ಯುನೈಟೆಡ್ ಥಿಯೋಸಾಫಿಕಲ್ ಕಾಲೇಜ್ ವಿರುದ್ಧ ಎಬಿವಿಪಿ ಪ್ರತಿಭಟನೆ
ಹಾಸನ,ಆ.14: ಬೆಂಗಳೂರಿನ ಯುನೈಟೆಡ್ ಥಿಯೋಸಾಫಿಕಲ್ ಕಾಲೇಜುನಲ್ಲಿ ದೇಶ ವಿರೋಧಿ ಕಾರ್ಯಕ್ರಮ ಹಮ್ಮಿಕೊಂಡಿದ್ದ ವಿರುದ್ಧ ಎಬಿವಿಪಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ನಗರದ ಹೇಮಾವತಿ ಪ್ರತಿಮೆ ಬಳಿ ಕಾಲೇಜು ವಿರುದ್ಧ ಘೋಷಣೆ ಕೂಗಿದ ಅವರು, ಇತ್ತಿಚಿಗೆ ನಡೆದ ಜೆಎನ್‌ಯು ಕ್ಯಾಂಪಸ್‌ನಲ್ಲಿ ದೇಶ ವಿರೋಧಿ ಚಟುವಟಿಕೆ ಮಾಡುವ ಮುನ್ನವೇ ಈಗ ರಾಜದಾನಿ ಬೆಂಗಳೂರಿನಲ್ಲಿ ದೇಶ ವಿರೋಧಿ ಕೂಗು ಕೇಳಿ ಬಂದಿದೆ. ಭಯೋತ್ಪಾತದಕರು ಜೆಎನ್‌ಯುನಲ್ಲೂ, ಪಾಕಿಸ್ತಾನದಲ್ಲೂ ಮಾತ್ರ ಇದ್ದಾರೆ ಎಂಬುದು ತಿಳಿದಿತ್ತು. ಬೆಂಗಳೂರಿನ ಯುನೈಟೆಡ್ ಥಿಯೋಸಾಫಿಕಲ್ ಕಾಲೇಜುನ ಆವರಣದಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಯೋತ್ಪಾಧಕರು ಬಹ್ವಾನನ್ನು ಜನನಾಯಕನೆಂದು ಶೋಕೇಸ್ ಮಾಡುವ ಶಹೀರ್ ಅವನೊಬ್ಬ ಮತ್ತೆ ಹುಟ್ಟಿ ಬರಬೇಕು ಎನ್ನುವ ಸಂದೇಶ ಹಿಂದು ಓರ್ವನ ಮೇಲೆ ಹಲ್ಲೆ ಜೊತೆಗೆ ಬಂದೂಕಿನ ತುದಿಯಲ್ಲಿ ಕಾಶ್ಮೀರದ ಆಜಾದಿಯ ದೇಶದ ಬರ್ಬಾದಿಯ ಘೋಷಣೆಗಳು ಕೆಳಿ ಬಂದವು. ಭಾರತ ವಿರೋಧಿ ಕೆಲಸ ಮಾಡಿದ್ದಾರೆ ಎಂದು ಕಿಡಿಕಾರಿದರು. ಅಜಾದಿಯವರು ಬೇಕಾದರೇ ಗಡಿದಾಟಿ ಪಾಕಿಸ್ತಾನಕ್ಕೆ ಹೋಗಲಿ ಎಂದು ಆಗ್ರಹಿಸಿದರು. ಕೂಡಲೇ ಕಾರ್ಯಕ್ರಮ ನಡೆಸಿದ ಕಾಲೇಜು ಮಾನ್ಯತೆ ರದ್ದು ಮಾಡುವಂತೆ ಆಗ್ರಹಿಸಿದ ಅವರು ಇಲ್ಲವಾದರೇ ಎಬಿವಿಪಿಯಿಂದ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಎಬಿವಿಪಿ ನಗ ಕಾರ್ಯದರ್ಶಿ ಸುನೀಲ್, ರಾಕೇಶ್, ಮಿಥುನ್, ಅಭಿ, ಚರಣ್, ಜೀವನ್, ಅರ್ಜುನ್, ದೀಪು ಇತರರು ಪಾಲ್ಗೊಂಡಿದ್ದರು.