×
Ad

ಸಕಲೇಶಪುರ: ಬೃಹತ್ ರಕ್ತದಾನ ಶಿಬಿರ

Update: 2016-08-14 19:12 IST

ಸಕಲೇಶಪುರ,ಆ.14: ಪಟ್ಟಣದ ಲಯನ್ಸ್ ಸೇವಾ ಮಂದಿರದಲ್ಲಿ ವಿವಿಧ ಸಂಘಗಳ ಸಂಯುಕ್ತ ಆಶ್ರಯದಲ್ಲಿ 70ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಸೋಮವಾರ ಬೆಳಗ್ಗೆ 9.30 ರಿಂದ ಬೃಹತ್ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ.

ಶಿಬಿರವನ್ನು ಶಾಸಕ ಎಚ್.ಕೆ.ಕುಮಾರಸ್ವಾಮಿ ಉದ್ಘಾಟಿಸಲಿದ್ದು ಯೋಗಚೇತನ ಟ್ರಷ್ಟ್ ಅಧ್ಯಕ್ಷ ಎಸ್.ಎಂ.ಲಕ್ಷ್ಮಿ ರಂಗನಾಥ್, ಲಯನ್ಸ್ ಅಧ್ಯಕ್ಷ ಸಂಜಿತ್‌ಶೆಟ್ಟಿ, ಕುಂಥುನಾಥ್ ಮೂರ್ತಿ ಪೂಜಕ ಸಂಘದ ಅಧ್ಯಕ್ಷ ಕೇವಲ್‌ಚಂದ್ ಜೈನ್, ತಾಲೂಕು ಜನಪದ ಪರಿಷತ್ ಅಧ್ಯಕ್ಷ ಎಂ.ಪಿ.ಹರೀಶ್, ರೋಟರಿ ಸಂಸ್ಥೆ ಅಧ್ಯಕ್ಷ ವೆಂಕಟೇಶ್, ಪತಂಜಲಿ ಯೋಗ ಸಮಿತಿಯ ಸಂಗಮೇಶ್, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ರವಿಕುಮಾರ್, ಮಲೆನಾಡು ಆಟೊ ಮಾಲೀಕರು ಮತ್ತು ಚಾಲಕರ ಸಂಘದ ಅಧ್ಯಕ್ಷ ಲೋಕೇಶ್ ಮೊದಲಾದವರು ಪಾಲ್ಗೊಳ್ಳುವರು.

ಕಾರ್ಯಕ್ರಮಕ್ಕೆ ಯೋಗ ಚೇತನ ಟ್ರಷ್ಟ್, ಜೆನ್ ಸಂಘ, ಲಯನ್ಸ್, ಲಯನೆಸ್, ರೋಟರಿ, ಪತಂಜಲಿ ಯೋಗ ಸಮಿತಿ, ತಾಲೂಕು ಜನಪದ ಪರಿಷತ್, ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನ ಸಮಿತಿ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಮಲೆನಾಡು ಆಟೊ ಮಾಲೀಕರು ಮತ್ತು ಚಾಲಕರ ಸಂಘದ ಸಹಯೋಗವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News