×
Ad

ಭಟ್ಕಳ ಪುರಸಭೆಯ ಅಂಗಡಿ ಮಳಿಗೆಯು ಹರಾಜಾದುದು ಎಷ್ಟು ಮೊತ್ತಕ್ಕೆ ಗೊತ್ತೇ?

Update: 2016-08-23 18:12 IST

ಭಟ್ಕಳ, ಆ.23: ಕಳೆದ ಎರಡು ಮೂರು ದಿನಗಳ ಹಿಂದೆ ಆರಂಭಗೊಂಡ ಇಲ್ಲಿನ ಪುರಸಭೆಯ ಅಂಗಡಿ ಮಳಿಗೆ ಹರಾಜು ಪ್ರಹಸನ ಕೊನೆಗೊಂಡಿದ್ದು, ಚಿಕ್ಕ ಅಂಗಡಿ ಮಳಿಗೆಯೊಂದು ಮಾಸಿಕ ಒಂದು ಲಕ್ಷ ರೂ.ಗೂ ಅಧಿಕ ಮೌಲ್ಯಕ್ಕೆ ಹರಾಜಾಗಿದೆ. ಈ ಹರಾಜು ಪ್ರಕ್ರಿಯೆಯ ಕುರಿತಂತೆ ಜನರಲ್ಲಿ ಅನುಮಾನಗಳು ಮೂಡಿವೆ.

700, 800 ರೂ. ಮಾಸಿಕ ಬಾಡಿಗೆಗೆ ಲಭಿಸುವ ಅಂಗಡಿ ಮಳಿಗೆಗಳಿಗೆ ಭಾರೀ ಮೊತ್ತ ನೀಡಿ ಬಿಡ್ ಮಾಡಿರುವುದು ಸಾರ್ವಜನಿಕರಲ್ಲಿ ಅನುಮಾನವನ್ನು ಹುಟ್ಟುಹಾಕಿದೆ. ಇದರ ಹಿಂದೇ ಬೇರೆ ಏನಾದರೂ ಯೋಜನೆ ಅಡಗಿದೆಯೋ ಎನ್ನುವ ಅನುಮಾನ ಸಾರ್ವಜನಿಕರನ್ನು ಕಾಡುತ್ತಿದೆ. ಬಹಿರಂಗ ಹರಾಜಿನಲ್ಲಿ ಅಂಗಡಿಗಳಿಗೆ ಮಾಸಿಕ ದರವನ್ನು ಇಷ್ಟೊಂದು ಪ್ರಮಾಣದಲ್ಲಿ ಏರಿಕೆ ಮಾಡುವುದರ ಹಿಂದೆ ಕಾಣದ ಕೈಗಳ ಕೈವಾಡ ಇರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.

ಬೇರೆ ಬೇರೆ ಅಂಗಡಿಗಳ ಹಳೆಯ ಮಾಲಕರು ತಮ್ಮಲ್ಲಿಯೇ ಅಂಗಡಿಗಳನ್ನು ಉಳಿಸಿಕೊಳ್ಳಲು 70 ರಿಂದ 1 ಲಕ್ಷದವರೆಗೂ ಬಿಡ್ ಮಾಡಿರುವುದನ್ನು ಗಮನಿಸಿದಾಗ ಅಂಗಡಿದಾರರು ತಮ್ಮ-ತಮ್ಮ ಸಾಮರ್ಥ್ಯವನ್ನು ಪ್ರದರ್ಶನಕ್ಕಿಟ್ಟಂತೆ ಕಾಣುತ್ತದೆ ಎನ್ನುವುದು ಸಾರ್ವಜನಿಕರ ಅಭಿಪ್ರಾಯ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News