×
Ad

15 ಮಂದಿಯ ವಿರುದ್ಧ ಪ್ರಕರಣ ದಾಖಲು

Update: 2016-08-04 23:44 IST

ಭಟ್ಕಳ, ಆ. 4: ಅರೆನಗ್ನ ಗೊಳಿಸಿ ಪೊಲೀಸರ ಸಮ್ಮುಖದಲ್ಲಿ ಶೇಖರ್ ನಾಯ್ಕ ಎಂಬವರಿಗೆ ಥಳಿಸಿದ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಸಂಘಪರಿವಾರ ಸಂಘಟನೆಯ 15 ಕಾರ್ಯಕರ್ತರ ವಿರುದ್ಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 ಪ್ರಕರಣ ಸಂಬಂಧ ಚೌಥನಿಯ ಕೇಶವ ಸಂಕಪ್ಪ ನಾಯ್ಕ, ಮಂಜು, ನಾಗರಾಜ್ ಎಂಬವರ ವಿರುದ್ಧ ಐಪಿಸಿ ಕಲಂ 107, 323, 324, 504, 341ರ ಅನ್ವಯ ದೂರು ದಾಖಲಿಸಿಕೊಳ್ಳಲಾಗಿದ್ದು, ಉಳಿದ 12 ಆರೋಪಿಗಳ ವಿರುದ್ಧ 107 ಕಲಂ ನಂತೆ ಪ್ರಕರಣ ದಾಖಲಿಸಿಲಾಗಿದೆ ಎಂದು ನಗರ ಠಾಣೆಯ ಪಿಎಸ್ಸೈ ರೇವತಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News