ಮುನ್ನೆಚ್ಚರಿಕೆಯಿಂದ ಮಾರಕ ರೋಗಗಳ ನಿಯಂತ್ರಣ ಸಾಧ್ಯ: ರಮೇಶ್

Update: 2016-08-04 16:54 GMT

ಕುಶಾಲನಗರ, ಆ.4: ಕ್ಯಾನ್ಸರ್ ಮಾರಣಾಂತಿಕ ರೋಗ ನಿಜ, ಆದರೆ ಮುನ್ನೆಚ್ಚರಿಕೆ ವಹಿಸಿದರೆ ಗುಣಮುಖರಾಗುವುದು ಖಚಿತ. ಗ್ರಾಮಾಂತರ ಜನರಿಗೆ ಯಾವುದರ ಪರಿಣಾಮದಿಂದ ಈ ರೋಗ ಬರುತ್ತದೆಂಬ ಕಲ್ಪನೆ ಇರುವುದಿಲ್ಲ. ಆದ್ದರಿಂದ ಇದರ ಬಗ್ಗೆ ಅರಿವು ಮೂಡಿಸುವುದರೊಂದಿಗೆ ಉಚಿತ ತಪಾಸಣಾ ಶಿಬಿರವನ್ನು ರೋಟರಿ ಸಂಸ್ಥೆ, ಪ್ರೋಬ್ಸ್ ಕ್ಲಬ್ ಕುಶಾಲನಗರ ಇವರ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ವಿಕ್ರಂ ಆಸ್ಪತ್ರೆಯ ಮ್ಯಾನೇಜರ್ ರಮೇಶ್ ಹೇಳಿದ್ದಾರೆ.

ರೇಡಿಯೆಂಟ್ ಕ್ಯಾನ್ಸರ್ ಆಸ್ಪತ್ರೆ, ವಿಕ್ರಂ ಆಸ್ಪತ್ರೆ ಮೈಸೂರು ಮತ್ತು ರೋಟರಿ ಸಂಸ್ಥೆ, ಪ್ರೋಬ್ಸ್ ಕ್ಲಬ್ ಕುಶಾಲನಗರ ಇವರ ಸಹಯೋಗದಲ್ಲಿ ಉಚಿತ ಕ್ಯಾನ್ಸರ್ ಹಾಗೂ ಹೃದಯ ರೋಗ ತಪಾಸಣಾ ಶಿಬಿರವನ್ನು ಉದ್ದೇಶಿಸಿ ಮಾತನಾಡಿದರು.

ಡಾ. ಅಶ್ವಿನಿ ಮಾತನಾಡಿ, ಹೃದಯಾಘಾತದ ಲಕ್ಷಣಗಳ ಬಗ್ಗೆ ತಿಳಿಸುತ್ತಾ, ಪ್ರತಿಯೊಬ್ಬರು ತಮ್ಮ-ತಮ್ಮ ಆರೋಗ್ಯದ ಮೇಲೆ ನಿಗಾವಹಿಸಿಕೊಳ್ಳಬೇಕಾಗಿದೆ. ಪ್ರತಿ ತಿಂಗಳು ಹೃದಯದ ರಕ್ತ ಪರಿಚಲನೆಗಳ ವಿಚಾರವಾಗಿ ಗಮನ ಹರಿಸಿ, ಸಂಬಂಧ ಪಟ್ಟ ವೈದ್ಯರ ಬಳಿ ತೆರಳಿ ಪರಿಶೀಲಿಸಿಕೊಂಡಾಗ ಹೃದಯಕ್ಕೆ ಉಂಟಾಗಬಹುದಾದ ತೊಂದರೆಗಳನ್ನು ತಡೆಗಟ್ಟಬಹುದಾಗಿದೆ. ಅಲ್ಲದೆ ಹೃದಯಕ್ಕೆ ಹಿತ ನೀಡುವ ಹಣ್ಣು-ಹಂಪಲುಗಳನ್ನು ಸೇವಿಸುತ್ತಾ ಬಂದಲ್ಲಿ ಉತ್ತಮ ರೀತಿಯಲ್ಲಿ ರಕ್ತದ ಒತ್ತಡವನ್ನು ಕಾಯ್ದುಕೊಳ್ಳಬಹುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಹೆಲ್ತ್ ಕೇರ್ ಎಕ್ಸಿಕ್ಯೂಟಿವ್‌ನ ಸಂತೋಷ್ ವಿ, ಪ್ರೋಬ್ಸ್ ಕ್ಲಬ್ ಅಧ್ಯಕ್ಷ ದೇವಯ್ಯ, ಡಾಕ್ಟರ್‌ಗಳಾದ ನವೀನ್, ಕಮಲೇಶ್, ತೇಜಸ್ ಹಾಗೂ ರೋಟರಿ ಸಂಸ್ಥೆ ಕುಶಾಲನಗರದ ಶೋಭಾ, ಉಪಾಧ್ಯಕ್ಷೆ ಸುನೀತಾ, ಸತೀಶ್, ಪ್ರಕಾಶ್, ಮಹೇಶ್, ಪ್ರೇಮ್‌ಚಂದ್ರ ಮತ್ತಿತರ ಸದಸ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News