×
Ad

ಶಾಸಕ ಹಾರೀಸ್ ಪುತ್ರನಿಂದ ಹಲ್ಲೆ: ಆರೋಪ

Update: 2016-08-10 20:27 IST

ಬೆಂಗಳೂರು, ಆ.10: ಶಾಂತಿನಗರ ವಿಧಾನಸಭಾ ಕ್ಷೇತ್ರದ ಶಾಸಕ ಎನ್.ಎ.ಹಾರೀಸ್ ಪುತ್ರ ಉಮರ್ ಮದ್ಯದ ಅಮಲಿನಲ್ಲಿ ಯುವಕನೋರ್ವನ ಮೇಲೆ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ.

ಮಂಗಳವಾರ ಮಧ್ಯಾಹ್ನ ಇಲ್ಲಿನ ಶಾಂತಿನಗರ ವ್ಯಾಪ್ತಿಯಲ್ಲಿರುವ ಪಬ್‌ವೊಂದರಲ್ಲಿ ಶಾಸಕ ಹಾರೀಸ್ ಪುತ್ರ ಎಂದು ಹೇಳಿಕೊಂಡು ನನ್ನ ಮೇಲೆ ಉಮರ್ ಹಲ್ಲೆ ಮಾಡಿದ್ದಾರೆ ಎಂದು ನೊಂದ ಯುವಕ ಅಶೋಕನಗರ ಠಾಣೆಗೆ ದೂರು ದಾಖಲಿಸಲು ಮುಂದಾದರೂ ಪೊಲೀಸರು ದೂರು ಸ್ವೀಕರಿಸಿಲ್ಲ ಎಂದು ತಿಳಿದುಬಂದಿದೆ.
 ಆದರೆ, ಪೊಲೀಸರಿಗೆ ನೀಡಿರುವ ದೂರು ವಾಪಸು ಪಡೆಯುವಂತೆ ಯುವಕನ ಮೇಲೆ ಒತ್ತಡ ತರಲಾಗಿದೆ ಎಂದು ಹೇಳಲಾಗಿದ್ದು, ಹಾರೀಸ್ ಅವರ ಪುತ್ರ ಉಮರ್‌ನ ವಿರುದ್ಧ ಯಾವುದೇ ದೂರು ಬಂದಿಲ್ಲ. ಆದರೂ, ಘಟನೆ ನಡೆದಿದೆ ಎನ್ನಲಾದ ಶಾಂತಿನಗರದ ಪಬ್‌ನಲ್ಲಿ ಪರಿಶೀಲನೆ ನಡೆಸುವಂತೆ ಸ್ಥಳೀಯ ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

ನನ್ನ ಮಗ ತಪ್ಪು ಮಾಡಿದ್ದರೆ ಶಿಕ್ಷೆಯಾಗಲಿ

ನನ್ನ ಮಗ ಉಮರ್ ಇಂದು ಮಧ್ಯಾಹ್ನ ರೆಸ್ಟೋರೆಂಟ್‌ಗೆ ಉಪಾಹಾರಕ್ಕಾಗಿ ಹೋಗಿದ್ದಾನೆ ಎಂದು ಗೊತ್ತಾಗಿದೆ. ಆದರೆ, ಪಬ್‌ಗೆ ಹೋಗಿದ್ದಾನೆ ಎಂದು ಇಲ್ಲಸಲ್ಲದ ಆರೋಪಗಳನ್ನು ಮಾಡಲಾಗುತ್ತಿರುವುದು ಸರಿಯಲ್ಲ. ಒಂದು ವೇಳೆ ನನ್ನ ಮಗ ಉಮರ್ ಹಲ್ಲೆ ಮಾಡಿದ್ದರೆ, ಕಾನೂನು ಕ್ರಮ ಜರುಗಿಸಲಿ. ನಾನು ಯಾವುದೇ ರೀತಿಯ ಪ್ರಭಾವ ಬಳಸಿಲ್ಲ, ಬಳಸುವುದೂ ಇಲ್ಲ. 

-ಎನ್.ಎ.ಹಾರೀಸ್, ಶಾಸಕ, ಶಾಂತಿನಗರ ವಿಧಾನಸಭಾ ಕ್ಷೇತ್ರ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News