‘ಡೇಂಜರ್ ರಸ್ತೆ’ ಗೆ ಕಾಯಕಲ್ಪನೀಡಲು ಮುಂದಾದ ಇಲಾಖೆ
ಶಿವಮೊಗ್ಗ, ಆ. 6: ನಾಗರಿಕ ವಲಯದಲ್ಲಿ ‘ಡೇಂಜರ್ ರಸ್ತೆ’ಯೆಂದೇ ಕುಖ್ಯಾತಿಯಾಗಿರುವ ಶಿವಮೊಗ್ಗ-ರಾಮನಗರ ಜಿಲ್ಲಾ ಹೆದ್ದಾರಿಯ ನಗರ ವ್ಯಾಪ್ತಿಯ ಭಾಗದಲ್ಲಿನ ಅವ್ಯವಸ್ಥೆ ಸರಿಪಡಿಸಲು ಲೋಕೋಪಯೋಗಿ ಇಲಾಖೆ ಮುಂದಾಗಿದೆ. ಇದು ಸ್ಥಳೀಯ ನಾಗರಿಕರು ಹಾಗೂ ವಾಹನ ಸವಾರರಲ್ಲಿ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ. ಪಿಡಬ್ಲ್ಯೂಡಿ ಇಲಾಖೆ ಶಿವಮೊಗ್ಗ- ಚಿತ್ರದುರ್ಗ-ದಾವಣಗೆರೆ ಜಿಲ್ಲೆಗಳ ಅಧೀಕ್ಷಕ ಇಂಜಿನಿಯರ್ ಬಿ.ಎಸ್.ಬಾಲಕೃಷ್ಣರವರ ಸೂಚನೆಯ ಮೇರೆಗೆ ಶನಿವಾರ ಬೆಳಗ್ಗೆ ಸ್ಥಳೀಯ ಪಿಡಬ್ಲ್ಯೂಡಿ ಇಲಾಖೆಯ ವಿಶೇಷ ವಿಭಾಗದ ಅಧಿಕಾರಿಗಳ ತಂಡವು, ರಸ್ತೆಯ ಅಪಾಯಕಾರಿ ಸ್ಥಳಗಳಿಗೆ ಭೇಟಿಯಿತ್ತು ಪರಿಶೀಲನೆ ನಡೆಸಿದರು.ಈ ವೇಳೆ ಸಹಾಯಕ ಕಾರ್ಯಪಾಲಕ ಅಭಿಯಂತರ (ಎ.ಇ.ಇ.) ಶಿವಮಲ್ಲು, ಸಹಾಯಕ ಅಭಿಯಂತರ ಜಯಪ್ರಕಾಶ್ ಮೊದಲಾದವರಿದ್ದರು. ಸಹ್ಯಾದ್ರಿ ಬಡಾವಣೆ ಹಾಗೂ ಪ್ರೆಸ್ ಕಾಲನಿಯ ಬಳಿ ಅಪಾಯಕಾರಿ ಸ್ಥಿತಿಯಲ್ಲಿರುವ ಸೇತುವೆಗಳ ಪರಿಶೀಲನೆಯನ್ನು ಅಧಿಕಾರಿಗಳ ತಂಡ ನಡೆಸಿತು. ಈ ವೇಳೆ ಜಿಲ್ಲಾ ಕಾಂಗ್ರೆಸ್ ಮುಖಂಡ ಜಿ.ಎಂ.ಸುರೇಶ್‌ಬಾಬು ಹಾಗೂ ಸ್ಥಳೀಯ ನಿವಾಸಿಗಳು ಮಾತನಾಡಿ, ಈ ಎರಡು ಸೇತುವೆಗಳು ಶಿಥಿಲಾವಸ್ಥೆಯಲ್ಲಿದ್ದು ಕಿರಿದಾಗಿವೆ. ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಆದರೆ ಕೆಲ ಸರಕು-ಸಾಗಣೆ ವಾಹನ ಚಾಲಕರು ಮಿತಿಮೀರಿದ ವೇಗದಲ್ಲಿ ವಾಹನ ಚಲಾಯಿಸುತ್ತಿದ್ದು. ಇದರಿಂದ ಈ ಎರಡೂ ಸ್ಥಳಗಳಲ್ಲಿ ಅಪಘಾತಗಳು ಸರ್ವೇಸಾಮಾನ್ಯ ಎಂಬಂತಾಗಿದೆ. ಈಗಾಗಲೇ ಹಲವು ಅಮಾಯಕರು ಅಪಘಾತಗಳಿಗೆ ಬಲಿಯಾಗಿದ್ದು, ಮತ್ತೆ ಕೆಲವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳ ಗಮನ ಸೆಳೆದರು.
ಎ.ಇ.ಇ. ಶಿವಮಲ್ಲುರವರು ಮಾತನಾಡಿ, ಸಹ್ಯಾದ್ರಿ ಬಡಾವಣೆ ಹಾಗೂ ಪ್ರೆಸ್ ಕಾಲನಿ ಬಳಿಯಿರುವ ಸೇತುವೆಗಳ ಎರಡು ಬದಿಗಳಲ್ಲಿ ವೈಜ್ಞಾನಿಕ ರೀತಿಯಲ್ಲಿ ರಸ್ತೆ ಉಬ್ಬುಗಳನ್ನು ಕಾಲಮಿತಿಯಲ್ಲಿ ಹಾಕಲಾಗುವುದು. ಸೂಚನಾ ಫಲಕ, ರಿಫ್ಲೆಕ್ಟರ್ ಸೇರಿದಂತೆ ವಾಹನ ಸವಾರರಿಗೆ ಎಚ್ಚರಿಕೆ ನೀಡುವ ಸಂದೇಶದ ಫಲಕ ಅಳವಡಿಸಲಾಗುವುದು ಎಂದು ಭರವಸೆ ನೀಡಿದರು. ಅಗತ್ಯ ಕ್ರಮ: