ಲಂಬಾಣಿ ಸಮಾಜದ ಏಳಿಗೆ, ಶ್ರೇಯೋಭಿವೃದ್ಧಿಗೆ ಸಹಕಾರ ಸಂಘಗಳ ನೋಂದಣಿ: ಚಂದ್ರನಾಯ್ಕ್ಕಿ
ದಾವಣಗೆರೆ, ಆ.12: ಜಿಲ್ಲೆಯ ಲಂಬಾಣಿ ಸಮಾಜದ ಏಳಿಗೆ ಮತ್ತು ಶ್ರೇಯೋಭಿವೃದ್ಧಿಗಾಗಿ ಸಹಕಾರ ಸಂಘಗಳ ನೋಂದಣಿ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಲಂಬಾಣಿ ಸೇವಾಸಂಘದ ಅಧ್ಯಕ್ಷ ಚಂದ್ರನಾಯ್ಕ್ಕಿ ಹಾಲೇಕಲ್ಲು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಶೇ.90ರಷ್ಟು ಲಂಬಾಣಿ ಜನಾಂಗದವರು ಹಿಂದುಳಿದಿದ್ದಾರೆ. ಜನಾಂಗದ ಶೈಕ್ಷಣಿಕ, ರಾಜಕೀಯ,ಆರ್ಥಿಕ ಪ್ರಗತಿಗಾಗಿ ಸಂಘ ರಚಿಸಲಾಗಿದ್ದು, ಎಲ್ಲರೂ ಪ್ರೋತ್ಸಾಹಿಸಬೇಕಾಗಿದೆ ಎಂದರು.
ತಾಂಡಾದ ಜನಾಂಗವು ಕಾಡಿನಿಂದ ನಾಡಿಗೆೆ ಬಂದು ಸ್ವಲ್ಪ ಮಟ್ಟಿಗೆ ಸುಧಾರಿಸಿಕೊಂಡಿದ್ದು, ಇನ್ನೂ ಅನೇಕ ತಾಂಡಾ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ, ಬಸ್ ವ್ಯವಸ್ಥೆ, ಆರೋಗ್ಯ ಕೇಂದ್ರಗಳು ಇಲ್ಲದೇ ಜನಾಂಗವು ಹಿಂದುಳಿಯುತ್ತಿದೆ ಎಂದು ತಿಳಿಸಿದರು. ಜಿಲ್ಲಾ ಲಂಬಾಣಿ ಸೇವಾ ಸಂಘದ ಗೌರವಾಧ್ಯಕ್ಷರನ್ನಾಗಿ ಜಿ.ಮಂಜನಾಯ್ಕಾ, ಅಧ್ಯಕ್ಷರಾಗಿ ಜಿ. ಚಂದ್ರನಾಯ್ಕಾ, ಉಪಾಧ್ಯಕ್ಷರಾಗಿ ಬಿ.ರಮೇಶ್ ನಾಯ್ಕಾ, ಡಾ. ರಮೇಶ್ ಕುಮಾರ್, ಎಲ್. ಕೊಟ್ರೇಶ್ ನಾಯ್ಕಾ, ಡಿ.ಎಲ್. ಜಯರಾಜ್, ಪ್ರಧಾನ ಕಾರ್ಯದರ್ಶಿಯಾಗಿ ವಕೀಲ ವೆಂಕಟಗಿರಿ ನಾಯ್ಕಾ,ಸಹ ಕಾರ್ಯದರ್ಶಿಯಾಗಿ ವೌಲ ನಾಯ್ಕಾ, ಸುರೇಶ್ ನಾಯ್ಕಾ, ಸಂಘಟನಾ ಪ್ರಧಾನ ಕಾರ್ಯದರ್ಶಿಯಾಗಿ ಎನ್.ಜೆ.ಮಹೇಶ್ವರನಾಯ್ಕ, ಟಿ.ಕುಬೇರನಾಯ್ಕ, ಕೋಶಾಧ್ಯಕ್ಷ ಎನ್.ಹನುಮಂತನಾಯ್ಕ, ಜಿಲ್ಲಾ ಸಂಚಾಲಕರಾಗಿ ಮಂಜುನಾಥ್ ಆರ್.ನಾಯ್ಕ, ಸದಸ್ಯರಾಗಿ ರಾಜನಾಯ್ಕಾ, ರವಿಕುಮಾರ್, ಕೃಷ್ಣಕುಮಾರ್, ರಾಮಚಂದ್ರನಾಯ್ಕಾ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಜಿ. ಮಂಜನಾಯ್ಕ, ಬಿ. ರಮೇಶ್ ನಾಯ್ಕ, ಎನ್.ಜೆ. ಮಹೇಶ್ವರನಾಯ್ಕ, ಎನ್.ಹನುಮಂತನಾಯ್ಕ, ಚಂದ್ರಶೇಖರ್ ತ್ಯಾವಣಿಗೆ ಮತ್ತಿತರರು ಉಪಸ್ಥಿತರಿದ್ದರು.