ಕೃಷಿ ಇಲಾಖೆಯಿಂದ ಬಿತ್ತನೆ ರಾಗಿ ವಿತರಣೆ
ಕಡೂರು, ಆ.7: ಕೃಷಿ ಇಲಾಖೆ ನೀಡುವ ಬಿತ್ತನೆ ರಾಗಿಯನ್ನು ಅಧಿಕಾರಿಗಳು ಮತ್ತು ರೈತ ಸಂಪರ್ಕ ಕೇಂದ್ರದ ಮೂಲಕ ಮಾಹಿತಿ ನೀಡದ್ದರಿಂದ ಸಮರ್ಪಕವಾಗಿ ಬಿತ್ತನೆ ರಾಗಿ ವಿತರಣೆ ನಡೆಯದೆ ಇದ್ದು, ಅಧಿಕಾರಿಗಳನ್ನು ಪ್ರಶ್ನಿಸಿದಾಗ 250 ಬ್ಯಾಗ್ ರಾಗಿಯನ್ನು ಅಧಿಕಾರಿಗಳು ನೀಡಿದ್ದಾರೆ ಎಂದು ಸರಸ್ವತಿಪುರ ತಾಪಂ ಸದಸ್ಯ ಎಸ್.ಕೆ.ಚಂದ್ರಪ್ಪತಿಳಿಸಿದ್ದಾರೆ. ಸುಮಾರು 2 ತಿಂಗಳ ಹಿಂದೆಯೇ ಬಿತ್ತನೆ ರಾಗಿ ಬಂದಿದ್ದರೂ ಅಧಿಕಾರಿಗಳು ನೀಡದೆ ಇರುವುದರಿಂದ ಅವ್ಯವಹಾರದ ಶಂಕೆ ಮೂಡಿತ್ತು. ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರವು 5 ಕೆಜಿ ಬ್ಯಾಗ್‌ನ ಸುಮಾರು 250 ಪ್ಯಾಕೆಟ್ ಉಚಿತ ಬಿತ್ತನೆ ರಾಗಿಯನ್ನು ತಾಲೂಕಿನಾದ್ಯಂತ ಇರುವ ಎಲ್ಲಾ ಹೋಬಳಿಗಳಿಗೆ ಸಮರ್ಪಕವಾಗಿ ನೀಡಬೇಕಾಗಿತ್ತು ಎಂದರು.
ಆದರೆ ಕಸಬಾ ಹೋಬಳಿಯಲ್ಲಿ ವಿತರಣೆ ಮಾಡದೆ ರೂ.60ಕ್ಕೆ 5 ಕೆ.ಜಿ. ರಾಗಿಯ ಬ್ಯಾಗ್ ಮಾರಾಟ ಮಾಡಲಾಗಿತ್ತು ಎಂಬ ದೂರುಗಳು ಸರಸ್ವತಿಪುರ ಮತ್ತು ಸುತ್ತಮುತ್ತಲಿನ ಗ್ರಾಮಗಳ ರೈತರಿಂದ ಹೆಚ್ಚಾಗಿ ಕೇಳಿ ಬಂದಾಗ ಈ ಬಗ್ಗೆ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಉಚಿತ ಬಿತ್ತನೆ ರಾಗಿಯನ್ನು ಸರಸ್ವತಿಪುರ ಗ್ರಾಪಂಗೆ ಇತ್ತೀಚೆಗೆ ಕಳುಹಿಸಿ ವಿತರಣೆ ಮಾಡಿಸಲಾಗಿದೆ ಎಂದರು.
ಅಧಿಕಾರಿಗಳು ಸರಿಯಾಗಿ ರೈತರಿಗೆ ಸಂಪರ್ಕ ಕೇಂದ್ರಗಳ ಮೂಲಕ ಯಾವುದೇ ಮಾಹಿತಿಯನ್ನು ನೀಡದೆ, ಸರಕಾರವು ರೈತರಿಗೆ ನೀಡುವ ಬಿತ್ತನೆ ರಾಗಿಯನ್ನು ಹಣ ಪಡೆದು ಮಾರಾಟ ಮಾಡಿದ್ದನ್ನು ಪ್ರಶ್ನಿಸಿದಾಗ ಕೂಡಲೇ ಎಚ್ಚೆತ್ತುಕೊಂಡ ಅಧಿಕಾರಿಗಳು ಇಂದು ನೀಡಿದ್ದಾರೆ ಎಂದು ಎಸ್.ಕೆ.ಚಂದ್ರಪ್ಪ ಹೇಳಿದರು. ಇ
ನ್ನು ಮುಂದಾದರೂ ಸರಕಾರ ನೀಡುವ ಸವಲತ್ತನ್ನು ಸಮರ್ಪಕವಾಗಿ ರೈತರಿಗೆ ವಿತರಿಸಲಿ ಎಂದು ಅಧಿಕಾರಿಗಳಿಗೆ ಕಿವಿ ಮಾತು ಹೇಳಿದರು. ಈ ಸಂದರ್ಭ ಸರಸ್ಪತಿಪುರ ಪದ್ಮನಾಭ, ಪ್ರೇಮಣ್ಣ, ಲಕ್ಷ್ಮಪ್ಪ, ಜಯಣ್ಣ, ಆನಂದ ಮತ್ತು ಸುತ್ತಮುತ್ತಲಿನ ಹಳ್ಳಿಯವರು ಉಪಸ್ಥಿತರಿದ್ದು ರಾಗಿಯನ್ನು ಪಡೆದುಕೊಂಡರು.