ಕಾಲೇಜಿನ ಪ್ರಗತಿಗೆ ಶ್ರಮಿಸಿ: ಸೈಲ್
ಕಾರವಾರ, ಆ.14: ನಗರದ ದಿವಾಕರ್ ಕಾಲೇಜಿನಲ್ಲಿ ಜಮಕಾನ್, ಸ್ಕೌಟ್ಸ್ ಮತ್ತು ಗೈಡ್ಸ್, ರೆಡ್‌ಕ್ರಾಸ್ ಹಾಗೂ ಎನ್ನೆಸ್ಸೆಸ್ ಘಟಕವನ್ನು ಶಾಸಕ ಸತೀಶ್ ಸೈಲ್ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ದಿವೇಕರ್ ಕಾಲೇಜಿನ ಪ್ರಗತಿಯನ್ನು ಪ್ರಶಂಸಿಸಿ ಸುಮಾರು 600 ವಿದ್ಯಾರ್ಥಿಗಳಿಗೆ ಬೋದನೆ ನೀಡುತ್ತಿರುವ ಕೆನರಾ ಟ್ರಸ್ಟ್ ಸಂಸ್ಥೆಯ ಅಚ್ಚುಕಟ್ಟಾದ ಪರಿಸರ, ಶುಚಿ ಮತ್ತು ಶುಭ್ರವಾದ ಕೊಠಡಿ, ವಾಚನಾಲಯ ವಿದ್ಯಾರ್ಥಿಗಳಿಗಾಗಿಯೇ ಮಾಡಿದಂತಿದೆ ಎಂದರು.
ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಇತರ ಚಟುವಟಿಕೆಯಲ್ಲೂ ಉತ್ತಮ ರೀತಿಯಲ್ಲಿ ತೊಡಗಿಕೊಳ್ಳಬೇಕು. ಕಾಲೇಜಿನಲ್ಲಿ ಯಾವುದೇ ಸಮಸ್ಯೆಗಳಿದ್ದರೆ ಮುಖ್ಯಸ್ಥರ ಗಮನಕ್ಕೆ ತಂದು ಸಮಸ್ಯೆಗಳ ನಿರ್ಮೂಲನೆಗೆ ಮುಂದಾಗಬೇಕು ಎಂದರು. ಈ ಸಂದಭರ್ದಲ್ಲಿ ವಿದ್ಯಾರ್ಥಿಗಳಿಗಾಗಿ ಶಾಸಕ ಸತೀಶ್ ಸೈಲ್ ನೂತನ ಕುಡಿಯುವ ನೀರಿನ ಘಟಕವನ್ನು ಮಂಜೂರು ಮಾಡಿದರು. ರಾಷ್ಟ್ರೀಯ ಹೆದ್ದಾರಿಯನ್ನು ದಾಟಲು ಓವರ್ ಬ್ರಿಡ್ಜ್ ಅಥವಾ ಫ್ಲೈ ಓವರ್‌ಗಾಗಿ ಪ್ರಯತ್ನಿಸುವುದಾಗಿ ಹೇಳಿದರು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿದ ಕೆಡಿಎ ಅಧ್ಯಕ್ಷ ಶಂಭು ಶೆಟ್ಟಿ ಮತ್ತು ಗುತ್ತಿಗೆದಾರ ಕೆಡಿಸಿಸಿ ಬ್ಯಾಂಕ್ ನಿರ್ದೇಶಕಪ್ರಕಾಶ ಗುನಗಿ ಉಪಸ್ಥಿತರಿದ್ದರು.