×
Ad

ಹಾಸನ: ಕೂಪನ್ ಪಡಿತರ ವ್ಯವಸ್ಥೆ ರದ್ದಿಗೆ ಆಗ್ರಹಿಸಿ ವೀರಕನ್ನಡಿಗರ ಸೇನೆಯಿಂದ ಪ್ರತಿಭಟನೆ

Update: 2016-08-14 20:00 IST

ಹಾಸನ,ಆ.14: ಕೂಪನ್ ಪಡಿತರ ವ್ಯವಸ್ಥೆ ರದ್ದಿಗೆ ಆಗ್ರಹಿಸಿ ಕರ್ನಾಟಕ ವೀರಕನ್ನಡಿಗರ ಸೇನೆ ನೇತೃತ್ವದಲ್ಲಿ ನಿವಾಸಿಗಳು ಪ್ರತಿಭಟನೆ ನಡೆಸಿದ್ದಾರೆ.

    ನಗರದ ಜಿಲ್ಲಾಧಿಕಾರಿ ಕಛೇರಿ ಆವರಣದಲ್ಲಿರುವ ಆಹಾರ ಘಟಕದ ಕಚೇರಿ ಮುಂದೆ ಪ್ರತಿಭಟನೆ ಮಾಡಿದ ಅವರು, ರಾಜ್ಯ ಸರ್ಕಾರವು ಪಡಿತರ ಸೋರಿಕೆಯನ್ನು ತಡೆಗಟ್ಟಲು ಹೊಸದಾಗಿ ಕೂಪನ್ ಪಡಿತರ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಬಡವರ ಅನುಕೂಲಕ್ಕಾಗಿ ಸರ್ಕಾರಗಳು ನ್ಯಾಯಬೆಲೆ ಅಂಗಡಿಗಳ ಮೂಲಕ ಪಡಿತರ ವ್ಯವಸ್ಥೆಯನ್ನು ಜಾರಿಗೊಳಿಸಿದೆ, ಆದರೆ ಪ್ರಸ್ತುತ ದಿನಗಳಲ್ಲಿ ಪಡಿತರ ಚೀಟಿಯ ಮೂಲಕ ಆಹಾರ ದಾನ್ಯವನ್ನು ಪಡೆಯಲು ಹರಸಾಹಸ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು. ಆಹಾರ ದಾನ್ಯಗಳನ್ನು ಪಡೆಯಲು ಆಧಾರ್ ಕಾರ್ಡ್, ಚುನಾವಣಾ ಗುರುತಿನ ಚೀಟಿ ಮತ್ತು ವಾಸಸ್ಥಳ ಧೃಡಿಕರಣ ಪತ್ರವನ್ನು ತರಬೇಕು. ಈಗ ಕೂಪನ್ ವ್ಯವಸ್ಥೆ ಜಾರಿಗೆ ತರುವ ಮೂಲಕ ಅಲೆದಾಡಿಸುವ ಯೋಜನೆ ರೂಪಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

   ಈಗ ಒಂದು ಲೀಟರ್ ಸೀಮೆಎಣ್ಣೆ, 2 ಕೆ.ಜಿ. ಅಕ್ಕಿ ತರಲು ಕಂಪ್ಯೂಟರ್ ಸೆಂಟರ್‌ಗಳ ಮುಂದೆ ದಿನಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಒದಗಿ ಬಂದಿದೆ ಎಂದು ದೂರಿದರು. ವೃದ್ಧರು, ಮಹಿಳೆಯರು, ಶಾಲಾ-ಕಾಲೇಜ್ ಮಕ್ಕಳು ದಿನಗಟ್ಟಲೆ ಕಾಯಬೇಕಾಗಿದೆ. ಬಡವರಿಗೆ ಕಷ್ಟಕರವಾಗದಂತೆ ಮತ್ತು ಅನ್ಯಾಯವಾಗದಂತೆ ಆಹಾರ ದಾನ್ಯವನ್ನು ಪಡೆಯಲು ಮೊದಲು ಇದ್ದ ಆಗೇ ಅನುಕೂಲ ಮಾಡಿಕೊಡುವಂತೆ ಮನವಿ ಸಲ್ಲಿಸಿದರು.

     ಪ್ರತಿಭಟನೆಯಲ್ಲಿ ಕರ್ನಾಟಕ ವೀರಕನ್ನಡಿಗರ ಸೇನೆ ಜಿಲ್ಲಾಧ್ಯಕ್ಷ ದಿನೇಶ್ ಇತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News