಜ್ಯ ಸರಕಾರಗಳ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿದರು. ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಹೋರಾಟಕ್ಕೆ ಇಳಿಯಿರಿ ಇಲ್ಲವೇ 28 ಜನ ಸಂಸದರು ಒಟ್ಟಿಗೆ ರಾಜಿನಾಮೆ ನೀಡಿ ಒತ್ತಡ ಹೇರುವಂತೆ ಆಗ್ರಹಿಸಿದರು.

ನಂತರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಕಚೇರಿಗೆ ತೆರಳಿ ಮಹಾದಾಯಿ ಯೋಜನೆ ಸಮಸ್ಯೆ ಬಗೆಹರಿಸಲು ಮುಂದಾಗುವಂತೆ ಮನವಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News