×
Ad

ತೆಂಗು ಬೆಳೆವಿಮೆ ಯೋಜನೆ: ನ್ಯೂನತೆ ಸರಿಪಡಿಸಲು ಮುದ್ದಹನುಮೇಗೌಡ ಒತ್ತಾಯ

Update: 2016-08-05 09:09 IST

ಹೊಸದಿಲ್ಲಿ, ಆ.5: ಹವಾಮಾನ ಆಧರಿತ ವಿಮಾ ಯೋಜನೆಯಡಿ ತೆಂಗು ಬೆಳೆಗಾರರು ನೀಡಬೇಕಿರುವ ಕಂತು ಅವೈಜ್ಞಾನಿಕವಾಗಿದ್ದು, ಈ ನ್ಯೂನತೆಗಳನ್ನು ಕೂಡಲೇ ಸರಿಪಡಿಸಿ ತೆಂಗುಬೆಳೆಗಾರರಿಗೆ ಅನುಕೂಲವಾಗುಂತೆ ವಿಮಾ ಯೋಜನೆ ಮಾರ್ಪಡಿಸಬೇಕು ಎಂದು ಸಂಸದ ಎಸ್‌ಪಿ.ಮುದ್ದಹನುಮೇಗೌಡ ಒತ್ತಾಯಿಸಿದರು.

ಲೋಕಸಭೆಯ ಕಲಾಪದಲ್ಲಿ ಗುರುವಾರ ಶೂನ್ಯವೇಳೆಯಲ್ಲಿ ಮಾತನಾಡಿದ ಅವರು, ಒಂದು ಹೆಕ್ಟೇರ್ ತೆಂಗಿನ ಬೆಳೆಗೆ 57500 ರೂ. ವಿಮಾ ಹಣಕ್ಕೆ ತೆಂಗುಬೆಳೆಗಾರರು ಶೇ.5ರಷ್ಟು ವಿಮಾಕಂತು ನೀಡಬೇಕಿದೆ. ಇದರ ಜೊತೆಗೆ ಕೇಂದ್ರ ಸರ್ಕಾರ ಕೇವಲ 868 ರೂ. ಹಾಗೂ ರಾಜ್ಯ ಸರ್ಕಾರ 868 ರೂ. ಪಾವತಿಸುತ್ತಿದೆ. ಆದರೆ ಪ್ರತಿಶತ 8.02ರಷ್ಟು ವಿಮೆ ಹಣವನ್ನು ಪಾವತಿಸಲಾಗುತ್ತಿದೆ. ಆದರೆ ತೆಂಗು ಬೆಳೆಗಾರರು ಶೇ.5ರಷ್ಟು ಹಣವನ್ನು ಪಾವತಿಸಬೇಕಿದೆ. ಆದರೆ ಕೃಷಿ ಇಲಾಖೆಯ ವಿಮಾ ಯೋಜನೆಯಡಿಯಲ್ಲಿ ಶೇ.2ರಷ್ಟು ಹಣವನ್ನು ಮಾತ್ರ ಪಾವತಿಸಬೇಕಿದೆ. ಇದರ ಜೊತೆಗೆ ತೆಂಗು ಬೆಳೆಗಾರರು ವಿಮಾ ಹಣವನ್ನು ಪಡೆಯಲು ನಿಗದಿಪಡಿಸಿರುವ ಮಾನದಂಡ ಬಹಳ ಅವೈಜ್ಞಾನಿಕವಾಗಿದೆ. ಕೇವಲ 6 ತಿಂಗಳೊಳಗೆ 90 ದಿನಗಳು ಮಳೆ ಬಾರದೇ ತೊಂದರೆಯಾದರೆ ಅಥವಾ ಒಂದು ವಾರ ಸತತ 15 ಮಿ.ಮಿ. ಮಳೆಯಿಂದ ತೆಂಗಿನ ಬೆಳೆ ಕೊಳೆಯುವಷ್ಟು ಹಾಳಾದರೆ ಮಾತ್ರ ವಿಮೆ ಹಣವನ್ನು ಪಡೆಯಬಹುದಾಗಿದೆ. ರೈತರು ಹೆಚ್ಚಿನ ಹಣವನ್ನು ವಿಮಾ ಯೋಜನೆಗೆ ತೊಡಗಿಸಬೇಕಿದೆ. ವಿಮಾ ಹಣ ಪಡೆಯಲು ನಿಗದಿಪಡಿಸಿರುವ ಮಾನದಂಡ ರೈತ ವಿರೋಧಿ ಹಾಗೂ ಅವೈಜ್ಞಾನಿಕವಾಗಿದೆ. ಕೇಂದ್ರ ಸರ್ಕಾರವು ಈ ನ್ಯೂನತೆಗಳನ್ನು ಸರಿಪಡಿಸಿಕೊಳ್ಳುವಂತೆ ನಿರ್ದೇಶನ ನೀಡಬೇಕೆಂದು ಸ್ಪೀಕರ್ ಅವರಿಗೆ ಸಂಸದರು ಮನವಿ ಮಾಡಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News