ನಿಮ್ಮ ಇಂಟರ್ನೆಟ್ ನಿಧಾನವಾಗಿದೆಯೇ? ನಿಮಗಿದೆ ಶುಭ ಸುದ್ದಿ

Update: 2016-08-21 18:21 GMT

ದುರ್ಬಲ ಬ್ರಾಡ್‌ಬ್ಯಾಂಡ್ ವೇಗ ಮತ್ತು ನಿಧಾನಗತಿಯ ಡೌನ್‌ಲೋಡ್‌ಗಳಿಂದ ಕಷ್ಟಪಡುತ್ತಿದ್ದೀರಾ? ಶೀಘ್ರವೇ ಅದು ಬದಲಾಗಲಿದೆ. ಕನಿಷ್ಠ ಬ್ರಾಡ್‌ಬ್ಯಾಂಡ್ ವೇಗವನ್ನು 512 kbps ನಿಂದ (ಸೆಕೆಂಡಿಗೆ ಕಿಲೋಬೈಟ್) 2 mbps ಗೆ (ಸೆಕೆಂಡಿಗೆ ಮೆಗಾಬೈಟ್) ನಾಲ್ಕು ಪಟ್ಟು ಏರಿಸಲು ಕೇಂದ್ರ ಸರ್ಕಾರ ಯೋಜಿಸಿದೆ. ನಾನು ಈ ವಿಷಯವನ್ನು ಸಂಪರ್ಕ ಸಚಿವಾಲಯದ ಗಮನಕ್ಕೆ ತರುತ್ತಿದ್ದೇನೆ. ಕನಿಷ್ಠ ಬ್ರಾಡ್‌ಬ್ಯಾಂಡ್ ವೇಗವನ್ನು ಈಗಿನ ಮಟ್ಟದಿಂದ ಏರಿಸಲು ಹೊಸ ನೀತಿಯನ್ನು ತರಲು ಯೋಜಿಸುತ್ತಿದ್ದೇವೆ ಎಂದು ಐಟಿ ಸಚಿವ ರವಿ ಶಂಕರ್ ಪ್ರಸಾದ್ ಹೇಳಿದ್ದಾರೆ.

ಭಾರತದಲ್ಲಿ ಸ್ಟಾರ್ಟಪ್ ಪರಿಸರ ಬೆಳೆಯುತ್ತಿರುವಾಗ ಮತ್ತು ಆನ್‌ಲೈನ್ ರಿಟೇಲ್, ಟ್ಯಾಕ್ಸಿಗಳು ಮತ್ತು ಸಾಮಾಜಿಕ ಮಾಧ್ಯಮಗಳು ಸೇರಿದಂತೆ ವಿವಿಧ ಗ್ರಾಹಕ ಸೇವೆಗಳು ಮೊಬೈಲ್ ಫೋನ್, ಆ್ಯಪ್ಸ್ ಮೂಲಕ ಪ್ರಚಾರ ಪಡೆಯುತ್ತಿರುವುದು ಕನಿಷ್ಠ ಇಂಟರ್ನೆಟ್ ವೇಗವನ್ನು ವೈರ್ ಮತ್ತು ವೈರ್ಲೆಸ್ ನೆಟ್ವರ್ಕ್‌ಗಳಲ್ಲಿ ಅಪ್‌ಗ್ರೇಡ್ ಮಾಡಲು ನಿರ್ಧರಿಸಲಾಗಿದೆ. ಹಿಂದಿನ ಬಾರಿ ಕನಿಷ್ಠ ಇಂಟರ್ನೆಟ್ ವೇಗವನ್ನು ಸುಧಾರಿಸಿದ್ದು 2014 ಆಗಸ್ಟಲ್ಲಿ. ಆಗ 256 kbps  ರಿಂದ 512 kbps ಗೆ ಏರಿಸಲಾಗಿತ್ತು. ಔದ್ಯಮಿಕ ತಜ್ಞರ ಪ್ರಕಾರ ಈಗಿನ ವೇಗ ಅತೀ ನಿಧಾನಗತಿಯದು. ಹೀಗಾಗಿ ವೇಗವಾಗಿ ಬೆಳೆಯುತ್ತಿರುವ ಉದ್ಯಮಕ್ಕೆ ಇಂಟರ್ನೆಟ್ ವೇಗ ಏರಿಸುವ ಅಗತ್ಯವಿದೆ. ಈ ನಡೆಯನ್ನು ದೇಶಾದ್ಯಂತ ಟೆಲಿಕಾಂ ನಿರ್ವಾಹಕರು ಸಕಾರಾತ್ಮಕವಾಗಿ ಸ್ವೀಕರಿಸುತ್ತಾರೆ ಎನ್ನುವ ಭರವಸೆಯನ್ನು ರವಿಶಂಕರ್ ಪ್ರಸಾದ್ ವ್ಯಕ್ತಪಡಿಸಿದ್ದಾರೆ.

ದೇಶದಲ್ಲಿ ಟೆಲಿಕಾಂ ನಿರ್ವಾಹಕರು 4ಜಿ ಸೇವೆ ಕೊಡಲು ಮುಂದಾಗುತ್ತಿದ್ದಾರೆ. ಅದರಲ್ಲಿ 10 mpbs ಡಾಟಾ ವೇಗವನ್ನು ನೀಡುವುದಾಗಿ ಆಶ್ವಾಸನೆ ಕೊಡಲಾಗುತ್ತಿದೆ. 4ಜಿಗೆ ಮುಂದಾಗುವುದು ಮತ್ತು ಸ್ಮಾರ್ಟ್ ಫೋನ್ ಬೆಲೆಗಳು 3,000 ರೂಪಾಯಿಗಳಷ್ಟು ಅಗ್ಗವಾಗುತ್ತಿರುವಾಗ ಸರ್ಕಾರವೂ ವೇಗವನ್ನು ಸುಧಾರಿಸುವ ಅಗತ್ಯ ಕಂಡಿದೆ. ಮುಖ್ಯವಾಗಿ 2.4 ಲಕ್ಷ ಗ್ರಾಮ ಪಂಚಾಯತ್ ಗಳನ್ನು ಫೈಬರ್ ಕೇಬಲ್ ನೆಟ್ವರ್ಕ್‌ನಡಿ ಭಾರತ್‌ನೆಟ್ ಎಂದು ಜೋಡಿಸುವ ಕೆಲಸವಾಗುತ್ತಿರುವಾಗ ವೇಗದ ಅಗತ್ಯವಿದೆ. ವರದಿಯ ಪ್ರಕಾರ ಜಾಗತಿಕವಾಗಿ ದಕ್ಷಿಣ ಕೊರಿಯಾದ ಅಕಾಮೈ ಅತೀ ಹೆಚ್ಚು ವೇಗದ 29 mbps ಇಂಟರ್ನೆಟ್ ಕೊಡುತ್ತದೆ. ನಂತರ ನಾರ್ವೆಯಲ್ಲಿ 21.3 mbps ಮತ್ತು ಸ್ವೀಡನಿನಲ್ಲಿ 20.6 mbps ವೇಗದ ಜಾಲವಿದೆ. ಜಾಗತಿಕ ಸರಾಸರಿ 6.3 mbps ಆಗಿದೆ. ನಾಸ್‌ಕಾಮ್ ಪ್ರಕಾರ ಅಕಾಮೈ ಇಂಡಿಯಾ ಭಾರತದಲ್ಲಿ 2015 ಡಿಸೆಂಬರಿನಲ್ಲಿ 330 ಮಿಲಿಯ ಸ್ಥಿರ ಮತ್ತು ಮೊಬೈಲ್ ಇಂಟರ್ನೆಟ್ ಹೊಂದಿದೆ. ಮುಂದಿನ ಐದು ವರ್ಷಗಳಲ್ಲಿ ಶೇ. 20ರಷ್ಟು ಬೆಳೆಯುವ ನಿರೀಕ್ಷೆಯಿದೆ. 2020ರಲ್ಲಿ 730 ಚಂದಾದಾರರನ್ನು ಅದು ಪಡೆಯುವ ಸಾಧ್ಯತೆಯಿದೆ.

ವೇಗದ ಬ್ರಾಡ್‌ಬ್ಯಾಂಡ್ ಸ್ಪೀಡ್ ಆಗಿರುವ 2 mbps ಗೆ ಈಗಾಗಲೇ ಟ್ರಾಯ್ ಅಂಗೀಕಾರ ನೀಡಿದೆ. ವೇಗದ ಇಂಟರ್ನೆಟ್‌ನಿಂದ ದೇಶದ ಪ್ರಗತಿ ಮತ್ತು ಸ್ಪರ್ಧಾತ್ಮಕ ಪರಿಸರಕ್ಕೆ ನೆರವಾಗಲಿದೆ ಮತ್ತು ಗ್ರಾಮೀಣ ಮತ್ತು ನಗರಗಳೆರಡೂ ಏಕೀಕೃತ ವೇಗದಲ್ಲಿ ಪ್ರಗತಿಯಾಗಲಿದೆ ಎಂದು ಸರ್ಕಾರ ಅಂದಾಜಿಸಿದೆ. ವೇಗವು ಕೆಲವು ಥ್ರೆಶ್‌ಹೋಲ್ಡಿಗಿಂತ ಮೇಲಿರಬೇಕು. ವಿಡಿಯೋ ನೋಡುವುದು ಮತ್ತು ಗೇಮಿಂಗಿಗೆ ಬಳಸಲು ನೆರವಾಗಬೇಕು. ಅಧಿಕ ಇಲೆಕ್ಟ್ರಾನಿಕ್ ಕಮ್ಯುನಿಕೇಶನ್ ವೇಗಗಳು ಜ್ಞಾನ ಆಧರಿತ ಸಮುದಾಯಗಳಲ್ಲಿ ಅಗತ್ಯ. ಇದರಿಂದ ಉತ್ಪಾದನೆ ಹೆಚ್ಚುತ್ತದೆ ಮತ್ತು ಸ್ಪರ್ಧಾತ್ಮಕ ಪರಿಸರವನ್ನು ಸೃಷ್ಟಿಸುತ್ತದೆ ಎಂದು ಟ್ರಾಯ್ ತನ್ನ ವರದಿಯಲ್ಲಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News