×
Ad

ಹಜ್‌ ಸಮಿತಿ ಅಧ್ಯಕ್ಷರಾಗಿ ರೋಷನ್‌ ಬೇಗ್‌ ನೇಮಕಕ್ಕೆ ರಾಜ್ಯ ಹೈಕೋರ್ಟ್‌ ತಡೆ

Update: 2016-08-11 22:38 IST

ಬೆಂಗಳೂರು, ಆ.11: ರಾಜ್ಯ  ಹಜ್ ಸಮಿತಿಯ ಅಧ್ಯಕ್ಷರಾಗಿ ರೋಷನ್‌ ಬೇಗ್‌ ಅವರ ನೇಮಕಗೊಳಿಸಿದ ಸರಕಾರದ ಕ್ರಮಕ್ಕೆ ರಾಜ್ಯ ಹೈಕೋರ್ಟ್‌ ತಡೆ ವಿಧಿಸಿದೆ.
ರಾಜ್ಯ ಸರಕಾರ ಹಜ್  ಸಮಿತಿಗೆ ಅಧ್ಯಕ್ಷರನ್ನು ನೇಮಕ ಮಾಡಿದ್ದರೂ, 2015ರಿಂದ ಸಮಿತಿಗೆ ಸದಸ್ಯರನ್ನು ನೇಮಕ ಮಾಡಿರಲಿಲ್ಲ.
ರೋಷನ್‌ ಬೇಗ್‌ ಅವರನ್ನು ಹಜ್‌ ಸಮಿತಿಯ ಅಧ್ಯಕ್ಷರಾಗಿ ನೇಮಕಗೊಳಿಸಿದ ರಾಜ್ಯ ಸರಕಾರದ ಆದೇಶದ ವಿರುದ್ಧ ಮುಮ್ತಾಜ್‌ ಅಲಿ ಖಾನ್‌ ರಿಟ್‌   ರಾಜ್ಯ ಹೈಕೋರ್ಟ್‌‌ಗೆ  ಅರ್ಜಿ ಸಲ್ಲಿಸಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್‌‌ನ ಏಕಸದಸ್ಯ ಪೀಠ ತಡೆ ವಿಧಿಸಿ ಮಧ್ಯಾಂತರ ಆದೇಶ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News