×
Ad

ಭದ್ರಾ ಡ್ಯಾಂನಲ್ಲಿ ನೀರಿನ ಅಭಾವ: ರೈತ ಕಂಗಾಲು

Update: 2016-08-16 22:15 IST

<ಬಿ. ರೇಣುಕೇಶ್

ಶಿವಮೊಗ್ಗ, ಆ. 16: ನಿರೀಕ್ಷಿತ ಪ್ರಮಾಣದಲ್ಲಿ ಮುಂಗಾರು ಮಳೆ ಯಾಗದಿರುವುದರ ನೇರ ಪರಿಣಾಮ ಪ್ರಮುಖ ಜಲಾಶಯಗಳ ನೀರಿನ ಸಂಗ್ರಹದ ಮೇಲೆ ಬೀರಿದೆ. ಶಿವಮೊಗ್ಗ-ದಾವಣಗೆರೆ ಜಿಲ್ಲೆಯ ರೈತರ ಜೀವನಾಡಿಯೆಂದೇ ಕರೆಯಲಾಗುವ ಭದ್ರಾ ಜಲಾಶಯದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ನೀರು ಸಂಗ್ರಹವಾಗಿಲ್ಲ. ಇದರಿಂದ ಅಚ್ಚುಕಟ್ಟು ವ್ಯಾಪ್ತಿಯಲ್ಲಿನ ಭತ್ತ ಬೆಳೆಗಾರರು ಆತಂಕಿತರಾಗಿದ್ದಾರೆ. ಮಂಗಳವಾರ ಜಿಲ್ಲಾಡಳಿತ ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ, ಭದ್ರಾ ಜಲಾಶಯದ ನೀರಿನ ಮಟ್ಟ 155.20 (ಗರಿಷ್ಠ ಮಟ್ಟ : 186) ಅಡಿಯಿದೆ. 5, 052 ಕ್ಯೂಸೆಕ್ಸ್ ಒಳಹರಿವಿದ್ದು, 3, 165 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಕಳೆದ ವರ್ಷ ಇದೇ ದಿನದಂದು ಡ್ಯಾಂನ ನೀರಿನ ಮಟ್ಟ 168.11 ಅಡಿಯಿತ್ತು. ಪ್ರಸ್ತುತ ವರ್ಷ ಜಲಾನಯನ ಪ್ರದೇಶದಲ್ಲಿ ಉಂಟಾದ ಮಳೆ ಕೊರತೆಯಿಂದ, ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಪ್ರಸ್ತುತ ವರ್ಷ ಸುಮಾರು 13 ಅಡಿಯಷ್ಟು ಕಡಿಮೆ ನೀರು ಸಂಗ್ರಹವಾಗಿದೆ. ಪ್ರಸ್ತುತ ಹೊರಹರಿವನ್ನು ಹೆಚ್ಚಿಸಿರುವುದರಿಂದ ಡ್ಯಾಂನಲ್ಲಿ ನೀರಿನ ಸಂಗ್ರಹಣೆಗೆ ಒತ್ತು ನೀಡಲು ಸಾಧ್ಯವಾಗದಂತಾಗಿದೆ. ಒಂದೇ ಅಡಿ ಹೆಚ್ಚಿದೆ!: ರಾಜ್ಯದ ಪ್ರಮುಖ ಜಲವಿದ್ಯುತ್ ಉತ್ಪಾದನಾ ಕೇಂದ್ರವಾದ ಲಿಂಗನಮಕ್ಕಿ ಜಲಾಶಯದ ನೀರಿನ   ುಟ್ಟ 1, 788.50 (ಗರಿಷ್ಠ ಮಟ್ಟ : 1819) ಅಡಿಯಿದೆ. 1, 790.05 ಕ್ಯೂಸೆಕ್ ಒಳಹರಿವಿದ್ದು, ಹೊರಹರಿವನ್ನು ಸಂಪೂ ರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಕಳೆದ ವರ್ಷ ಇದೇ ದಿನದಂದು ಡ್ಯಾಂನ ನೀರಿನ ಮಟ್ಟ 1, 787.20 ಅಡಿಯಿತ್ತು. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಪ್ರಸ್ತುತ ವರ್ಷ 1 ಅಡಿ ನೀರು ಹೆಚ್ಚು ಸಂ

್ರಹವಾಗಿದೆ. ಉಳಿದಂತೆ ಕಡಿಮೆ ವ್ಯಾಪ್ತಿ-ವಿಸ್ತೀರ್ಣ ಹೊಂದಿರುವ ತುಂಗಾ ಜಲಾಶಯವು ಜೂನ್ ತಿಂಗಳಲ್ಲಿಯೇ ಗರಿಷ್ಠ ಮಟ್ಟವಾದ 588.24 ಅಡಿ ತಲುಪಿದೆ. 9, 604 ಕ್ಯೂಸೆಕ್ ಒಳಹರಿವಿದ್ದು, 7, 918 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಮಾಣಿ ಜಲಾಶಯದ ನೀರಿನ ಮಟ್ಟ 584.05 (ಗರಿಷ್ಠ ಮಟ್ಟ 594.36) ಅಡಿಯಿದೆ. 3, 890 ಕ್ಯೂಸೆಕ್ ಒಳಹರಿವಿದ್ದು, ಹೊರಹರಿವನ್ನು ಸ್ಥಗಿತಗೊಳಿಸಲಾಗಿದೆ. ಹುಲಿಕಲ್ ಪಿಕ್‌ಅಪ್‌ನ ನೀರಿನ ಮಟ್ಟ 562.40 (ಗರಿಷ್ಠ ಮಟ್ಟ : 563.88) ಅಡಿಯಿದೆ. ಚಕ್ರ ಡ್ಯಾಂನ ನೀರಿನ ಮಟ್ಟ 576.38 (ಗರಿಷ್ಠ ಮಟ್ಟ : 579.12) ಅಡಿಯಿದೆ. ಸಾವೇಹಕ್ಲು ಡ್ಯಾಂನ ನೀರಿನ ಮಟ್ಟ 579.40 (ಗರಿಷ್ಠ ಮಟ್ಟ : 582) ಅಡಿಯಿದೆ. ಅಸಮ್ಮತಿ?:

ಮಳೆ ಕೊರತೆಯಿಂದ ಪ್ರಮುಖ ಜಲಾಶಯಗಳಲ್ಲಿ ನೀರಿನ ಸಂಗ್ರಹದ ಪ್ರಮಾಣ ಕಡಿಮೆಯಾಗಿರುವುದರಿಂದ ಮೋಡ ಬಿತ್ತನೆಯ ಮೂಲಕ ಮಳೆ ಸುರಿಸುವ ಪ್ರಸ್ತಾಪ ಸಕಾರದ ಮುಂದಿತ್ತು. ಆದರೆ ಹವಾಮಾನ ತಜ್ಞರು ಮೋಡ ಬಿತ್ತನೆಗೆ ಅಸಮ್ಮತಿ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಮೋಡ ಬಿತ್ತನೆಯ ಪ್ರಸ್ತಾಪದಿಂದ ಹಿಂದೆ ಸರಿಯಲು ನಿರ್ಧರಿಸಿದೆ. ಈ ನಡುವೆ ಸೆಪ್ಟಂಬರ್, ಅಕ್ಟೋಬರ್ ತಿಂಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆಯ ಮೂಲಗಳು ಹೇಳುತ್ತಿವೆ. ಒಂದು ವೇಳೆ ಮಳೆಯಾಗದಿದ್ದರೆ ಬೇಸಿಗೆ ಆರಂಭದ ವೇಳೆಗೆ ಜಲಾಶಯಗಳು ಬರಿದಾಗುವ ಸಾಧ್ಯತೆಯೂ ಅಲ್ಲಗಳೇಯಲು ಸಾಧ್ಯವಿಲ್ಲದಂತಾಗಿದೆ. ಒಟ್ಟಾರೆ ಮಳೆಯ ಕೊರತೆಯ ಬಿಸಿ ಜಲಾಶಯಗಳ ಮೇಲೆ ಬಿದ್ದಿದ್ದು, ಭವಿಷ್ಯದ ಬೇಸಿಗೆಯು ಕರಾಳವಾಗುವ ಸಾಧ್ಯತೆಯಿದೆ.

ಜಿಲ್ಲೆಯಾದ್ಯಂತ ತುಂತುರು ಮಳೆ: ಜಿಲ್ಲೆಯಾದ್ಯಂತ ಧಾರಾಕಾರ ಮಳೆ ಕಣ್ಮರೆಯಾಗಿದ್ದು, ತುಂತುರು ಮಳೆಯಾಗುತ್ತಿದೆ. ಬಿಸಿಲು ಬೀಳುತ್ತಿದೆ. ಮಳೆಗಾಲದ ವಾತಾವರಣ ಕಣ್ಮರೆಯಾಗಿದೆ. ಮಂಗಳವಾರ ಬೆಳಗ್ಗೆಯ ಮಾಹಿತಿಯಂತೆ ಜಿಲ್ಲೆಯ ಏಳು ತಾಲೂಕು ಕೇಂದ್ರ ವ್ಯಾಪ್ತಿಯಲ್ಲಿ ಬಿದ್ದ ಒಟ್ಟಾರೆ ಮಳೆಯ ಸರಾಸರಿ ಪ್ರಮಾಣ 5.20 ಮಿ.ಮೀ. ಮಳೆಯಾಗಿದೆ.

ಬರಗಾಲ ಪರಿಸ್ಥಿತಿ:

ಲೆನಾಡಿನಲ್ಲಿ ಮಳೆಯ ತೀವ್ರ ಕೊರತೆಯಿಂದ ಬರಗಾಲದ ಪರಿಸ್ಥಿತಿ ಮನೆ ಮಾಡಿದೆ. ಪ್ರಸ್ತುತ ಬಿಸಿಲು ಬೀಳುತ್ತಿದೆ. ಪ್ರಮುಖ ಜಲಾಶಯ, ಕೆರೆಕಟ್ಟೆಗಳು ತುಂಬದಿರುವುದರಿಂದ ಭತ್ತ ನಾಟಿ ಮಾಡಲು ರೈತರು ಹಿಂದೇಟು ಹಾಕುತ್ತಿದ್ದಾರೆ. ಈಗಾಗಲೇ ಜಿಲ್ಲೆಯ ಹಲವೆಡೆ ನಾಟಿ ಮಾಡಲಾಗಿರುವ ಭತ್ತಕ್ಕೆ ನೀರಿನ ಅಭಾವ ತಲೆದೋರಿದೆ. ಮೆಕ್ಕೆಜೋಳ ಬೆಳೆಗೂ ಮಳೆಯ ಅಗತ್ಯವಿದ್ದು, ಮಳೆ ಬಾರದಿದ್ದರೆ ಕಾಳುಗಳು ಜೊಳ್ಳಾಗಲಿವೆ ಎಂದು ರೈತರು ಆತಂಕ ವ್ಯಕ್ತ ಪಡಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News