ನಗರಸಭೆ ಬ್ಯಾಂಕ್ ಖಾತೆ ಮುಟ್ಟುಗೋಲು

Update: 2016-08-23 16:42 GMT

  ಮಡಿಕೇರಿ, ಆ.23 : ನಗರಸಭೆಯ ನಾಲ್ಕು ಬ್ಯಾಂಕ್‌ಗಳ ಖಾತೆಗಳನ್ನು ಪ್ರಾವಿಡೆಂಟ್ ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಂಡು ಅದರಲ್ಲಿದ್ದ 97 ಲಕ್ಷ ರೂ. ಯನ್ನು ಪ್ರಾವಿಡೆಂಟ್ ಫಂಡ್‌ಗೆ ಜಮಾ ಮಾಡಿಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಲೋಪದ ಸಂಪೂರ್ಣ ಹೊಣೆಗಾರಿಕೆ ಪೌರಾಯುಕ್ತರು ಹಾಗೂ ಲೆಕ್ಕಾಧಿಕಾರಿಗಳದ್ದು ಎಂದು ನಗರಸಭೆೆಯ ಸಾಮಾನ್ಯ ಸಭೆ ನಿರ್ಣಯ ಕೈಗೊಂಡಿದೆ.

ನಗರಸಭಾ ಅಧ್ಯಕ್ಷೆ ಶ್ರೀಮತಿ ಬಂಗೇರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ 97 ಲಕ್ಷ ರೂ. ಪ್ರಾವಿಡೆಂಟ್ ಫಂಡ್ ವಶವಾಗಿರುವ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು. ಅಲ್ಲದೆ, ಪೌರಾಯುಕ್ತೆ ಬಿ.ಬಿ. ಪುಷ್ಪಾವತಿ ಅವರ ವಿರುದ್ಧ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಸಭೆಯ ಆರಂಭದಲ್ಲಿ ವಿಷಯ ಪ್ರಸ್ತಾಪಿಸಿದ ಎಸ್‌ಡಿಪಿಐ ಸದಸ್ಯ ಅಮೀನ್ ಮೊಹ್ಸಿನ್, 97 ಲಕ್ಷ ರೂ. ಯಷ್ಟು ದೊಡ್ಡ ಮೊತ್ತದ ಪ್ರಾವಿಡೆಂಟ್ ಫಂಡ್ ವಶವಾದ ಬಗ್ಗೆ ಅಧ್ಯಕ್ಷರು ಅಥವಾ ಯಾವುದೇ ಸದಸ್ಯರ ಗಮನಕ್ಕೆ ತಾರದೆ ಮುಚ್ಚಿಟ್ಟಿರುವ ಬಗ್ಗೆ ಪ್ರಶ್ನಿಸಿದರು.

  ನಗರಸಭೆಯ ಖಾತೆಗಳನ್ನು ಮುಟ್ಟುಗೋಲು ಹಾಕಿರುವ ವಿರುದ್ಧ ಪೌರಾಯುಕ್ತರು ನ್ಯಾಯಾಲಯದ ಮೂಲಕ ತಡೆಯಾಜ್ಞೆ ತರುವ ಪ್ರಕ್ರಿಯೆಯನ್ನು ನಡೆಸಿದ್ದಾರೆ. ಆದರೆ, ಯಾವುದೇ ಬೆಳವಣಿಗೆಗಳನ್ನು ನಗರಸಭೆಯ ಪ್ರತಿನಿಧಿಗಳ ಗಮನಕ್ಕೆ ತಂದಿಲ್ಲ. ಕಳೆದ ಮೂರು ವರ್ಷಗಳ ಅವಧಿಯಲ್ಲಿ ಅಧಿಕಾರಿಗಳು ತೆರೆಮರೆಯಲ್ಲಿ ಕೆಲಸ ಕಾರ್ಯಗಳನ್ನು ನಡೆಸಿದ್ದಾರೆ. ಪ್ರಾವಿಡೆಂಟ್ ಫಂಡ್‌ಗೆ 35 ಲಕ್ಷ ರೂ.ಗಳಷ್ಟು ಬಡ್ಡಿಯನ್ನು ಪಾವತಿಸಬೇಕಾದ ಪರಿಸ್ಥಿತಿ ಎದುರಾಗುವ ಸಾಧ್ಯತೆಗಳಿವೆ. ಇದು ನಗರಸಭೆಗೆ ದೊಡ್ಡ ಹೊರೆಯಾಗಲಿದೆ ಎಂದು ಅವರು ಆರೋಪಿಸಿದರು.

ಪಿ.ಡಿ. ಪೊನ್ನಪ್ಪ ಮಾತನಾಡಿ, ಅಧಿಕಾರಿಗಳು ತಮ್ಮ ಅಧಿಕಾರದ ವ್ಯಾಪ್ತಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ಈ ಲೋಪಕ್ಕೆ ಅಧಿಕಾರಿಗಳೇ ಹೊಣೆ ಎಂದು ಆರೋಪಿಸಿದರು. ಈ ಸಂಬಂಧ ಮಾತ ನಾಡಿದ ಅಧ್ಯಕ್ಷೆ ಶ್ರೀಮತಿ ಬಂಗೇರ, ಪೌರಾಯುಕ್ತರ ವಿರುದ್ಧ ತೀವ್ರ ಅಸಮಾ ಧಾನ ವ್ಯಕ್ತಪಡಿಸಿ, ಈ ಎಲ್ಲಾ ಬೆಳವಣಿಗೆಗಳಿಗೆ ಪೌರಾಯುಕ್ತರೇ ೊಣೆೆ ಎಂದರು.

ಆಡಳಿತ ಪಕ್ಷದ ಕೆ.ಎಂ. ಗಣೇಶ್ ಹಾಗೂ ಬಿಜೆಪಿಯ ಕೆ.ಎಸ್. ರಮೇಶ್ ಮಾತನಾಡಿ, ಪಿಎಫ್ ವಶವಾದ 97 ಲಕ್ಷ ರೂ. ಗುತ್ತಿಗೆದಾರರಿಂದ ಭರ್ತಿ ಮಾಡುವುದಕ್ಕಾಗಿ ಗುತ್ತಿಗೆದಾರರಿಗೆ ಪೌರಾಯುಕ್ತರು ನೋಟಿಸ್ ಜಾರಿ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು. ಬಳಿಕ ಮಾತನಾಡಿದ ಸದಸ್ಯ ರಮೇಶ್, ಪಿಎಫ್ ಹಣವನ್ನು ತುಂಡು ಗುತ್ತಿಗೆದಾರರು ಭರಿಸುವ ಅಗತ್ಯವಿಲ್ಲ. ಆದರೂ, ನೋಟಿಸ್ ನೀಡುವ ಮೂಲಕ ಪೌರಾಯುಕ್ತರು ತಪ್ಪಿನಿಂದ ನುಣುಚಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ನಗರ ಸಭೆಗೆ ಆದ 97 ಲಕ್ಷ ರೂ. ನಷ್ಟವನ್ನು ಪೌರಾಯುಕ್ತರೇ ಭರಿಸಬೇಕೆಂದು ಒತ್ತಾಯಿಸಿದರು. ಈ ವೇಳೆ ಮಾತನಾಡಿದ ಪೌರಾಯುಕ್ತೆ ಬಿ.ಬಿ. ಪುಷ್ಪಾವತಿ, ನಗರಸಭೆಯ ಖಾತೆಗಳನ್ನು ಸುಮೋಟೋದಡಿ ಮುಟ್ಟುಗೋಲು ಹಾಕಲಾಗಿದೆ. ಇದಕ್ಕೆ ತ್ವರಿತವಾಗಿ ತಡೆಯಾಜ್ಞೆ ತರುವ ಅಗತ್ಯವಿದೆ.ಆದ್ದರಿಂದ ಕಾನೂನು ಸಲಹೆ ಪಡೆದು ನ್ಯಾಯಾಲಯದ ಮೊರೆ ಹೋಗಿದ್ದಾಗಿ ಸಮರ್ಥಿಸಿಕೊಂಡರು. ತಾವು ಯಾವುದೇ ಗುತ್ತಿಗೆದಾರರರ ಸಭೆ ನಡೆಸಿಲ್ಲ ಎಂದ ಅವರು, 2011 ರಿಂದಲೇ ಇಂತಹ ಲೋಪಗಳು ನಡೆ ಯುತ್ತಿವೆ ಎಂದು ಸಭೆಗೆ ಸಮಜಾಯಿಷಿ ನೀಡಿದರು.

ಈ ಸಂದರ್ಭ ಮಾತನಾಡಿದ ಪೌರಾಯುಕ್ತರು, ತಾನು ಯಾವುದೇ ಗುತ್ತಿಗೆದಾರರಿಗೆ ಈ ರೀತಿ ಹೇಳಿಲ್ಲ. ಗುತ್ತಿಗೆದಾರರೇ ಬಂದು ಇದನ್ನು ಸಾಬೀತುಪಡಿಸಲಿ ಎಂದು ಮರುಉತ್ತರಿಸಿದರು.ಸ್ಥಾಯಿ ಸಮಿತಿ ಅಧ್ಯಕ್ಷ ಮನ್ಸೂರ್ ಮಾತನಾಡಿ, ಸಜಿತ್ ಕುಮಾರ್ ನಡೆಸಿದ ಅವ್ಯವಹಾರ ಸೇರಿದಂತೆ ಇದೀಗ ಪಿಎಫ್ ವಶವಾಗಿರುವ ಹಣ ಸೇರಿ ಒಟ್ಟು ನಗರಸಭೆೆಗೆ ಸುಮಾರು 2 ಕೊಟಿ ರೂ. ನಷ್ಟವಾಗಲಿದೆ ಎಂದು ಟೀಕಿಸಿದರು. ಸುದೀರ್ಘ ಚರ್ಚೆಯ ನಂತರ ಕೆ.ಎಂ. ಗಣೇಶ್ ಅವರ ಸಲಹೆಯಂತೆ 2012ರಿಂದ ನಗರಸಭೆಯಲ್ಲಿ ಆಗಿರುವ ಪಿಎಫ್‌ನ ಲೋಪಗಳಿಗೆ ಪೌರಾಯುಕ್ತರು ಹಾಗೂ ಲೆಕ್ಕಾಧಿಕಾರಿಗಳು ನೇರ ಹೊಣೆ ಮತ್ತು ನಗರಸಭೆೆಗೆ ಆದ ನಷ್ಟದ ಹಣವನ್ನು ಬಡ್ಡಿ ಸಹಿತ ಭರ್ತಿ ಮಾಡಬೆೇಕೆಂದು ನಿರ್ಣಯ ಕೈಗೊಳ್ಳಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News