ಮುಸ್ಲಿಮ್ ವಿದ್ಯಾರ್ಥಿ ನಿಲಯಕ್ಕೆ ಅಬ್ದುಲ್ ಜಬ್ಬಾರ್ ಭೇಟಿ
ದಾವಣಗೆರೆ,ಆ.6: ರಾಜ್ಯ ವಕ್ಫ್ ಮಂಡಳಿಯ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಮುಸ್ಲಿಮ್ ಎಜುಕೇಶನ್ ಫಂಡ್ ಅಸೋಸಿಯೇಷನ್ ವತಿಯಿಂದ ನಿರ್ವಹಿಸಲ್ಪಡುತ್ತಿರುವ ನಗರದ ಮುಸ್ಲಿಮ್ ಹಾಸ್ಟೆಲ್‌ಗೆ ರಾಜ್ಯ ವಿಧಾನ ಪರಿಷತ್ ಸದಸ್ಯ ಕೆ. ಅಬ್ದುಲ್ ಜಬ್ಬಾರ್ ಭೇಟಿ ನೀಡಿ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿದರು.
ನಿರ್ಮಾಣ ಹಂತದ ಡೈನಿಂಗ್‌ಹಾಲ್ ಕಾಮಗಾರಿ, ಅಹ್ಮದ್ ರಝಾ ಬ್ಲಾಕ್‌ನ ಪ್ರಥಮ ಮಹಡಿಯ ಕಾಮಗಾರಿ ಮತ್ತು ಟಿಪ್ಪುಸುಲ್ತಾನ್ ಬ್ಲಾಕ್‌ನಲ್ಲಿ ನಡೆಸಬೇಕಾಗಿರುವ ಕಾಮಗಾರಿಗಳ ಪರಿಶೀಲನೆ ನಡೆಸಿದರು.
ಹಾಸ್ಟೆಲ್ ಕೊಠಡಿಗೆ ಭೇಟಿ ನೀಡಿ ಸೌಲಭ್ಯಗಳ ಪರಿಶೀಲನೆ ನಡೆಸಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ನಂತರ ಮುಸ್ಲಿಮ್ ಹಾಸ್ಟೆಲ್‌ನ ವ್ಯವಸ್ಥಾಪಕರು, ಸಿಬ್ಬಂದಿ ಮತ್ತು ಕಾಮಗಾರಿ ನಿರ್ವಹಿಸುತ್ತಿರುವ ಇಂಜಿನಿಯರ್‌ಗಳ ಸಭೆ ನಡೆಸಿ ಆದಷ್ಟು ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಿ ವಿದ್ಯಾರ್ಥಿಗಳ ಬಳಕೆಗೆ ಒದಗಿಸುವಂತೆ ಸೂಚಿಸಿದರು. ಡೈನಿಂಗ್ ಹಾಲ್ ಕಾಮಗಾರಿಯನ್ನು ಶಾಸಕ ಶಾಮನೂರು ಶಿವಶಂಕರಪ್ಪರವರು 5 ಲಕ್ಷ ರೂ. ಅನುದಾನ, ವಿಧಾನ ಪರಿಷತ್ ಸದಸ್ಯ ಕೆ. ಅಬ್ದುಲ್ ಜಬ್ಬಾರ್ 5 ಲಕ್ಷ ರೂ. ಹಾಗೂ ಸಿಂಡಿಕೇಟ್ ಬ್ಯಾಂಕ್‌ನ 8 ಲಕ್ಷ ರೂ. ಅನುದಾನಗಳಿಂದ ನಡೆಸಲಾಗುತ್ತಿದೆ ಎಂದರು.
ಮುಸ್ಲಿಮ್ ಹಾಸ್ಟೆಲ್‌ಗೆ ರಾಜ್ಯ ವಕ್ಫ್ ಮಂಡಳಿಯಿಂದ ನೇಮಕವಾದ ನೂತನ ಆಡಳಿತಾಧಿಕಾರಿ ಮುಹಮ್ಮದ್ ಸಿರಾಜ್, ಜಿಲ್ಲಾ ವಕ್ಫ್ ಸಲಹಾ ಸಮಿತಿ ಉಪಾಧ್ಯಕ್ಷ ಎಂ.ಎನ್. ಸಮೀವುಲ್ಲಾ, ಜಿಲ್ಲಾ ವಕ್ಫ್ ಅಧಿಕಾರಿ ಹಝ್ರತ್ ಅಲಿ, ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಆರಿಫ್‌ಖಾನ್, ನಿವೃತ್ತ ವಕ್ಫ್ ನಿರೀಕ್ಷಕ ನಸ್ರುಲ್ಲಾ, ಜಿಲ್ಲಾ ವಕ್ಫ್ ಸಲಹಾ ಸಮಿತಿ ಸದಸ್ಯ ಬಶೀರ್ ಖಾನ್, ಮುಹಮ್ಮದ್ ಸಾದಿಕ್, ಜಿಲ್ಲಾ ಪಿಂಜಾರ,ನದಾಫ್ ಸಂಘದ ಅಧ್ಯಕ್ಷ ಅಯಾಜ್ ಹುಸೈನ್, ಮುಸ್ಲಿಮ್ ಹಾಸ್ಟೆಲ್ ವ್ಯವಸ್ಥಾಪಕ ಲಿಯಾಖತ್ ಅಲಿ, ಕಾಮಗಾರಿ ಇಂಜಿನಿಯರ್ ಇಕ್ರಮುಲ್ಲಾ, ಶಿವಣ್ಣ ಮತ್ತಿತರರು ಉಪಸ್ಥಿತರಿದ್ದರು.