×
Ad

ಬೀಟೆ ಮರ ಕಳವು: ಇಬ್ಬರ ಬಂಧನ

Update: 2016-08-03 22:14 IST

 ಮಡಿಕೇರಿ, ಆ.3: ಕರಿಕೆಯ ಕಂದಾಯ ಇಲಾಖಾ ಸ್ವಾಧೀನದ ಜಾಗದಿಂದ ಭಾರೀ ವೌಲ್ಯದ ಬೀಟೆ ಮರಗಳನ್ನು ಕಡಿದು ಕೇರಳಕ್ಕೆ ಸಾಗಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮರಗಳು ಹಾಗೂ ಪ್ರಕರಣಕ್ಕೆ ಬಳಸಿದ ವಾಹನಗಳನ್ನು ವಶಪಡಿಸಿಕೊಂಡು, ಇಬ್ಬರು ಆರೋಪಿಗಳನ್ನು ಬಂಧಿಸಿದ ಘಟನೆ ವರದಿಯಾಗಿದೆ.

ಕರಿಕೆಯಿಂದ ಕಡಿದು ಕೊಂಡೊಯ್ದ ಮರಗಳನ್ನು ಕೇರಳದ ತಳಿಪರಂಬುವಿನ ವಡಹಳ್ಳಿ ಎಂಬಲ್ಲಿನ ತೋಟವೊಂದರಲ್ಲಿ ಇರಿಸಲಾಗಿತ್ತು. ಉಪವಲಯಾರಣ್ಯಾಧಿಕಾರಿ ಪಿ.ಟಿ.ಶಶಿ ಮತ್ತು ಸಿಬ್ಬಂದಿ ಸ್ಥಳಕ್ಕೆ ತೆರಳಿ ಬೀಟೆ ಮರದ ನಾಟಾಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಕರಿಕೆಯ ರಬ್ಬರ್ ತೋಟದಲ್ಲಿ ಅಡಗಿ ಕುಳಿತ್ತಿದ್ದ ಇಬ್ಬರು ಆರೋಪಿಗಳಾದ ಶ್ರೀಕುಮಾರ್(42) ಹಾಗೂ ಜೈಕುಮಾರ್ ನಾಯರ್ (47) ಇವರನ್ನು ಬಂಧಿಸಲಾಗಿದೆ. ಈ ಇಬ್ಬರು ಮೂಲತಃ ಕೇರಳದವರಾಗಿದ್ದು, ಇವರಿಗೆ ಸೇರಿದ ಮಹೀಂದ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಅಕ್ರಮ ಸಾಗಾಟಕ್ಕೆ ಬಳಸಿದ್ದ ಲಾರಿ ಪತ್ತೆಯಾಗಿಲ್ಲ.

ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆ ಮರೆಸಿಕೊಂಡಿರುವ ರಬ್ಬರ್ ತೋಟದ ಮಾಲಕ ಪೂತನ್, ಬಿಜು ಮ್ಯಾಥ್ಯು ಆಲಿಯಾಸ್ ಅಬ್ರಾಹಾಂ ಹಾಗೂ ಸಾಗಾಣೆೆಗೆ ಬಳಸಿದ ಲಾರಿಯ ಪತ್ತೆ ಕಾರ್ಯ ಚುರುಕುಗೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News