179 ಮಂದಿ ಮಹಾದಾಯಿ ಹೋರಾಟಗಾರರಿಗೆ ಷರತ್ತು ಬದ್ಧ ಜಾಮೀನು
Update: 2016-08-12 12:02 IST
ಧಾರವಾಡ, ಆ.12: ಮಾಹಾದಾಯಿ ನ್ಯಾಯಾಧೀಕರಣ ತೀರ್ಪಿನ ವಿರುದ್ಧ ಪ್ರತಿಭಟನೆ ವೇಳೆ ನವಲಗುಂದದಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿತ 179 ಮಂದಿ ರೈತರಿಗೆ ಧಾರವಾಡ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಇಂದು ಜಾಮೀನು ನೀಡಿದೆ
ಗಲಭೆ ವೇಳೆ ಬಂಧಿತರ ಪೈಕಿ ಎಂಟು ಮಂದಿಗೆ ಎರಡು ದಿನಗಳ ಹಿಂದೆ ನ್ಯಾಯಾಲಯ ಜಾಮೀನು ನೀಡಿತ್ತು. 25 ಪ್ರಕರಣಗಳಲ್ಲಿ 187 ಮಂದಿಯನ್ನು ಬಂಧಿಸಲಾಗಿತ್ತು.
ರೈತರ ಜಾಮೀನು ಅರ್ಜಿಯ ವಿಚಾರಣೆಯನ್ನು ಗುರುವಾರ ನಡೆಸಿ ತೀರ್ಪನ್ನು ಕಾಯ್ದಿರಿಸಿದ್ದ ಧಾರವಾಡ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀಶಾನಂದ ಬಂಧಿತರಿಗೆ ಷರತ್ತುಬದ್ಧ ಜಾಮೀನು ನೀಡಿದ್ದಾರೆ. ಬಂಧಿತ ಎಲ್ಲರೂ 50 ಸಾವಿರ ರೂ .ಮೊತ್ತದ ಬಾಂಡ್ ಒದಗಿಸಬೇಕು. ಪ್ರತಿ ಸೋಮವಾರ ನವಲಗುಂದ ಪೊಲೀಸ್ ಠಾಣೆಗೆ ಹಾಜರಾಗಬೇಕು. ಸಾಕ್ಷಿ ನಾಶ ಮಾಡಬಾರದು, ಸಾರ್ವಜನಿಕ ಶಾಂತಿ ಭ ಮಾಡಬಾರದು ಎಂಬ ಷರತ್ತು ವಿಧಿಸಲಾಗಿದೆ.
ಬಂಧಿತ ರೈತರ ಪರ ಧಾರವಾಡದ ವಕೀಲರ ಸಂಘ ವಾದಿಸಿತ್ತು.