ಓರ್ವ ನಾಪತ್ತೆ; 7ಮೀನುಗಾರರು ಪಾರು
ಭಟ್ಕಳ, ಆ.4: ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕಾ ಹಡಗು ಮುಳುಗಡೆ ಯಾಗಿ ಓರ್ವ ಮೀನುಗಾರ ನಾಪತ್ತೆಯಾಗಿದ್ದು, ಏಳು ಮಂದಿ ದಡ ಸೇರಿದ ಘಟನೆ ಗುರುವಾರ ನಡೆದಿದೆ.
ಸಮುದ್ರದಲ್ಲಿ ಕಾಣೆಯಾದ ವ್ಯಕ್ತಿಯನ್ನು ಮಂಜುನಾಥ್ ಬಾಬು ಖಾರ್ವಿ(35) ಎಂದು ಗುರುತಿಸಲಾಗಿದ್ದು, ಪಾಂಡುರಂಗ ನಾಗಪ್ಪಖಾರ್ವಿ(42), ಕೃಷ್ಣ ಚಂದ್ರಕಾಂತ್ ಖಾರ್ವಿ(26), ನಾಗೇಶ್ ಬಾಬು ಖಾರ್ವಿ(32), ರಮೇಶ್ ಮಾಸ್ತಿ ಖಾರ್ವಿ(38) ಮಾದೇವ್ ಕೃಷ್ಣ ಖಾರ್ವಿ(35), ಅಜೀತ್ ಗೋವಿಂದ್ ಖಾರ್ವಿ(26) ಹಾಗೂ ಸುಭಾಷ್ ಕೃಷ್ಣ ಖಾರ್ವಿ(32) ಎಂಬವರು ದಡ ಸೇರಿದ್ದಾರೆ. ಇವರೆಲ್ಲರೂ ಭಟ್ಕಳದ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಲಭ್ಯ ಮಾಹಿತಿಯಂತೆ ಎಂಟು ಜನ ಮೀನುಗಾರರು ಗುರು ಅನುಗ್ರಹ ಎಂಬ ಬೋಟ್‌ನಲ್ಲಿ ಬುಧವಾರದಂದು ಮೀನುಗಾರಿಕೆಗೆ ತೆರಳಿದ್ದರು. ಸಂಜೆ 4:30ರ ಸುಮಾರು ಹವಾಮಾನ ವೈಪರೀತ್ಯದಿಂದಾಗಿ ಹಡಗು ಸಮುದ್ರ ಮಧ್ಯದಲ್ಲಿ ಮುಳುಗಿತು ಎನ್ನಲಾಗಿದೆ. 8 ಜನ ಮೀನುಗಾರರು ಸಾವು ಮತ್ತು ಬದುಕಿನ ನಡುವೆ ಹೋರಾಟ ನಡೆಸಿ ದೂರದಲ್ಲಿದ್ದ ಮತ್ತೊಂದು ಬೋಟ್‌ನ ಸಹಾಯ ಪಡೆದುಕೊಂಡರು ಎನ್ನಲಾಗಿದ್ದು, ಈ ಎಂಟು ಜನರಲ್ಲಿ ಮಂಜುನಾಥ್ ಖಾರ್ವಿ ಕಾಣೆಯಾಗಿದ್ದಾಗಿ ತಿಳಿದು ಬಂದಿದೆ.