×
Ad

ಮಾನವನಿಗೆ ಕಣ್ಣು ಪ್ರಮುಖ ಅಂಗ: ದೀಪಕ್ ನಾಯ್ಕ

Update: 2016-08-03 22:11 IST

ಹೊನ್ನಾವರ, ಆ.3: ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಉಡುಪಿ, ಯು.ಟಿ. ಫರೀದ್ ಫೌಂಡೇಶನ್ ಮಂಗಳೂರು, ಮಂಕಿ ಮುಸ್ಲಿಮ್ ಖಲೀಜ್ ಕೌನ್ಸಿಲ್ ಹಾಗೂ ಮುಸ್ಲಿಮ್ ಯೂತ್ ಫೆಡರೇಶನ್ ಆಶ್ರಯದಲ್ಲಿ ತಾಲೂಕಿನ ಮಂಕಿ ಉರ್ದು ಸರಕಾರಿ ಪ್ರೌಢಶಾಲೆಯಲ್ಲಿ ತಜ್ಞ ವೈದ್ಯರಿಂದ ಉಚಿತ ನೇತ್ರ ಚಿಕಿತ್ಸಾ ಶಿಬಿರ ನಡೆಯಿತು.

ಮುಖ್ಯ ಅತಿಥಿ ಜಿಪಂ ಸದಸ್ಯ ದೀಪಕ್ ನಾಯ್ಕ ಮಂಕಿ ಮಾತನಾಡಿ, ಮಾನವನಿಗೆ ಕಣ್ಣು ಅತ್ಯಂತ ಪ್ರಮುಖ ಅಂಗ. ಇದನ್ನು ಸಂರಕ್ಷಿಸಿಕೊಳ್ಳುವುದು ಅನಿವಾರ್ಯ. ಮಂಕಿಯಂತಹ ಗ್ರಾಮೀಣ ಭಾಗದಲ್ಲಿ ಮುಸ್ಲಿಮ್ ಯೂತ್ ಫೆಡರೇಶನ್‌ನವರು ನೇತ್ರ ಚಿಕಿತ್ಸಾ ಶಿಬಿರ ಹಾಗೂ ಶಸ್ತ್ರ ಚಿಕಿತ್ಸೆಗೆ ಆಯೋಜಿಸಿದ್ದು ಉತ್ತಮ ಕಾರ್ಯವಾಗಿದೆ ಎಂದರು.

ಉದ್ಯಮಿ ಅಬು ಅಹ್ಮದ್ ಮುಕ್ತೇಶ್ವರ ಮಾತನಾಡಿ, ಈ ಸಂಸ್ಥೆಯು ಕೇವಲ 15 ತಿಂಗಳಲ್ಲಿ 3 ಆರೋಗ್ಯ ಶಿಬಿರಗಳನ್ನು ನಡೆಸಿರುವುದು ನಿಜಕ್ಕೂ ಅಭಿನಂದನೀಯ. ಇದಕ್ಕೆ ಕಾರಣಕರ್ತರಾದ ಪ್ರಸಾದ್ ನೇತ್ರಾಲಯ ಹಾಗೂ ಮುಸ್ಲಿಮ್ ಯೂತ್ ಫೆಡರೇಶನ್‌ನವರಿಗೆ ಅಭಿನಂದನೆ ಸಲ್ಲಿಸಿದರು.

ವೇದಿಕೆಯಲ್ಲಿ ತಾಪಂ ಅಧ್ಯಕ್ಷ ಅಣ್ಣಯ್ಯ ನಾಯ್ಕ, ಮುಸ್ಲಿಮ್ ಯೂತ್ ಫೆಡರೇಶನ್ ಅಧ್ಯಕ್ಷ ಸಲೀಮ್ ಹಾಜಿ, ತಾಪಂ ಸದಸ್ಯ ಮುಹಮ್ಮದ್ ಇರ್ಶಾದ್ ಖಾಝಿ, ಡಾ. ಸಬೀತಾ ಸಪರ ಉಡುಪಿ ಉಪಸ್ಥಿತರಿದ್ದರು. ಧರ್ಮಗುರು ಶಕೀಲಾ ಮೌಲಾನಾ ಅಧ್ಯಕ್ಷತೆ ವಹಿಸಿದ್ದರು.

ಹಸನ್‌ಬಾಪು ಸ್ವಾಗತಿಸಿ, ಸಿದ್ದೀಕ್ ಹಸನ್ ಬಾಪು ವಂದಿಸಿದರು. ಯೂತ್ ಫೆಡರೇಶನ್‌ನ ಝಾಕಿರ್ ಕಟಿಂಗೇರಿ, ಅಬ್ದುರ್ರಹೀಂ, ಶಕೀಲಾ ಅಬುಸಾಬಾ ನೇತೃತ್ವ ವಹಿಸಿದ್ದರು.

216 ಶಿಬಿರಾರ್ಥಿಗಳು ಶಿಬಿರದ ಪ್ರಯೋಜನ ಪಡೆದರು. 84 ಶಿಬಿರಾರ್ಥಿಗಳಿಗೆ ಕನ್ನಡಕ ವಿತರಿಸಲಾಯಿತು. 26 ಶಿಬಿರಾರ್ಥಿಗಳನ್ನು ಶಸ್ತ್ರ ಚಿಕಿತ್ಸೆಗೆ ಉಡುಪಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಕರೆದೂಯ್ಯಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News