×
Ad

ಸಕಲೇಶಪುರ ಅಜಯ್ ಸತ್ಪಾಲ್ ಕೊಲೆ ಪ್ರಕರಣ : ಪ್ರಮುಖ ಆರೋಪಿ ಡಿ.ಸಿ. ಸಣ್ಣಸ್ವಾಮಿ ಬಂಧನ

Update: 2016-08-14 18:52 IST

ಹಾಸನ,ಆ.14: ಸಕಲೇಶಪುರ ಮರಳು ಶೇಖರಣೆ ವಿಚಾರದಲ್ಲಿ ಅಜಯ್ ಸತ್ಪಾಲ್ ಕೊಲೆ ಪ್ರಕರಣದ ಪ್ರಮುಖ ಆರೋಪಿ ಡಿ.ಸಿ. ಸಣ್ಣಸ್ವಾಮಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿ ಕಾರ್ಯಚರಣೆ ನಡೆಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ತಿಳಿಸಿದ್ದಾರೆ.

      ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಛೇರಿ ಸಭಾಂಗಣದಲ್ಲಿ ಭಾನುವಾರ ಮದ್ಯಾಹ್ನ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ, ಸಕಲೇಶಪುರ ತಾಲ್ಲೂಕ್ ಯಸಳೂರು ಪೊಲೀಶ್ ಠಾಣೆ ವ್ಯಾಪ್ತಿಯ ನಿಡುಗೆರೆ ಗ್ರಾಮದಲ್ಲಿ ಮರಳು ಶೇಖರಣೆ ಮತ್ತು ಸಾಗಟದ ವಿಷಯದಲ್ಲಿ ಗ್ರಾಮದ ಅಜಯ್ ಸತ್ಪಾಲ್ ಎಂಬುವ ವ್ಯಕ್ತಿ ಕೊಲೆಯಾಗಿದ್ದನು. ಪ್ರಕರಣದಲ್ಲಿ 15 ಮಂದಿ ಆರೋಪಿಯನ್ನು ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು ಎಂದರು. ಆದರೆ ಇದೆ ಪ್ರಕರಣದ ಮುಖ್ಯ ಆರೋಪಿ ಡಿ.ಸಿ. ಸಣ್ಣಸ್ವಾಮಿ ಕೊಲೆ ದಿನದಿಂದ ನಾಪತ್ತೆಯಾಗಿದ್ದು, ಯಸಳೂರು ಮತ್ತು ಸಕಲೇಶಪುರ ಒಳಗೊಂಡ ಪೊಲೀಸ್ ಇಲಾಖೆಯಿಂದ ಒಂದು ತಂಡ ರಚಿಸಿ ಆತನ ಪತ್ತೆಗೆ ಬಲೆ ಬೀಸಲಾಗಿತ್ತು. ಕಳೆದ ಒಂದು ದಿವಸಗಳಷ್ಟೆ ಹಾಸನ ನಗರದ ಬಸ್ ನಿಲ್ದಾಣದಲ್ಲಿ ಆರೋಪಿ ಡಿ.ಸಿ. ಸಣ್ಣಸ್ವಾಮಿ ಇರುವುದರ ಬಗ್ಗೆ ಮಾಹಿತಿ ಪಡೆದು ಬಂಧಿಸಲಾಯಿತು. ಇತನನ್ನು ಪ್ರಾಥಮಿಕ ತನಿಖೆಗೆ ಒಳಪಡಿಸಿದಾಗ ಪ್ರಕರಣದ ವಿಚಾರವಾಗಿ ತಪ್ಪು ಒಪ್ಪಿಕೊಂಡ ಹಿನ್ನಲೆಯಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಯಿತು. ಎರಡು ಗುಂಪುಗಳ ನಡುವೆ ನಡೆದ ಘರ್ಷಣೆಯಲ್ಲಿ ಮುಖ್ಯ ಆರೋಪಪಿ ಸಣ್ಣಸ್ವಾಮಿಯೇ ಎಂಬುದು ದೃಡಪಟ್ಟಿದೆ ಎಂದರು. ಇನ್ನುಳಿದ ನಾಲ್ಕು ಜನ ಆರೋಪಿಗಳ ಪತ್ತೆ ಕಾರ್ಯ ಮುಂದುವರೆದಿದ್ದು, ಶೀಘ್ರದಲ್ಲಿಯೇ ಬಂಧಿಸುವ ವಿಶ್ವಾಸ ವ್ಯಕ್ತಪಡಿಸಿದರು.

    ಇಂದು ನಡೆಯುವ 70ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಗೆ ಎಲ್ಲಾ ರೀತಿಯ ಸಿದ್ಧತೆಗಳು ನಡೆದಿದ್ದು, ಅದ್ಧೂರಿಯಾಗಿ ನಡೆಸುವುದಾಗಿ ಹೇಳಿದರು. ಮುನ್ನೇಚ್ಚರಿಕ ಕ್ರಮವಾಗಿ ಪೊಲೀಸ್ ಬಿಗಿ ಬಂದು ಬಸ್ತು ಮಾಡಿರುವುದಾಗಿ ಇದೆ ಸಂದರ್ಭದಲ್ಲಿ ಹೇಳಿದರು.

    ಕೊಲೆ ಆರೋಪಿಯನ್ನು ಬಂಧಿಸುವಲ್ಲಿ ಯಸಳೂರು ಪೊಲೀಸ್ ಠಾಣೆ ಪಿಎಸ್‌ಐ ದಯಾನಂದ್, ಚನ್ನರಾಯಪಟ್ಟಣ ನಗರ ಪಿಎಸ್‌ಐ ವಿನೋದ್ ರಾಜ್, ಸಿಬ್ಬಂದಿಯವರಾದ ಪೀರ್ ಖಾನ್, ಖಾದರ್, ಪ್ರದೀಪ್ ಮತ್ತು ಶಶಿಕುಮಾರ್ ಶ್ರಮಿಸಿದವರನ್ನು ಶ್ಲಾಘಿಸಿದರು.

    ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್ ಅಧಿಕಾರಿ ಶೋಭರಾಣಿ ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News