ಇಂದು ರಾಜ್ಯಮಟ್ಟದ ಕಾರ್ಯಾಗಾರ
ದಾವಣಗೆರೆ,ಆ.6: ಮುಸ್ಲಿಮ್ ಚಿಂತಕರ ಚಾವಡಿಯ ವತಿಯಿಂದ ನಗರದ ರೋಟರಿ ಬಾಲಭವನದಲ್ಲಿ ಆ. 7 ರಂದು ಸಾಚಾರ್ ವರದಿಯ ಕುರಿತು ರಾಜ್ಯಮಟ್ಟದ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಅಂ
ು ಬೆಳಗ್ಗೆ 10:30 ಕ್ಕೆ ಕಾರ್ಯಾಗಾರವನ್ನು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ.ಸಿ.ಎಸ್.ದ್ವಾರಕಾನಾಥ್ ಉದ್ಘಾಟನೆ ಮಾಡಲಿದ್ದು, ಖ್ಯಾತ ಸಾಹಿತಿ ಭಾನು ಮುಷ್ತಾಕ್ ಅಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ. ಪ್ರೊ.ತರಿಕೇರೆ, ವಾರ್ತಾ ಭಾರತಿಯ ಪ್ರಧಾನ ಸಂಪಾದಕರಾದ ಅಬ್ದುಸ್ಸಲಾಂ ಪುತ್ತಿಗೆ, ರಂಝಾನ್ ದರ್ಗಾ, ಕಾರ್ಯದರ್ಶಿ ಗಳಾದ ಪೀರ್‌ಬಾಷಾ, ಮುನೀರ್ ಕಾಟಿಪಳ್ಳ ಮತ್ತಿತರರು ಭಾಗವಹಿಸಲಿದ್ದಾರೆ. ಈ ಕಾರ್ಯಾಗಾರದಲ್ಲಿ ಮುಸ್ಲಿಮ್‌ರ ಸಾಮಾಜಿಕ, ಆರ್ಥಿಕ, ಹಿಂದುಳಿದಿರುವಿಕೆಯನ್ನು ಗುರುತಿಸಿ ಸಮಾನ ಅವಕಾಶಗಳಿಗಾಗಿ ಹಾಗೂ ಮುಸ್ಲಿಮ್ ಸಮುದಾಯಗಳ ಏಳಿಗೆಗಾಗಿ ಪ್ರಜಾಸತ್ತಾತ್ಮಕವಾಗಿ ಧ್ವನಿ ಎತ್ತುವ, ಸಮುದಾಯದಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ರಾಜ್ಯಮಟ್ಟದ ಕಾರ್ಯಾಗಾರವನ್ನು ಆಯೋಜಿಸಲಾಗಿದೆ ಎಂದು ಕಾರ್ಯಾಗಾರದ ಉಸ್ತುವಾರಿ ಹೊತ್ತಿರುವ ಚಾವಡಿಯ ರಾಜ್ಯ ಕಾರ್ಯದರ್ಶಿಗಳಾದ ಅನೀಸ್‌ಪಾಷಾ, ಕಲೀಂ ಪಾಷಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ