ಕೆಪಿಎಸ್ ಸಿ ನೂತನ ಅಧ್ಯಕ್ಷರಾಗಿ ಟಿ.ಶ್ಯಾಮ್ ಭಟ್ ನೇಮಕ
Update: 2016-08-07 12:37 IST
ಬೆಂಗಳೂರು, ಆ.7: ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್ ಸಿ) ದ ನೂತನ ಅಧ್ಯಕ್ಷರಾಗಿ ಟಿ.ಶ್ಯಾಮ್ ಭಟ್ ನೇಮಕಗೊಂಡಿದ್ದಾರೆ.
ರಾಜ್ಯಪಾಲ ವಜೂಭಾಯ್ ರುಡಾ ಭಾಯಿ ವಾಲಾ ಅವರು ಹಿರಿಯ ಐಎಎಸ್ ಅಧಿಕಾರಿ ಶ್ಯಾಮ್ ಭಟ್ ಅವರನ್ನು ಕೆಪಿಎಸ್ ಸಿ ಅಧ್ಯಕ್ಷರನ್ನಾಗಿ ನೇಮಕಗೊಳಿಸಿ ಆದೇಶ ಹೊರಡಿಸಿದ್ದಾರೆ.
ಟಿ. ಶ್ಯಾಮ್ ಭಟ್ ಅವರನ್ನು ನೇಮಕಗೊಳಿಸಲು ಲೋಕಾಯುಕ್ತರು ಕ್ಲೀನ್ ಚಿಟ್ ನೀಡಿದ್ದಾರೆ.