ಹಿರಿಯ ನಟ ಸಂಕೇತ್ ಕಾಶಿ ನಿಧನ
Update: 2016-08-06 18:28 IST
ಬೆಂಗಳೂರು , ಆ.6: ಹಿರಿಯ ನಟ ಸಂಕೇತ್ ಕಾಶಿ (50) ನಗರದ ಮೂಡಲಪಾಳ್ಯದ ಆಸ್ಪತ್ರೆಯಲ್ಲಿ ಇಂದು ನಿಧನರಾದರು.
ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಕಾಶಿ ಅವರು ಮೂರು ದಿನಗಳ ಹಿಂದೆ ಮೂಡಲಪಾಲ್ಯದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅಪರಾಹ್ನ 3:30ಕ್ಕೆ ಕೊನೆಯುಸಿರೆಳೆದರು ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.
ಉಲ್ಟಾಪಲ್ಟಾ, ಮಾಂಗಲ್ಯಂ ತಂತು ನಾನೇನ, ಕಿರಾತಕ ಸೇರಿದಂತೆ 115 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು.