×
Ad

ಗೋರಕ್ಷಕ ಸಂಘಟನೆಗಳ ನಿಷೇಧಕ್ಕೆ ಮಾದಿಗ ದಂಡೋರ ಪಟ್ಟು

Update: 2016-08-18 00:02 IST

ಬೆಂಗಳೂರು, ಆ.17: ದೇಶದೆಲ್ಲೆಡೆ ಕ್ಷುಲ್ಲಕ ಕಾರಣಕ್ಕೆ ದಲಿತ ಮೇಲೆ ಗಂಭೀರ ಹಲ್ಲೆಗಳನ್ನು ನಡೆಸುತ್ತಿರುವ ಗೋರಕ್ಷಕ ಸಂಘಟನೆಗಳನ್ನು ನಿಷೇಧಿಸುವ ಜತೆಗೆ ಪರಿಶಿಷ್ಟ ಜಾತಿ-ಪಂಗಡ ದೌರ್ಜನ್ಯ ತಡೆ ಕಾಯ್ದೆಯನ್ನು ಬಲಗೊಳಿ ಸಬೇಕೆಂದು ಮಾದಿಗ ಮೀಸಲಾತಿ ಹೋರಾಟ ಸಮಿತಿ ಪಟ್ಟುಹಿಡಿದಿದೆ.

ಬುಧವಾರ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಮಾದಿಗ ಮೀಸಲಾತಿ ಹೋರಾಟ ಸಮಿತಿ, ಭಾರತ ಸಂವಿಧಾನ ಹಕ್ಕುಗಳ ಸಂರಕ್ಷಣಾ ವೇದಿಕೆ, ಕರ್ನಾಟಕ ರಾಜ್ಯ ಗುತ್ತಿಗೆ ಪೌರಕಾರ್ಮಿಕರು, ದಿನಗೂಲಿ ನೌಕರರು ಸಂಘದ ಕಾರ್ಯಕರ್ತರು ದೇಶದೆಲ್ಲೆಡೆ ದಲಿತರ ಮೇಲಿನ ಹಲ್ಲೆಗಳನ್ನು ವಿರೋಧಿಸಿ ಹಾಗೂ ಗೋ-ರಕ್ಷಣೆ ನೆಪದಲ್ಲಿ ನಕಲಿ ಗೋರಕ್ಷ ಸಂಘಗಳನ್ನು ಕೂಡಲೇ ನಿಷೇಧಿಸಬೇಕೆಂದು ಒತ್ತಾಯಿಸಿ ಬೃಹತ್ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯ ನೇತೃತ್ವವಹಿಸಿ ಮಾ 
ನಾಡಿದ ಮಾದಿಗ ಮೀಸಲಾತಿ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಬಿ.ಎ.ಕೇಶವ ಮೂರ್ತಿ, ರಾಷ್ಟ್ರಾದ್ಯಂತ ಶೋಷಿತ ಸಮುದಾಯದ ಮೇಲೆ ಮರುಕಳಿ ಸುತ್ತಿರುವ ದಬ್ಬಾಳಿಕೆ, ಶೋಷಣೆಗೆ ತಡೆಯಿಲ್ಲ ದಂತಾಗಿದೆ. ಮೇಲ್ಕಂಡ ಆರೋಪದಲ್ಲಿ ಆಪಾದಿತರನ್ನು ಪತ್ತೆ ಹಚ್ಚಿ, ಉಗ್ರ ಶಿಕ್ಷೆಗೊಳಪಡಿಸುವಲ್ಲಿ ಸಂಬಂಧಪಟ್ಟ ಕೇಂದ್ರ, ರಾಜ್ಯ ಸರಕಾರ ಸಂಪೂರ್ಣ ವಿಫಲವಾಗಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿಯವರ ಬಗ್ಗೆ ಬಿಜೆಪಿ ಮುಖಂಡ ದಯಾಶಂಕರ್ ಸಿಂಗ್ ಕೀಳು ಮಟ್ಟದಲ್ಲಿ ನಿಂದಿಸಿರುವ ಪ್ರಕರಣ, ಗುಜರಾತ್ ರಾಜ್ಯದಲ್ಲಿ ದಲಿತ ಯುವಕರ ಮೇಲೆ ನಡೆದ ಮಾರಣಾಂತಿಕ ಹಲ್ಲೆ ನಾಗರಿಕ ಸಮಾಜವನ್ನೇ ತಲೆ ತಗ್ಗಿಸುವಂತೆ ಮಾಡಿದೆ. ಹಾವೇರಿ, ಗದಗ ಜಿಲ್ಲೆಯಲ್ಲಿ ದಲಿತ ಸಮುದಾಯವನ್ನು ಸಾಮಾಜಿಕವಾಗಿ ಬಹಿಷ್ಕರಿಸಲಾಗಿದೆ.
ಅದೇ ರೀತಿ, ಟೆಂಡರನ್ನು ರದ್ದುಗೊಳಿಸಿ ಗುತ್ತಿಗೆ ಪೌರ ಕಾರ್ಮಿಕರನ್ನು ಖಾಯಂಗೊಳಿ ಸಬೇಕು. ಅಲ್ಲದೆ, ಖಾಯಂ ಪೌರ ಕಾರ್ಮಿಕರಿಗೆ ನೀುತ್ತಿರುವ ಮನೆ ನಿರ್ಮಾಣಕ್ಕೆ ಆರು ಲಕ್ಷ ರೂ. ಸಹಾಯ ಹಣವನ್ನು ಗುತ್ತಿಗೆ ಪೌರ ಕಾರ್ಮಿಕರಿಗೂ ನೀಡಬೇಕು ಎಂದು ಒತ್ತಾಯಿಸಿದರು.
 ಅವರು, ಪರಿಶಿಷ್ಟ ಜಾತಿ-ಪಂಗಡ ಸಮುದಾಯದ ಮೇಲಿನ ದೌರ್ಜನ್ಯ ತಡೆ ಕಾಯ್ದೆಯನ್ನು ಮತ್ತಷ್ಟು ಬಲಗೊಳಿಸಲು ಕಾನೂನನ್ನು ರಚನೆ ಮಾಡಬೇಕೆಂದು ಕೇಶವಮೂರ್ತಿ ಒತ್ತಾಯಿಸಿದರು.
 ಪ್ರತಿಭಟನೆಯಲ್ಲಿ ಮಾದಿಗ ಮೀಸಲಾತಿ ಹೋರಾಟ ಸಮಿತಿಯ ಮುಖಂಡರಾದ ಎನ್.ಅಮರನಾರಾಯಣ, ಎನ್.ಮೂರ್ತಿ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News