×
Ad

ಶಿಕ್ಷಣ ಇಲಾಖೆಯಿಂದ ಸರಕಾರಿ ಶಾಲೆಗಳ ನಿರ್ಲಕ್ಷ

Update: 2016-08-23 22:04 IST

ಶಿಕ್ಷಕರಿಲ್ಲದ ಶೀರೂರು ಶಾಲೆ

ತೀರ್ಥಹಳ್ಳಿ, ಆ.23: ತಾಲೂಕಿನ ಆಗುಂಬೆ ಹೋಬಳಿಯ ಶೀರೂರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಪಾಠ ಮಾಡಲು ಶಿಕ್ಷಕರು ಇಲ್ಲದ ಕಾರಣ ಶಾಲಾ ಮುಂಭಾಗದಲ್ಲಿ ಮಕ್ಕಳು, ಪೋಷಕರು ಹಾಗೂ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಶೀರೂರಿನ ಸಹಿಪ್ರಾ. ಶಾಲೆಯಲ್ಲಿ 48 ಮಕ್ಕಳಿಗೆ ಮೂರು ಜನ ಶಿಕ್ಷಕರಿರಬೇಕಾಗಿತ್ತು. ಆದರೆ, ಕಳೆದ ಒಂದು ವಾರದ ಹಿಂದೆ ಇದ್ದಂತಹ ಒಬ್ಬ ಶಿಕ್ಷಕರನ್ನೂ ಬೇರೆಡೆಗೆ ವರ್ಗಾವಣೆ ಮಾಡಲಾಗಿದೆ. ಕಳೆದ ಎರಡು ದಿನಗಳಿಂದ ಬೇರೆ ಶಾಲೆಯ ಶಿಕ್ಷಕರನ್ನು ನೇಮಿಸಿದ್ದರೂ ಆ ಶಿಕ್ಷಕರು ಗೈರುಹಾಜರಾಗಿದ್ದಾರೆ. ಕಳೆದ ಎರಡು ದಿನಗಳಿಂದ ಶಾಲಾ ಮಕ್ಕಳಿಗೆ ಪಾಠ ಹಾಗೂ ಬಿಸಿಯೂಟ ಇಲ್ಲದ ದುಃಸ್ಥಿತಿ ತಲುಪಿದ್ದು,

್ಥಳಕ್ಕೆ ಡಿಡಿಪಿಐ ಹಾಗೂ ತಾಲೂಕು ಶಿಕ್ಷಣಾಧಿಕಾರಿ ಆಗಮಿಸಿ ನ್ಯಾಯ ದೊರಕಿಸಬೇಕೆಂದು ಪೋಷಕರೊಂದಿಗೆ ಮಕ್ಕಳು ಪ್ರತಿಭಟಿಸಿದರು.

 ಶಾಲೆಯ ಬೀಗ ತೆಗೆಯಲು ಶಿಕ್ಷಕರಿಲ್ಲದೆ ಮಕ್ಕಳು ಶಾಲೆಯ ಕಾಂಪೌಂಡ್ ಹೊರಭಾಗದಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಉಂಟಾಯಿತು. ಇನ್ನೊಂದೆಡೆ ಭಾರೀ ಮಳೆ ಸುರಿಯುತ್ತಿದ್ದರೂ ಮಳೆಯ ನಡುವೆಯೂ ಮಕ್ಕಳು ಪ್ರತಿಭಟನೆ ನಡೆಸಿದರು. ಶಿಕ್ಷಣ ಇಲಾಖೆ ಇಂದು ಸರಕಾರಿ ಶಾಲೆಗಳನ್ನು ಕಡೆಗಣಿಸುತ್ತಿರುವುದರಿಂದಲೆ ಖಾಸಗಿ ಶಾಲೆಗಳು ಮಲೆನಾಡಿನಲ್ಲಿ ತಲೆ ಎತ್ತಲು ಕಾರಣವಾಗಿವೆೆ ಎಂದು ಗ್ರಾಪಂ ಸದಸ್ಯ ಕೊರೋಡಿ ಕೃಷ್ಣಪ್ಪ ಆರೋಪಿಸಿದರು.

ಮಧ್ಯಾಹ್ನದ ನಂತರ ಸ್ಥಳಕ್ಕೆ ಆಗಮಿಸಿದ ಶಿಕ್ಷಣಾಧಿಕಾರಿ ಕೃಷ್ಣಮೂರ್ತಿ ಶೀಘ್ರದಲ್ಲಿಯೇ ಶಿಕ್ಷಕರನ್ನು ನೇಮಿಸುವುದಾಗಿ ಆಶ್ವಾಸನೆ ನೀಡಿದರೂ ಒಪ್ಪದ ಗ್ರಾಮಸ್ಥರು ಹಾಗೂ ಪೋಷಕರು ಪ್ರತಿಭಟನೆಯನ್ನು ಮುಂದುವರಿಸಿದರು. ಈ ಸಂದರ್ಭದಲ್ಲಿ ಜಿಪಂ ಸದಸ್ಯರಾದ ಭಾರತಿ ಪ್ರಭಾಕರ್, ತಾಪಂ ಸದಸ್ಯೆ ವೀಣಾಗಿರೀಶ್, ನಾಲೂರು ಗ್ರಾಪಂ ಸದಸ್ಯರು, ವೆಂಕಟೇಶ್ ಹೆಗ್ಡೆ ಮುಂತಾದವರು ಭಾಗವಹಿಸಿದ್ದರು.

ಈ ಶಾಲೆಯಲ್ಲಿ ಮಕ್ಕಳಿಗೆ ಪ್ರತಿದಿನ ಹೊರಭಾಗದಲ್ಲೇ ಪಾಠ

 ಶಿಕಾರಿಪುರ, ಆ.23: ತಾಲೂಕಿನ ದೊಡ್ಡಜೋಗಿಹಳ್ಳಿ ಗ್ರಾಮದಲ್ಲಿರುವ ಸಾ.ಕಿ.ಪ್ರಾಥಮಿಕ ಶಾಲೆಯ ಕೊಠಡಿಗಳು ಶಿಥಿಲಾವಸ್ಥೆಯಲ್ಲಿರುವ ಹಿನ್ನೆಲೆಯಲ್ಲಿ ಪ್ರತಿದಿನ ಮಕ್ಕಳಿಗೆ ಹೊರಭಾಗದಲ್ಲೇ ಪಾಠ ಮಾಡಲಾಗುತ್ತಿದ್ದು, ಇದನ್ನು ಖಂಡಿಸಿ ಪೋಷಕರು, ಗ್ರಾಮಸ್ಥರು ಮಂಗಳವಾರ ಶಾಲೆ ಮುಂಭಾಗದಲ್ಲಿ ಆಕ್ರೋಶಭರಿತರಾಗಿ ಪ್ರತಿಭಟಿಸಿದರು. ಗ್ರಾಮದಲ್ಲಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಅಂದಾಜು 65 ಮಕ್ಕಳಿದ್ದು, 4 ದಶಕಗಳ ಹಿಂದಿನ ಕೊಠಡಿ ಶಿಥಿಲವಾಗಿ ಕುಸಿದು ಬೀಳುವ ಅಂತಿಮ ಹಂತವನ್ನು ತಲುಪಿದೆ ಸಂಸದರು, ಶಾಸಕರು, ಡಿಡಿಪಿಐ, ಬಿಇಒ ಸಹಿತ ಇಲಾಖೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದರೂ ಯಾವ ಪ್ರಯೋಜನವೈ ಆಗದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಮಂಗಳವಾರ ಶಾಲೆಯ ಮುಂಭಾಗದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದರು.

  ಈ ಸಂದರ್ಭದಲ್ಲಿ ಸ್ಥಳಕ್ಕೆ ಧಾವಿಸಿದ ಬಿಇಒ ಸಿದ್ದಲಿಂಗಪ್ಪರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು ಮತ್ತು ಪೋಷಕರು ಮಾತನಾಡಿ, ಇಂತಹ ದುಸ್ಥಿತಿಯ ಕೊಠಡಿಯ ಶಾಲೆಗೆ ನಿಮ್ಮ ಮಕ್ಕಳನ್ನು ಕೆಲ ದಿನಗಳಿಗೆ ಮಾತ್ರ ಕಳುಹಿಸಿ, ಈಗಾಗಲೇ ಹಲವು ಬಾರಿ ಮನವಿ ನೀಡಿದರೂ ವೌನ ವಹಿಸಿದ್ದೀರಿ, ಮಕ್ಕಳನ್ನು ಶಾಲೆಗೆ ಕಳುಹಿಸಲು ಧೈರ್ಯವಿಲ್ಲ, ಕಳೆದ ವರ್ಷ ಹೊಸ ಕೊಠಡಿಗೆ ಮಂಜೂರಾತಿ ದೊರೆತಿದ್ದರೂ ಇಂದಿಗೂ ಕಾಮಗಾರಿ ಆರಂಭವಾಗಿಲ್ಲ ಅಧಿಕಾರಿಗಳ ನಿರ್ಲಕ್ಷವೇ ಇದಕ್ಕೆ ಕಾರಣವಾಗಿದೆ.

ಈ ಕೂಡಲೇ ಬಾಡಿಗೆ ಕಟ್ಟಡದಲ್ಲಿ ಶಾಲೆ ಆರಂಭಿಸಿ ಶಾಲೆಯನ್ನು ಸ್ಥಳಾಂತರಗೊಳಿಸಿ ಆ.2 ರ ಗಾಂಧಿಜಯಂತಿಯಂದು ಕಟ್ಟಡ ಕಾಮಗಾರಿ ಆರಂಭಿಸಬೇಕು ತಪ್ಪಿದಲ್ಲಿ ಬಿಇಒ ಕಚೇರಿ ಮುಂಭಾಗ ಮಕ್ಕಳ ಜೊತೆ ಉಗ್ರ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ಪೋಷಕರು, ಗ್ರಾಮಸ್ಥರು ಎಚ್ಚರಿಸಿದರು.

  ಗ್ರಾಮಸ್ಥರ ಆಕ್ರೋಶಕ್ಕೆ ತಬ್ಬಿಬ್ಬಾದ ಬಿಇಒ, ಪ್ರತೀ ವರ್ಷ ಸರಕಾರಿ ಶಾಲೆಯ ದುರಸ್ತಿ ನಿರ್ಮಾಣಕ್ಕೆ ಶಾಸಕರಿಗೆ 40 ಲಕ್ಷ ರೂ. ಅನುದಾನವಿದ್ದು, ಈ ಬಾರಿ ವಿಶೇಷವಾಗಿ ಗ್ರಾಮಸ್ಥರ ಪರವಾಗಿ ಶಾಸಕರಿಗೆ ಮನವಿ ಸಲ್ಲಿಸಿ ಹೊಸ ಕೊಠಡಿ ನಿರ್ಮಾಣಕ್ಕೆ ತುರ್ತು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಮುಖಂಡ ಬಿ.ಡಿ ಭೂಕಾಂತ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಹಾಲೇಶನಾಯ್ಕ, ಗ್ರಾಪಂ ಸದಸ್ಯ ದೇವೇಂದ್ರನಾಯ್ಕ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News