×
Ad

ಮೂಡಿಗೆರೆ: ಮಾನವೀಯತೆ ಮೆರೆದ ಸಮಾಜ ಸೇವಕರ ತಂಡ

Update: 2016-08-09 22:03 IST

ಮೂಡಿಗೆರೆ,ಆ.9: ಮೂವರು ಮಾನಸಿಕ ಅಸ್ವಸ್ಥರನ್ನು ಇಲ್ಲಿನ ಸಮಾಜ ಸೇವಕರ ತಂಡವೊಂದು ಪೊಲೀಸರು ಮತ್ತು ಆರೋಗ್ಯ ಇಲಾಖೆ ನೆರವಿನೊಂದಿಗೆ ಇತ್ತೀಚೆಗೆ ಬೆಂಗಳೂರಿನ ಆರ್.ವಿ.ಎಂ.ಫೌಂಡೇಷನ್ ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದಿದ್ದಾರೆ.

ಪಟ್ಟಣದ ಬಸ್ ನಿಲ್ದಾಣ ಮತ್ತು ರಸ್ತೆ ಬದಿಯಲ್ಲಿ ಮಲಗಿದ್ದ ಅಪರಿಚಿತ ಮೂವರು ಮಾನಸಿಕ ಅಸ್ವಸ್ಥರನ್ನು ಇತ್ತೀಚೆಗೆ ಸಮಾಜ ಸೇವಕರಾದ ಫಿಶ್‌ಮೋಣು, ಹಸೈನಾರ್, ಅಬ್ದುಲ್ ರಹ್ಮಾನ್, ಅಲ್ತಾಫ್ ಬಿಳಗುಳ ಇವರು ಬೀಜವಳ್ಳಿ ಸುಂಡಕೆರೆ ಹಳ್ಳಕ್ಕೆ ಕರೆದೊಯ್ದು ಹೊಸ ವಸ್ತ್ರ ತೊಡಿಸಿ ಎಂಜಿಎಂ ಆಸ್ಪತ್ರೆಗೆ ದಾಖಲಿಸಿದ್ದರು. ಈ ಮೂವರು ಮಾನಸಿಕ ಅಸ್ವಸ್ಥರಾಗಿ ರುವುದರಿಂದ ಮಾನಸಿಕ ಚಿಕಿತ್ಸೆ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳವಾರ ಈ ಸಮಾಜ ಸೇವಕರ ತಂಡ ಹಾಗೂ ಪೊಲೀಸ್ ಸಿಬ್ಬಂದಿ ತಿಮ್ಮಪ್ಪ, ಸ್ಥಳೀಯ ವ್ಯಕ್ತಿ ಮಂಜುನಾಥ್ ಸೇರಿ ಆರೋಗ್ಯ ಇಲಾಖೆಯ ಆ್ಯಂಬುಲೆನ್ಸ್‌ನಲ್ಲಿ ಕರೆದೊಯ್ದು ಬೆಂಗಳೂರಿನ ಬನ್ನೇರುಘಟ್ಟ ಮಾನ ಸಿಕ ಅಸ್ವಸ್ಥರ ಆರ್.ವಿ.ಎಂ. ಫೌಂಡೇಷನ್ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಈ ಸಮಾಜ ಸೇವಕರ ತಂಡ ಪಟ್ಟಣ ಸೇರಿ ದಂತೆ ತಾಲೂಕಿನ ವಿವಿಧೆಡೆಯ ರಸ್ತೆ ಬದಿಯಲ್ಲಿ ಹಾಗೂ ಬಸ್ ನಿಲ್ದಾಣದಲ್ಲಿ ಮಲಗಿದ್ದ ಹಲವು ಅಪರಿಚಿತ ಮಾನಸಿಕ ಅಸ್ವಸ್ಥರನ್ನು ಕರೆತಂದು ಶುಚಿಗೊಳಿಸಿ ಆಸ್ಪತ್ರೆಗಳಿಗೆ ಸೇರಿಸಿ ಮಾನವೀಯತೆ ಮೆರೆದು ಸಾರ್ವಜನಿಕ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಈ ಸಮಾಜ ಸೇವಕರ ತಂಡಕ್ಕೆ ಜಿಲ್ಲಾಡಳಿತ, ಪೊಲೀಸ್ ಇಲಾಖೆ, ತಾಲೂಕು ಆಡಳಿತ ಹಾಗೂ ಸಂಘ ಸಂಸ್ಥೆಗಳು ಹಲವು ಬಾರಿ ಸನ್ಮಾನಿಸಿ ಗೌರವಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News