ಮಡಿಕೇರಿ: ಕಾಫಿ ತೋಟದಲ್ಲಿ ಹುಲಿಯ ಮೃತ ದೇಹ ಪತ್ತೆ
Update: 2016-08-03 22:23 IST
ಮಡಿಕೇರಿ, ಆ.3: ದಕ್ಷಿಣ ಕೊಡಗಿನ ಕೊಟ್ಟಗೇರಿ ಗ್ರಾಮದ ಕಾಫಿ ತೋಟವೊಂದರಲ್ಲಿ ಹುಲಿಯ ಮೃತದೇಹ ಪತ್ತೆಯಾಗಿದೆ. ಹುಲಿಗೆ ಅಂದಾಜು 9 ವರ್ಷ ವಯಸ್ಸಾಗಿರಬಹುದು ಎಂದು ಅಂದಾಜಿಸಲಾಗಿದೆ. ಮಾಚಂಗಡ ನವೀನ್ ಎಂಬವರ ಕಾಫಿ ತೋಟದಲ್ಲಿ ಬುಧವಾರ ಮಧ್ಯಾಹ್ನ ತೋಟದ ಕಾರ್ಮಿಕರಿಗೆ ಹುಲಿಯ ಮೃತದೇಹ ಗೋಚರಿಸಿದೆ. ಒಂದು ದಿನದ ಹಿಂದೆಯೇ ಹುಲಿ ಸಾವನಪ್ಪಿರಬಹುದು ಎಂದು ಶಂಕಿಸಲಾಗಿದೆ.
ಸ್ಥಳಕ್ಕೆ ಅರಣ್ಯ ಇಲಾಖೆಯ ಹುಲಿ ಸಂರಕ್ಷಣಾ ನಿರ್ದೇಶಕ ಮಣಿಕಂಠನ್, ಕಲ್ಲಳ್ಳ ವನ್ಯಜೀವಿ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರಸನ್ನ ಕುಮಾರ್ ಹಾಗೂ ವಲಯಾಧಿಕಾರಿ ಶಿವರಾಮ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.