ಸ್ವಾತಂತ್ರೋತ್ಸವದಂದು 320ಮಂದಿ ಕೈದಿಗಳ ಬಿಡುಗಡೆ
Update: 2016-08-10 19:08 IST
ಬೆಂಗಳೂರು, ಆ. 10: ಸನ್ನಡತೆ ಆಧಾರದ ಮೇಲೆ ಕೈದಿಗಳ ಬಿಡುಗಡೆಗೆ ಮಾರ್ಗಸೂಚಿ ಬದಲಾವಣೆಗೆ ಸಂಪುಟ ಒಪ್ಪಿಗೆ ನೀಡಿದ್ದು, ಹೀಗಾಗಿ 48ಮಂದಿ ಮಹಿಳಾ ಕೈದಿಗಳು ಸೇರಿ 320ಮಂದಿ ಕೈದಿಗಳನ್ನು ಸ್ವಾತಂತ್ರೋತ್ಸವ ಸಂದರ್ಭದಲ್ಲಿ ‘ಬಿಡುಗಡೆ ಭಾಗ್ಯ’ ದೊರೆತಿದೆ.
ಬುಧವಾರ ವಿಧಾನಸೌಧದ ಸಚಿವ ಸಂಪುಟ ಸಭಾ ಮಂದಿರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆ ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಕಾನೂನು ಸಚಿವ ಜಯಚಂದ್ರ, ರಾಜ್ಯದ ವಿವಿಧ ಕಾರಾಗೃಹಗಳಲ್ಲಿ ಕೈದಿಗಳ ಬಿಡುಗಡೆ ಈ ಹಿಂದಿನ ಮಾರ್ಗಸೂಚಿಯನ್ನು ಪರಿಷ್ಕರಿಸಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ ಎಂದು ಹೇಳಿದರು.
ಹದಿನಾಲ್ಕು ವರ್ಗ ಶಿಕ್ಷೆ ಪೂರೈಸಿದ ಒಟ್ಟು 272 ಮಂದಿ ಪುರುಷ ಕೈದಿಗಳು, ಹತ್ತು ವರ್ಷ ಶಿಕ್ಷೆ ಪೂರೈಸಿದ 48 ಮಂದಿ ಮಹಿಳಾ ಕೈದಿಗಳು ಸೇರಿದಂತೆ ಒಟ್ಟು 320 ಮಂದಿ ಕೈದಿಗಳನ್ನು ಸ್ವಾತಂತ್ರ ದಿನಾಚರಣೆ ಸಂದರ್ಭದಲ್ಲಿ ಬಿಡುಗಡೆ ಮಾಡಲು ಸಚಿವ ಸಂಪುಟ ಸಭೆ ಸಮ್ಮತಿಸಿದೆ ಎಂದು ಮಾಹಿತಿ ನೀಡಿದರು.