×
Ad

ರೈಲಿಗೆ ತಲೆಕೊಟ್ಟು ತಾಯಿ, ಇಬ್ಬರು ಮಕ್ಕಳು ಆತ್ಮಹತ್ಯೆ

Update: 2016-08-09 22:02 IST

ಶಿವಮೊಗ್ಗ, ಆ.9: ಕೌಟುಂಬಿಕ ವಿಚಾರಕ್ಕಾಗಿ ಅಸಮಾಧಾನಗೊಂಡಿದ್ದ ಗೃಹಿಣಿಯೊಬ್ಬಳು ತನ್ನ ಇಬ್ಬರು ಪುತ್ರಿಯರ ಜೊತೆ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಹರಿಗೆ ಸಮೀಪದ ಹಾತಿ ನಗರದಲ್ಲಿ ನಿನ್ನೆ ಸಂಜೆ ಸಂಭವಿಸಿದೆ.

ಇಲ್ಲಿನ ಅಶೋಕ ನಗರದ ಎಆರ್‌ಬಿ ಕಾಲನಿಯಲ್ಲಿ ವಾಸಿಸುತ್ತಿದ್ದ ಉಮಾದೇವಿ ಪ್ರಭು(45), ಮಕ್ಕಳಾದ ಚೈತ್ರಾ(18) ಮತ್ತು ಸ್ವಾತಿ (16) ಆತ್ಮಹತ್ಯೆ ಮಾಡಿಕೊಂಡವರು.

ಆತ್ಮಹತ್ಯೆ ಮಾಡಿಕೊಂಡವರು ಅಕ್ಕಿ ವ್ಯಾಪಾರಿ ವಾಸುದೇವ ಪ್ರಭು ಎಂಬವರ ಪತ್ನಿ ಮತ್ತು ಪುತ್ರಿಯರು ಎಂದು ಗೊತ್ತಾಗಿದೆ. ನಿನ್ನೆ ಪತಿ ಮತ್ತು ಪತ್ನಿ ಮಧ್ಯೆ ಕೌಟುಂಬಿಕ ಕಲಹ ನಡೆದ ನಂತರ ಈ ಘಟನೆ ಸಂಭವಿಸಿದೆ. ಮೃತ ಚೈತ್ರಾ ಪ್ರಭು ಪಿಯುಸಿ ದ್ವಿತೀಯ ವರ್ಷದಲ್ಲಿ ಮತ್ತು ಸ್ವಾತಿ ಎಸೆಸೆಲ್ಸಿಯಲ್ಲಿ ಓದುತ್ತಿದ್ದರು. ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ಪ್ಯಾಸೆಂಜರ್ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

13 ವರ್ಷಗಳ ಹಿಂದೆ ಈ ಕಾರಣಕ್ಕಾಗಿ ಉಮಾದೇವಿ ರೈಲಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದರು. ಆಗ ಅವರ ಎರಡು ಕಾಲುಗಳು ತುಂಡಾಗಿ ನಂತರ ಕೃತಕ ಕಾಲು ಅಳವಡಿಸಲಾಗಿತ್ತು ಎಂದು ಗೊತ್ತಾಗಿದೆ. ರೈಲ್ವೆ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News