×
Ad

ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ; ಮಹತ್ವದ ದಾಖಲೆಗಳು ವಶ

Update: 2016-08-23 11:26 IST

ಬೆಂಗಳೂರು, ಆ.23: ರಾಜ್ಯದ ಎರಡೂ ವಾಣಿಜ್ಯ ತೆರಿಗೆ ಮತ್ತು ಮೂರು ಆರ್‌ಟಿಒ ಚೆಕ್ ಪೋಸ್ಟ್‌ಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ಇಂದು ಬೆಳಗ್ಗೆ ಮಿಂಚಿನ ದಾಳಿ ನಡೆಸಿದ್ದಾರೆ. ಈ ವೇಳೆ ಹೆಚ್ಚುವರಿ ಹಣ, ಏಜೆಂಟ್‌ಗಳು ಸೇರಿದಂತೆ ಹಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ಉಪ ಲೋಕಾಯುಕ್ತ ಸುಭಾಶ್ ಬಿ. ಅಡಿ ನಿರ್ದೇಶನದಂತೆ ಬೆಂಗಳೂರು ಲೋಕಾಯುಕ್ತ ಎಸ್ಪಿಅಬ್ದುಲ್ ಅಹದ್, ಬೆಂಗಳೂರಿನ ಗ್ರಾಮಾಂತರ ಡಿಎಸ್ಪಿ ತಿಪ್ಪೆಸ್ವಾಮಿ, ಮೈಸೂರು ಎಸ್ಪಿರವಿಕುಮಾರ್ ನೇತೃತ್ವದಲ್ಲಿ ಈ ದಾಳಿಗಳು ನಡೆದಿವೆ.
ಚೆಕ್‌ಪೋಸ್ಟ್‌ಗಳು ಮತ್ತು ಆರ್‌ಟಿಒ ಕಚೇರಿಗಳಲ್ಲಿನ ಅಕ್ರಮಗಳ ಹಿನ್ನೆಲೆಯಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.
ಚಿಕ್ಕಬಳ್ಳಾಪುರದ ಬಾಗೇಪಲ್ಲಿ, ಬಳ್ಳಾರಿಯ ಹಗರಿ ಸೇರಿದಂತೆ ವಿವಿಧ ಕಡೆ ದಾಳಿ ಮುಂದುವರಿದಿದೆ ಎಂದು ದಾಳಿ ನಡೆಸುತ್ತಿರುವ ಅಧಿಕಾರಿಗಳು ಖಚಿತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News