ಅಂಬೇಡ್ಕರ್ ಭವನದ ಜಾಗ ವಿವಾದ: ಜಿಲ್ಲಾಡಳಿತ ಮಧ್ಯ ಪ್ರವೇಶ
ಮೂಡಿಗೆರೆ, ಆ.3: ಡಾ. ಬಿ.ಆರ್.ಅಂಬೇಡ್ಕರ್‌ರವರ ಭವನ ನಿರ್ಮಾಣಕ್ಕೆಂದು ಜಿಲ್ಲಾಧಿಕಾರಿ ಮಂಜೂರು ಮಾಡಿದ್ದ 5 ಎಕರೆ ಜಮೀನು ವಿವಾದಕ್ಕೊಳಗಾಗಿ
ಮಾಜ ಕಲ್ಯಾಣ ಇಲಾಖೆ ಹಾಗೂ ದಲಿತ ಮುಖಂಡರು ಹಾಗೂ ತೋಟಗಾರಿಕೆ ವಿಶ್ವ ವಿದ್ಯಾನಿಲಯದ ಕಿತ್ತಾಟದಿಂದಾಗಿ ವಿವಾದ ಸೃಷ್ಠಿಯಾಗಿದ್ದು, ಜಂಟಿ ಸರ್ವೇ ಮುಖಾಂತರ ವಿವಾದಕ್ಕೆ ತೆರೆ ಎಳೆಯಲು ತಾಲೂಕು ಆಡಳಿತ ಮುಂದಾಗಿದೆ. ತಾಲೂಕು ಮಟ್ಟದ ಸುಮಾರು 1.50 ಕೋಟಿ ರೂ. ವೆಚ್ಚದ ಅಂಬೇಡ್ಕರ್‌ರವರ ಬೃಹತ್ ಭವನ ನಿರ್ಮಾಣಕ್ಕೆ ಸರಕಾರದಿಂದ ಅನುಮೋದನೆ ದೊರೆತಿದ್ದು, ಈ ಭವನ ನಿರ್ಮಾಣಕ್ಕೆ ಸಮಾಜ ಕಲ್ಯಾಣ ಇಲಾಖೆಯ ಸುಪರ್ದಿಗೆ ಒಪ್ಪಿಸಿ 50 ಲಕ್ಷ ರೂ. ಬಿಡುಗಡೆ ಮಾಡಿದೆ.ಇದಕ್ಕಾಗಿ ಆಯಕಟ್ಟಿನ ಸ್ಥಳದಲ್ಲಿ ಜಾಗ ಗುರುತಿಸಿ ಭವನ ನಿರ್ಮಾಣಕ್ಕೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಮುಂದಾಗಿದ್ದಾರೆ. ಕಸಬಾ ಹೋಬಳಿ ಹಳೆಮೂಡಿಗೆರೆ ಗ್ರಾಮದ ಸರ್ವೇ.ನಂ.200ರಲ್ಲಿ 5 ಎಕರೆ ಜಮೀನು ಹಿಂದಿನ ಜಿಲ್ಲಾಧಿಕಾರಿ ಷಡಕ್ಷರಿಸ್ವಾಮಿ 2
016 ಮೇ.24ರಂದು ಮಂಜೂರಾತಿ ನೀಡಿ ಆದೇಶ ಹೊರಡಿಸಿದ್ದಾರೆ. ಜಿಲ್ಲಾಧಿಕಾರಿ ಮಂಜೂರಾತಿ ನೀಡಿರುವ ಜಮೀನು ತೋಟಗಾರಿಕಾ ವಿ.ವಿ.ಸುಪರ್ದಿಯಲ್ಲಿದೆ.ಆ ಜಮೀನಿನಲ್ಲಿ ಸಪೋಟಾ ಬೆಳೆ ಸೇರಿದಂತೆ ಸಿಲ್ವರ್ ಗಿಡಗಳು ಹಾಗೂ ಇತರೇ ಜಾತಿಯ ಮರಗಳನ್ನು ಬೆಳೆಯಲಾಗಿದೆ.ಈ ಜಾಗವನ್ನು ಭವನ ನಿರ್ಮಾಣಕ್ಕೆ ಜಿಲ್ಲಾಧಿಕಾರಿ ಮಂಜೂರು ಮಾಡಿದ್ದರಿಂದ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಧನಂಜಯ ಅವರು,ಅದೇ ಜಾಗದಲ್ಲಿ ಕಾಮಗಾರಿ ಪ್ರಾರಂಭಿಸಲು ಬುಧವಾರ 20 ಕಾರ್ಮಿಕರನ್ನು ಕರೆ ತಂದು 5 ಎಕರೆ ಜಮೀನಿನ ಸುತ್ತ ತಂತಿ ಬೇಲಿ ನಿರ್ಮಿಸಲು ಮುಂದಾಗಿದ್ದಾರೆ. ಈ ವೇಳೆ ತೋಟಗಾರಿಕೆ ವಿ.ವಿ.ಅಧಿಕಾರಿಗಳು ತಹಶೀಲ್ದಾರ್ ಹಾಗೂ ಪೊಲೀಸರಿಗೆ ವಿಚಾರ ತಿಳಿಸಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿದರು. ವಿಷಯ ತಿಳಿಯುತ್ತಿದ್ದಂತೆ ಸ್ಥಳ್ಕಕೆ ದಲಿತ ಸಂಘರ್ಷ ಸಮಿತಿ ಸಹಿತ ವಿವಿಧ ಪಕ್ಷಗಳ ಅಂಬೇಡ್ಕರ್‌ವಾದಿ ಮುಖಂಡರು ಧಾವಿಸಿದರು.ಈ ವೇಳೆ ಸ್ಥಳದಲ್ಲಿ ಬಿಗುವಿನ ಪರಿಸ್ಥಿತಿ ಉಂಟಾದಾಗ ಹೆಚ್ಚುವರಿ ಪೊಲೀಸರನ್ನುತಾಲೂಕಿನ ಎಲ್ಲಾ ಠಾಣೆಗಳಿಂದ ಕರೆಸಿ ಬಂದೋಬಸ್ತ್ ಕೈಗೊಳ್ಳಲಾಯಿತು. ಈ ವೇಳೆಗೆ ತಂತಿ ಬೇಲಿ ನಿರ್ಮಿಸಲು 109 ಕಲ್ಲು ಕಂಬಗಳನ್ನು ಸಮಾಜ ಕಲ್ಯಾಣ ಇಲಾಖೆ ಕಾರ್ಮಿಕರು ನೆಟ್ಟಿದ್ದರು.ಗುರುವಾರ ಸಂಜೆ ವೇಳೆಗೆ ಸರ್ವೇ ಕಾರ್ಯ ಮುಗಿಯಲಿದೆ. ನಂತರ ಬೇಲಿ ನಿರ್ಮಾಣಕ್ಕೆ ಮುಂದಾಗಲು ಸೂಚಿಸಿದರು. ಬಳಿಕ ಬೇಲಿ ನಿರ್ಮಾಣ ಕಾರ್ಯ ಸ್ಥಗಿತಗೊಳಿಸಲಾಯಿತು. ಭವನ ನಿರ್ಮಾಣಕ್ಕೆ ಈಗ ಬೇಲಿ ಅಳವಡಿಸಲು ಮುಂದಾಗಿರುವ ಸ್ಥಳವೇ ಬೇಕು ಎಂದು ಸ್ಥಳದಲ್ಲಿ ಸೇರಿದ್ದ ದಲಿತ ಮುಖಂಡರು ತಹಶೀಲ್ದಾರ್‌ರನ್ನು ಒತ್ತಾಯಿಸಿದ್ದಾರೆ.