×
Ad

ಮುಂಡಗೋಡ: ದೇವರಾಜ ಅರಸು ಅವರ 101ನೆ ಜನ್ಮದಿನಾಚರಣೆ

Update: 2016-08-21 19:07 IST

ಮುಂಡಗೋಡ, ಆ.21: ತಾಲೂಕು ಆಡಳಿತ, ತಾಲೂಕು ಪಂಚಾಯತ್ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಪಟ್ಟಣ ಪಂಚಾಯತ್ ಮುಂಡಗೋಡ ಇವರ ಸಂಯುಕ್ತಾಶ್ರಯದಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ 101ನೆ ಜನ್ಮದಿನಾಚಾರಣೆಯನ್ನು ಶನಿವಾರ ತಾಲೂಕು ಪಂಚಾಯತ್ ಸಭಾಭವನದಲ್ಲಿ ಆಚರಿಸಲಾಯಿತು.

ಜಿಲ್ಲಾ ಪಂಚಾಯತ್ ಸ್ಥಾಯಿ ಸಮಿತಿಯ ಅಧ್ಯಕ್ಷ ಎಲ್.ಟಿ.ಪಾಟೀಲ ಡಿ.ದೇವರಾಜ ಅರಸರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಹಿಂದುಳಿದ ವರ್ಗಗಳ ಜನರ ಕಲ್ಯಾಣಾಭಿವೃದ್ದಿ ಕಾರ್ಯಕ್ರಮಗಳನ್ನು ಜಾರಿಗೆ ತಂದವರೆ ಡಿ.ದೇವರಾಜ ಅರಸ್. ಅವರು ಮುಖ್ಯಮಂತ್ರಿ ಇದ್ದಾಗ ಉಳುವವನೇ ಭೂ ಒಡೆಯ ಎಂಬ ಕಾನೂನ ಜಾರಿಗೆ ತಂದು ಜಮೀನು ಇಲ್ಲದ ರೈತರಿಗೆ ಜಮಿನು ಕೊಡಿಸಿದರು. ಮಾಜಿ ಪ್ರಧಾನಿ ಜಾರಿಗೆ ತಂದ 20 ಅಂಶಗಳ ಕಾರ್ಯಕ್ರಮವನ್ನು ಕರ್ನಾಟಕದಲ್ಲಿ ಅತಿ ಮುತುವರ್ಜಿವಹಿಸಿ ಅನುಷ್ಠಾನಕ್ಕೆ ತಂದು ರಾಜ್ಯವನ್ನು ಮುನ್ನೆಡೆಯುವಂತೆ ಮಾಡಿದರು. ಡಿ.ದೇವರಾಜ ಅರಸು ಅವರು ಕರ್ನಾಟಕ ಕಂಡ ಧೀಮಂತ ನಾಯಕ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಹಶೀಲ್ದಾರ್ ಅಶೋಕ ಗುರಾಣಿ ಮಾತನಾಡಿ, ಹಿಂದುಳಿದ ವರ್ಗಗಳ ಹಾಗೂ ರೈತರ ಪರವಾಗಿ ಕಾನೂನ ಜಾರಿಗೆ ತಂದು ಅವರನ್ನು ಆರ್ಥಿಕವಾಗಿ ಸಾಮಾಜಿಕವಾಗಿ ಬೆಳೆಯುಂತೆ ಮಾಡಿದವರು ಎಂದರು.

ತಾ.ಪಂ ಉಪಾಧ್ಯಕ್ಷ ಕೃಷ್ಣಮೂರ್ತಿ ನಾಡಿಗ್ ಮಾತನಾಡಿ, ಇಂದು ಹಿಂದುಳಿದ ವರ್ಗಗಳು ಆರ್ಥಿಕವಾಗಿ ಶೈಕ್ಷಣಿವಾಗಿ ಸಾಮಾಜಿಕವಾಗಿ ಬೆಳವಣಿಗೆ ಕಂಡಿದ್ದರೆ ಅದು ದೇವರಾಜ್ ಅರಸು ತೆಗೆದುಕೊಂಡ ನಿರ್ಧಾರದಿಂದ ಅನ್ನುವುದನ್ನು ಎದೆ ತಟ್ಟಿ ಹೇಳಬೇಕು ಎಂದರು.

ಜಿಲ್ಲಾಧ್ಯಕ್ಷ ತುಕಾರಾಮ ಗುಡಕರ ಮಾತನಾಡಿ, ದೇವರಾಜ ಅರಸು ಹಿಂದುಳಿದ ವರ್ಗಗಳ ಪರ ಮಾಡಿದ ಕೆಲಸಗಳ ಕುರಿತು ಮಾತನಾಡಿದರು.

ಆದಿಜಾಂಭವ ಹೈಸ್ಕೂಲ್ ಶಿಕ್ಷಕ ರವಿ ಅಕ್ಕಿವಳ್ಳಿ ದೇವರಾಜ ಅರಸರ ಕುರಿತು ಉಪನ್ಯಾಸ ನೀಡಿ, ದೇವರಾಜ ಅರಸ ಜೀವನ ಚರಿತ್ರೆಯನ್ನು ಸಭಿಕರ ಮುಂದೆ ಇಟ್ಟರು. ಕಾರ್ಯಕ್ರಮದಲ್ಲಿ ದೇವರಾಜ ಅರಸರವರ ಪ್ರಭಂದ ಸ್ಪರ್ಧೆಯಲ್ಲಿ ವಿಜೇತರಾದ ಹಾಗೂ ಎಸೆಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಬಹುಮನವನ್ನು ನೀಡಲಾಯಿತು

 ಹಿಂದುಳಿದ ವರ್ಗಗಳ ತಾಲೂಕು ವಿಸ್ತರಣಾಧಿಕಾರಿ ಎಸ್.ಸಿ.ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿಂದುಳಿದ ವರ್ಗ ಇಲಾಖೆಯ ಮೇಲ್ವಿಚಾರಕ ಎ.ಎಚ್.ಕರೆಪ್ಪ ಕಾರ್ಯಕ್ರಮ ನಿರೂಪಿಸಿದರು. ಮೆಟ್ರಿಕ್ ನಂತರದ ಹಾಸ್ಟೆಲ್ ವಾರ್ಡನ್ ಎನ್.ಆರ್.ಹಿಟ್ಟಣಗಿ ಸ್ವಾಗತಿಸಿದರು.

ಜಿಲ್ಲಾಪಂಚಾಯತ್ ಸದಸ್ಯ ಜಯಮ್ಮ ಹಿರೇಹಳ್ಳಿ, ಕೊಡಂಬಿ ತಾ.ಪಂ ಸದಸ್ಯೆ, ರಮೇಶ ರಾಯ್ಕರ, ಚಿಗಳ್ಳಿ ಗ್ರಾ.ಪಂ ಅಧ್ಯಕ್ಷೆ ಹಾಗೂ ಸದಸ್ಯರು, ಕೃಷ್ಣಾ ಹಿರೇಹಳ್ಳಿ ರೈತ ಸಂಘದ ಅಧ್ಯಕ್ಷ ಶಂಭಣ್ಣಾ ಕೊಳೂರ ಹಿಂದುಳಿದ ವರ್ಗ ಇಲಾಖೆ ಸಿಬ್ಬಂದಿಯಾದ ಶೋಭಾ ಎಚ್., ವಿಮಲಾ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News