ನಾಟಿ ಔಷಧ ಇಂಗ್ಲಿಷ್ ಔಷಧಕ್ಕಿಂತ ಪರಿಣಾಮಕಾರಿ: ದೇಶಪಾಂಡೆ
ಅಂಕೋಲಾ, ಆ. 22: ಹಾಲಕ್ಕಿ ಸಮುದಾಯದಲ್ಲಿ ಸಾಕಷ್ಟು ನಾಟಿ ವೈದ್ಯರಿದ್ದಾರೆ. ಇಂಗ್ಲಿಷ್ ಔಷಧಗಳಿಗಿಂತಲೂ ನಾಟಿ ಔಷಧಗಳು ಅತ್ಯಂತ ಹೆಚ್ಚು ಪರಿಣಾಮವನ್ನು ಬೀರಬಲ್ಲದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್. ವಿ.ದೇಶಪಾಂಡೆ ಅಭಿಪ್ರಾಯಿಸಿದ್ದಾರೆ. ತಾಲೂಕಿನ ಶಿರಕುಳಿಯಲ್ಲಿ ಇತ್ತೀಚೆಗೆ ಸಂಘದ ಸಭಾಭವನ ಉದ್ಘಾ ಟನಾ ಸಮಾ ರಂಭಕ್ಕೆ ಆಗಮಿಸಿದ ಸಂದರ್ಭ ದಲ್ಲಿ ಗಿಡ ನೆಡುವ ಮೂಲಕ ವನ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು.
ಕಾಡಿನ ಮಧ್ಯೆಯೇ ತಮ್ಮ ಬದುಕನ್ನು ಕಟ್ಟಿಕೊಂಡ ಹಾಲಕ್ಕಿ ಸಮುದಾಯದವರು ನಾಟಿ ಔಷಧಿಯ ಮೂಲಕ ದೇಶಾದ್ಯಂತ ಗುರುತಿಸಿಕೊಂಡವರು. ಉ.ಕ. ಜಿಲ್ಲಾ ಹಾಲಕ್ಕಿ ಒಕ್ಕಲಿಗರ ಸಂಘದ ಅಧ್ಯಕ್ಷ ಹನುಮಂತ ಗೌಡರ ಅಜ್ಜ ಶಿವು ಬೊಮ್ಮು ಗೌಡ ಸ್ವತಃ ತಾವೇ ಮಹಾತ್ಮಾ ಗಾಂಧಿಯವರಿಗೆ ಚಿಕಿತ್ಸೆ ನೀಡಿದ್ದರು ಎನ್ನುವುದು ಹಾಲಕ್ಕಿ ಸಮುದಾಯಕ್ಕೆ ಹೆಮ್ಮೆಯ ಸಂಗತಿ ಎಂದರು.
ಹಾಲಕ್ಕಿ ಸಮುದಾಯದಲ್ಲಿ ಸಾಕಷ್ಟು ನಾಟಿ ವೈದ್ಯರಿದ್ದಾರೆ. ಇಂಗ್ಲಿಷ್ ಔಷಧ ಗಳಿಗಿಂತಲೂ ನಾಟಿ ಔಷಧಗಳು ಅತ್ಯಂತ ಹೆಚ್ಚು ಪರಿಣಾಮವನ್ನು ಬೀರಬಲ್ಲದು ಎಂದು ಅವರು ಅಭಿಪ್ರಾಯಿಸಿದರು.
ಈ ಸಂದರ್ಭದಲ್ಲಿ ಉ.ಕ. ಜಿಲ್ಲಾ ಹಾಲಕ್ಕಿ ಒಕ್ಕಲಿಗರ ಸಂಘದ ಅಧ್ಯಕ್ಷ ಹನುಮಂತ ಬೊಮ್ಮು ಗೌಡ, ಕಾರ್ಯದರ್ಶಿ ಎಂ.ಎಚ್. ಗೌಡ, ಉಪಅರಣ್ಯ ಸಂರಕ್ಷಣಾಧಿಕಾರಿ ಪಿ.ಕೆ.ಪೈ, ವಲಯ ಅರಣ್ಯಾಧಿಕಾರಿ ರಾಘ ವೇಂದ್ರ ನಾಯ್ಕ, ಉಪ ವಲಯ ಅರಣ್ಯಾಧಿಕಾರಿಗಳಾದ ವೆಂಕಟಪ್ಪ ಭೋವಿನ್, ಸಂತೋಷ ಪವಾರ, ಅರಣ್ಯ ರಕ್ಷಕ ಮಂಜುನಾಥ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.