×
Ad

ವೈದ್ಯಕೀಯ ಕಾಲೆೇಜು ಕಾಮಗಾರಿ ವಿಳಂಬ: ಸಚಿವ ಸೀತಾರಾಮ್ ಅಸಮಾಧಾನ

Update: 2016-08-15 22:44 IST

ಮಡಿಕೇರಿ ಆ.15 : ಮುಂದಿನ ಸೆಪ್ಟೆಂಬರ್ ತಿಂಗಳಿನಿಂದ ಮಡಿಕೇರಿ ವೈದ್ಯಕೀಯ ಕಾಲೆೇಜಿನ ಪ್ರಥಮ ವರ್ಷದ ತರಗತಿಗಳು ಆರಂಭವಾಗಬೇಕಿದೆ. ಆದರೆ ಕಾಮಗಾರಿ ವಿಳಂಬವಾಗುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್.ಸೀತಾರಾಮ್ ತಕ್ಷಣ ಅಗತ್ಯ ಕಾಮಗಾರಿ ನಡೆಸಲು ನಿರ್ದೇಶನ ನೀಡಿದ್ದಾರೆ.

       ವೈದ್ಯಕೀಯ ಕಾಲೆೇಜಿಗೆ ಭೇಟಿ ನೀಡಿ, ಸ್ಥಳದಲ್ಲಿದ್ದ ಕಾಮಗಾರಿಯ ಗುತ್ತಿಗೆ ಪಡೆದ ಸಂಸ್ಥೆಯ ಇಂಜಿನಿಯರ್‌ಗಳ ಬಳಿ ಕಾಮಗಾರಿ ಪೂರ್ಣಗೊಳ್ಳುವ ವಿಚಾರದ ಬಗ್ಗೆ ಮಾಹಿತಿ ಬಯಸಿದರಾದರು, ಉತ್ತರ ಸಮರ್ಪಕವಾಗಿ ದೊರೆಯಲಿಲ್ಲ. ಈ ಹಿನ್ನೆಲೆಯಲ್ಲಿ ದೂರವಾಣಿಯ ಮೂಲಕ ಗುತ್ತಿಗೆದಾರ ಸಂಸ್ಥೆಯ ಪ್ರಮುಖರನ್ನು ಸಂಪರ್ಕಿಸಿದ ಸಚಿವರು, ಕಾಮಗಾರಿಯನ್ನು ಪೂರ್ಣಗೊಳಿಸಿ ಯಾವಾಗ ಕಟ್ಟಡವನ್ನು ಹಸ್ತಾಂತರಿಸುತ್ತೀರ ಎಂದು ಪ್ರಶ್ನಿಸಿದರು. ಕಾಲೆೇಜಿನ ಪ್ರಧಾನ ಕಟ್ಟಡವೆ ಇನ್ನೂ ಪೂರ್ಣಗೊಂಡಿಲ್ಲವೆಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

       ವೈದ್ಯಕೀಯ ಕಾಲೇಜು ಡೀನ್ ಡಾ ಮಹೀಂದ್ರ ಅವರು ಮಾತನಾಡಿ ಕಾಲೆೇಜಿನ ಬಾಲಕರ ವಸತಿ ಗೃಹಗಳು ಪೂರ್ಣವಾಗಿದೆ. ಆದರೆ, ಬಾಲಕಿಯರ ವಸತಿ ಗೃಹ ಇನ್ನಷ್ಟೆ ಪೂರ್ಣಗೊಳ್ಳಬೆೇಕಿದೆ ಎಂದರು. ಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಲು ಗುತ್ತಿಗೆದಾರರ ಮೇಲೆ ಒತ್ತಡ ಹೇರುವಂತೆ ಸಚಿವರು ತಿಳಿಸಿದರು. ಇದೇ ಆ.26 ರಂದು ಜಿಲ್ಲೆಗೆ ಮತ್ತೆ ತಾನು ಆಗಮಿಸಲಿದ್ದು, ಕಾಮಗಾರಿಯ ಪ್ರಗತಿಯ ಬಗ್ಗೆ ನಿಗಾ ವಹಿಸುವುದಾಗಿ ತಿಳಿಸಿದರು.

      

ಎಂಎಲ್‌ಸಿ ವೀಣಾ ಅಚ್ಚಯ್ಯ, ಜಿಲ್ಲಾಧಿಕಾರಿಡಾ ರಿಚರ್ಡ್ ವಿನ್ಸೆಂಟ್ ಡಿಸೋಜ, ಎಡಿಸಿ ಸತೀಶ್ ಕುಮಾರ್, ಮೂಡಾ ಅಧ್ಯಕ್ಷೆ ಸುರಯ್ಯೆ ಅಬ್ರಾರ್, ನಗರಸಭಾ ಅಧ್ಯಕ್ಷೆ ಶ್ರೀಮತಿ ಬಂಗೇರ, ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ಎಸ್. ತಮ್ಮಯ್ಯ ಸೇರಿದಂತೆ ಹಲವು ಪ್ರಮುಖರು ಈ ಸಂದರ್ಭ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News