ಕೂಡ್ಲೂರು ಚೆಟ್ಟಳ್ಳಿಯಲ್ಲಿ ಕಾಡಾನೆ ದಾಳಿ: ಮನೆ ಜಖಂ
Update: 2016-08-03 22:24 IST
ಮಡಿಕೇರಿ, ಆ.3 : ಸಿದ್ದಾಪುರ ಸಮೀಪದ ಕೂಡ್ಲೂರು ಚೆಟ್ಟಳ್ಳಿಯಲ್ಲಿ ಕಾಡಾನೆ ದಾಳಿಯಿಂದ ಮನೆಯೊಂದು ಜಖಂಗೊಂಡಿರುವ ಘಟನೆ ನಡೆದಿದೆ.
ಚೆಟ್ಟಳ್ಳಿಯ ಆರೋಗ್ಯ ಕೇಂದ್ರದಲ್ಲಿ ಆಶಾ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸುತ್ತಿರುವ ಸುನೀತಾ ಅವರ ಮನೆ ಮೇಲೆ ಮುಂಜಾನೆ ಕಾಡಾನೆ ದಾಳಿ ಮಾಡಿದೆ.
ಆನೆ ದಾಳಿಯಿಂದ ಮನೆಯ ಹಿಂಬದಿಯ ಶೆಡ್‌ನ ಮೇಲ್ಚಾವಣಿ ಸಂಪೂರ್ಣ ಜಖಂ ಗೊಂಡಿದ್ದು, ಶೀಟ್ ನೆಲಸಮವಾಗಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಈ ಘಟನೆ ಸಂಭವಿಸಿದ್ದು, ಹೆಚ್ಚಿನ ಅನಾಹುತ ತಪ್ಪಿದೆ. ಅಂದಾಜು 50 ಸಾವಿರ ರೂ. ನಷ್ಟ ಸಂಭವಿಸಿದೆ ಎಂದು ಸುನೀತಾ ತಿಳಿಸಿದ್ದಾರೆ.