ದಾರಿ ನೀಡುವ ಧಾವಂತಕ್ಕೆ ಶಾಲಾ ಬಸ್ ಪಲ್ಟಿ: ಮಗು ಮೃತ್ಯು
ತರೀಕೆರೆ, ಆ.4: ಶಾಲಾ ವಾಹನ ಮಗುಚಿ ಎಲ್‌ಕೆಜಿಯ ವಿದಾ ್ಯರ್ಥಿ ಮೃತ ಪಟ್ಟಿದ್ದು, ಸುಮಾರು 10 ವಿದ್ಯಾರ್ಥಿಗಳು ಗಂಭೀರ ಗಾಯ ಗೊಂಡಿರುವ ಘಟನೆ ಅಜ್ಜಂಪುರ ಹೋಬಳಿಯ ನಾರಾಯಣ ಪುರ ಬಳಿಯ ಹೆಬ್ಬೂರು ಎಂಬಲ್ಲಿ ಗುರುವಾರ ಸಂಭವಿಸಿದೆ.
ದುರ್ಘಟನೆಯಲ್ಲಿ ಸಾಂದೀಪನಿ ಪ್ರಾಥಮಿಕ ಶಾಲೆಯಲ್ಲಿ ಎಲ್‌ಕೆಜಿ ಕಲಿಯುತ್ತಿರುವ ಹಿರೇನಲ್ಲೂರಿನ ಪ್ರಮೋದ್ ಮತ್ತು ಪೂರ್ಣಿಮಾ ದಂಪತಿಯ 4 ವರ್ಷದ ಮಗು ಪ್ರೀತಮ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ಸುಮಾರು 10 ವಿದ್ಯಾರ್ಥಿಗಳು ಗಂಭೀರ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಗಾಯಗೊಂಡವರನ್ನು ಸಮೀಪದ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆಯ ವಿವರ: ಇಂದು ಸಂಜೆ ಸಾಂದೀಪನಿ ಪ್ರಾಥಮಿಕ ಶಾಲೆಯ ಮಕ್ಕಳನ್ನು ಹೇರಿಕೊಂಡು ಬರುತ್ತಿದ್ದ ಶಾಲಾ ಬಸ್ ನಾರಾಯಣ ಪುರ ಸಮೀಪದ ಹೆಬ್ಬೂರು ಎಂಬಲ್ಲಿ ಎದುರಿನಿಂದ ಬಂದ ಮತ್ತೊಂದು ಬಸ್‌ಗೆ ದಾರಿ ನೀಡುವ ಸಲುವಾಗಿ ಚಾಲಕ ಬಸ್‌ನ್ನು ರಸ್ತೆಯ ಬದಿಗೆ ಇಳಿಸಿದ್ದ ಎನ್ನಲಾಗಿದೆ. ಭದ್ರಾ ನದಿಯ ಮೇಲ್ದಂಡೆ ಕುಸಿಯದಂತೆ ರಸ್ತೆಯ ಇಕ್ಕೆಲಗಳಿಗೆ ಹಾಕಲಾಗಿದ್ದ ಮಣ್ಣಿನಲ್ಲಿ ಶಾಲಾ ವಾಹನ ಹೂತು ಹೋಗಿ ಪಲ್ಟಿ ಹೊಡೆದು ಶಾಲಾ ಬಸ್‌ನಲ್ಲಿದ್ದ ಪ್ರೀತಮ್‌ನ ತಲೆಗೆ ಕಬ್ಬಿಣದ ರಾಡ್ ಬಲವಾಗಿ ಬಡಿದ ಪರಿಣಾಮ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ. ಅಲ್ಲದೆ, ಬಸ್‌ನಲ್ಲಿದ್ದ ಸುಮಾರು 10 ವಿದ್ಯಾರ್ಥಿಗಳಿಗೂ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಅವರೆಲ್ಲರನ್ನೂ ಸಮೀಪದ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ಕೊಡಿಸ ಲಾಗುತ್ತಿದೆ ಎಂದು ತಿಳಿದು ಬಂದಿದೆ.
ಈ ಸಂಬಂಧ ಅಜ್ಜಂಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.