ಸಕಲೇಶಪುರ: ತಾಲೂಕಿನಲ್ಲಿ 32 ಸರಕಾರಿ ಶಾಲೆಗೆ ಬೀಗ - ಚಿಂತಕರ ಕಳವಳ
ಸಕಲೇಶಪುರ,ಆ.14: ತಾಲೂಕಿನಲ್ಲಿ 32 ಸರಕಾರಿ ಶಾಲೆಗಳು ಮುಚ್ಚಿರುವುದು ಅಹಿತಕರಬೆಳವಣಿಗೆಯಾಗಿದ್ದು ಹಾನುಬಾಳು ಮತ್ತು ಬಾಳುಪೇಟೆ ಹಳೇ ವಿದ್ಯಾರ್ಥಿಗಳ ಯೋಜನೆ ಈ ಸಮಸ್ಯೆಗೆ ಪರಿಹಾರ ಎಂದು ಪಟ್ಟಣದ ಪ್ರಮುಖ ಚಿಂತಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪಟ್ಟಣದ ಸರಕಾರಿ ಗ್ರಂಥಾಲಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ, ಚಿಂತನ ಚಾವಡಿ ಕಾರ್ಯಕ್ರಮದಲ್ಲಿ ತಾಲೂಕಿನ ಶಿಕ್ಷಣದ ಸ್ಥಿತಿಗತಿ ಚರ್ಚೆಯಲ್ಲಿ ಭಾಗವಹಿಸಿದ್ದ,ಪ್ರಮುಕರು ಅಭೀಪ್ರಾಯ ವ್ಯಕ್ತಪಡಿಸುತ್ತ ಸರಕಾರಿ ಶಾಲೆ ಮುಚ್ಚಲು, ಶಿಕ್ಷಕರು ನೀಡುವ ವರದಿಯನ್ನು ಕೈ ಬಿಟ್ಟು,ಗ್ರಾಮಸ್ಥರ ಅಭಿಪ್ರಾಯಕ್ಕೆ ಒತ್ತು ನೀಡಬೇಕೆಂದು ಅಭಿಪ್ರಾಯ ವ್ಯಕ್ತಿಪಡಿಸಿದರು.
ಬ್ಯಾಂಕ್ ವ್ಯವಸ್ಥಾಪಕ ವಿನಯ್ ಮಾತಾನಾಡುತ್ತ ತಾಲೂಕಿನಲ್ಲಿ, 32 ಶಾಲೆಗಳನ್ನು ಮುಚ್ಚಲಾಗಿದೆ ಇದು ಅತ್ಯಂತ ಕೆಟ್ಟ ಬೆಳವಣಿಗೆಯಾಗಿದ್ದು ಇದನ್ನು ತಡೆಯಲು ಶಾಲೆ ಮುಚ್ಚಲಾಗಿರುವ ಪ್ರದೇಶಗಳ ಅಧ್ಯಯನ ನಡೆಸಿ ಪರಿಹಾರ ಕಂಡುಕೊಳ್ಳಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು. ಇದಕ್ಕೆ ಸಹಮತ ವ್ಯಕ್ತಪಡಿಸಿ ಪರಿಹಾರ ಸೂಚಕವಾಗಿ ಅಭಿಪ್ರಾಯ ವ್ಯಕ್ತಪಡಿಸಿದ, ಪತ್ರಕರ್ತ ಯೋಗೆಶ್ ಹಾನುಬಾಳು ಮತ್ತು ಬಾಳುಪೇಟೆಯಲ್ಲಿ ಹಳೆ ವಿದ್ಯಾರ್ಥಿಗಳು ಸರಕಾರಿ ಶಾಲೆಗಳ ಅಭಿವೃದ್ದಿಗಾಗಿ ಮುಂದಾಗಿರುವ ಕ್ರಮ ಅನುಸರಿಸಿದರೆ ಈ ಸಮಸ್ಯೆಗೆ ಪರಿಹಾರವಾಗುತ್ತೆ ಎಂದರು.
ಶಿಕ್ಷಕ ಗೊದ್ದು ಲಕ್ಕಪ್ಪ ಮಾತನಾಡಿ ತಾಲೂಕಿನಲ್ಲಿ ಸರಕಾರಿ ಶಾಲೆಗಳ ಶಿಕ್ಷಕರು ಗುಣಮಟ್ಟದ ಶಿಕ್ಷಣ ನೀಡಿಲ್ಲವೆಂಬುದು ಸಂಪೂರ್ಣ ಸತ್ಯವಲ್ಲ ಸರಕಾರಿ ಶಾಲೆಯಲ್ಲಿ ವಿಧ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳ ಪೋಷಕರು ಜವಾಬ್ದಾರಿ ವಹಿಸುವ ಅಗತ್ಯವಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತ್ ಅಧ್ಯಕ್ಷ ಜಯಾಮಾತು ದೇವರಾಜ್,ಅಭಿಪ್ರಾಯ ವ್ಯಕ್ತಪಡಿಸುತ್ತಾ ತಾಲೂಕಿನಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು, ಜನಪ್ರತಿನಿಧಿಗಳು ಹೆಚ್ಚು ಒತ್ತು ನೀಡಬೇಕು ಎಂದರು.
ಕನ್ನಡ ಸಾಹಿತ್ಯ ಪರಿಷತ್ ಪ್ರದನ ಕಾರ್ಯದರ್ಶಿ ಮಲ್ನಾಡ್ ಮೆಹಬೂಬ್ ಅಭಿಪ್ರಾಯ ವ್ಯಕ್ತಪಡಿಸಿ,ಬಹುತೇಕ ಖಾಸಗಿ ಶಾಲೆಗಳು ತಂತ್ರಗಾರಿಕೆಯ ಮೂಲಕ ಪೋಷಕರನ್ನು ಮರುಳುಮಾಡಿ ಆರ್ಥಿಕ ಆದಾಯಕ್ಕೆ, ಒತ್ತು ನೀಡಿ ಶಿಕ್ಷಣ ಸಂಸ್ಥೆಯನ್ನು ನಡೆಸುತ್ತಿದ್ದಾರೆ. ಎಸ್ ಎಸ್ ಎಲ್ ಸಿ ಯಲ್ಲಿ ಕಡಿಮೆ ಅಂಕ ಗಳಿಸುವ ಹಾಗೂ ಫೇಲಾಗುವ ಸಂಭವವಿರುವ ವಿದ್ಯಾರ್ಥಿಗಳನ್ನು ತಂತ್ರಗಾರಿಕೆಯ ಮೂಲಕ ಅಂದರೆ ಅನುತ್ತೀರ್ಣಗೊಳಿಸುವ ಬೆದರಿಕೆ ಒಡ್ಡಿ ವರ್ಗಾವಣೆ ಪತ್ರ ನೀಡಿ ಶಾಲೆಯಿಂದ ಹೊರದಬ್ಬಲಾಗುತ್ತವೆ ಎಂದು ಹೇಳಿದರು.
ಶಿಕ್ಷಕ ರುದ್ರಪ್ಪ ಮಾತನಾಡಿ ಸರಕಾರ ಶಿಕ್ಷಕರ ಸಮಸ್ಯೆಯನ್ನು ಆರಂಭಿಸಿ ಪರಿಹಾರ ಸೂಚಿಸಬೇಕು, ಅನೇಕ ಕಾರ್ಯಕ್ರಮಗಳು ಹಾಗೂ ಶಿಕ್ಷಣ ನೀತಿಯಿಂದಾಗಿ ಗುಣಮಟ್ಟದ ಶಿಕ್ಷಣಕ್ಕೆ ಸರಕಾರಿ ಶಾಲೆಗಳಲ್ಲಿ ಅಡಚಣೆಯಾಗುತ್ತಿದೆ ಎಂದು ವಿವರಿಸಿದ್ದರು.
ಬ್ಯಾಂಕ್ ವ್ಯವಸ್ಥಾಪಕ ಶಶಿದರ್ ಅಭಿಪ್ರಾಯ ವ್ಯಕ್ತಪಡಿಸುತ್ತಾ ಸರಕಾರಿನ ಶಾಲೆಯ ಶಿಕ್ಷಕರು ಸಾರ್ವಜನಿಕವಾಗಿ ತಮ್ಮನ್ನು ಮೌಲ್ಯದಾರಿತವಾಗಿ ಬಿಂಬಿಸಿಕೊಳ್ಳುದಾಗಿ ವಿಫಲವಾಗಿರುವುದು ಸಹ ಸರಕಾರಿ ಶಾಲೆ ಮುಚ್ಚಲು ಕಾರಣವಾಗಿದೆ.ಗ್ರಂಥಪಾಲಕ ಚಂದ್ರು ಕುಮಾರ್ ಮಾತನಾಡಿ ಇಂತಹ ಚರ್ಚೆಗಳು ಕ್ಷೇತ್ರ ಶಿಕ್ಷಕರು ಹಾಗೂ ಪ್ರಮುಖ ಜನಪ್ರತಿನಿಧಿಗಳು ನಡೆದರೆ. ಉತ್ತಮ ಎಂದರು.ಚರ್ಚೆಯಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರವಿಕುಮಾರ್, ಆಧಿವಾಸಿ ಜನಗಳ ಒಕ್ಕೂಟದ ಅಧ್ಯಕ್ಷ ನವೀನ್ ಸದಾ ಅಂಬೇಡ್ಕರ್ ಯುವ ಸೇನೆ ಕಾರ್ಯಕರ್ತ ಶಾಂತ್‌ರಾಜ್ ಮುಂತಾದವರು ಇದ್ದರು.