×
Ad

ಆರು ಮಂದಿ ಕೆಎಎಸ್ ಅಧಿಕಾರಿಗಳ ವರ್ಗಾವಣೆ

Update: 2016-08-19 00:07 IST

ಬೆಂಗಳೂರು, ಆ.18: ರಾಜ್ಯ ಸರಕಾರವು ಆರು ಮಂದಿ ಕೆಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಗುರುವಾರ ಆದೇಶ ಹೊರಡಿಸಿದೆ.
ನಾಗರಾಜು-ಜಂಟಿ ಮುಖ್ಯ ಚುನಾವಣಾ ಆಯುಕ್ತ(ತಾಂತ್ರಿಕ), ಕೆ.ಎನ್.ರಮೇಶ್-ದಾವಣಗೆರೆ ಅಪರ ಜಿಲ್ಲಾ ದಂಡಾಧಿಕಾರಿ ಹಾಗೂ ಅಪರ ಜಿಲ್ಲಾಧಿಕಾರಿ, ಇಬ್ರಾಹೀಂ ಮೈಗೂರ-ಧಾರವಾಡ ಅಪರ ಜಿಲ್ಲಾ ದಂಡಾಧಿಕಾರಿ ಹಾಗೂ ಅಪರ ಜಿಲ್ಲಾಧಿಕಾರಿಯನ್ನಾಗಿ ವರ್ಗಾವಣೆ ಮಾಡಲಾಗಿದೆ.
ಡಾ.ಶಂಕರಪ್ಪ ವಣಿಕ್ಯಾಳ್-ವಿಜಯಪುರ ಜಿಲ್ಲೆಯ ಇಂಡಿ ಉಪ ವಿಭಾಗಾಧಿಕಾರಿ, ಪ್ರಕಾಶ್ ಗೋಪು ರಜಪೂತ್-ಬೀಳಗಿ ಕೃಷ್ಣ ಮೇಲ್ದಂಡೆ ಯೋಜನೆಯ ವಿಶೇಷ ಭೂ ಸ್ವಾಧೀನಾಧಿಕಾರಿ ಹಾಗೂ ಎಲಿಷಾ ಆಂಡ್ರೂಸ್‌ರನ್ನು ಬೆಂಗಳೂರು ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರದ ಮುಖ್ಯ ಆಡಳಿತಾಧಿ ಕಾರಿಯನ್ನಾಗಿ ವರ್ಗಾವಣೆ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News