×
Ad

ಜಮೀನು ಖರೀದಿಸಲು ನನ್ನ ತಾಯಿ ಸ್ವತಂತ್ರರು: ಅರವಿಂದ್‌ ಜಾಧವ್‌

Update: 2016-08-24 11:45 IST

ಬೆಂಗಳೂರು, ಆ.24 :  ಬೆಂಗಳೂರಿನಲ್ಲಿ ಖರೀದಿಸಲಾದ ಜಮೀನಿಗೆ ಸಂಬಂಧಿಸಿ ಸ್ಪಷ್ಟನೆ ನೀಡಿರುವ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಅವರವಿಂದ್‌ ಜಾಧವ್‌ ಅವರು" ಹದಿನಾಲ್ಕು  ವರ್ಷಗಳ ನನ್ನ ತಾಯಿ ತಾರಾಬಾಯಿ ಮಾರುತಿರಾವ್ ಜಾಧವ್‌   ಕಾನೂನು ಪ್ರಕಾರ ಜಮೀನು ಖರೀದಿಸಿದ್ದಾರೆ.ನ್ಯಾಯಾಲಯಕ್ಕೆ ಹೋಗುವುದಕ್ಕೂ ನಮಗೆ ಅವಕಾಶ ಇದೆ ಎಂದು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಅರವಿಂದ ಜಾಧವ್‌ಹೇಳಿದ್ದಾರೆ.
ತನ್ನ ವಿರುದ್ಧ ಭೂಕಬಳಿಕೆಯ ಆರೋಪಕ್ಕೆ ಸಂಬಂಧಿಸಿ ಇಂದು ಸ್ಪಷ್ಟನೆ ನೀಡಿರುವ ಮುಖ್ಯ ಕಾರ್ಯದರ್ಶಿ ಜಾಧವ್‌ " ತನ್ನಲ್ಲಿದ್ದ ಜಮೀನನ್ನು ಮಾರಿ ನನ್ನ ತಾಯಿ ಜಮೀನು ಖರೀದಿಸಿದ್ದಾರೆ. ಅವರು ಖರೀದಿಸಲು ಸ್ವತಂತ್ರರು.ಅವರು  ಜಮೀನು ಖರೀದಿಸುವಾಗ  ನಾನು ಕೇಂದ್ರ ಸರಕಾರದ ನಿಯೋಜನೆ ಮೇರೆಗೆ ದಿಲ್ಲಿಯಲ್ಲಿದ್ದೆ. ಖರೀದಿಸಿದ ಜಮೀನು ಪೋಡಿಯಾಗದ ಹಿನ್ನೆಲೆಯಲ್ಲಿ ಸಮಸ್ಯೆ ಉಂಟಾಗಿದೆ ಎಂದು ಅವರು ಹೇಳಿದ್ದಾರೆ.
 ಅರವಿಂದ ಜಾದವ್ ವಿರುದ್ಧ ನಿಯಮ ಬಾಹಿರವಾಗಿ ಸರಕಾರಿ  ಭೂಮಿ ಕಬಳಿಸಿದ ಆರೋಪ ಕೇಳಿ ಬಂದಿದ್ದು,ಅರವಿಂದ ಜಾಧವ್‌ ಅವರ ತಾಯಿ ತಾರಾಬಾಯಿ ಮಾರುತಿರಾವ್ ಜಾಧವ್‌  ಆನೇಕಲ್‌ ತಾಲೂಕಿನ ಸರ್ಜಾಪುರ  ಹೋಬಳಿ ರಾಮನಾಯಕನಹಳ್ಳಿಯಲ್ಲಿ  ಖರೀದಿಸಿರುವ ಸರ್ಕಾರಿ ಭೂಮಿ ಈಗ ವಿವಾದಕ್ಕೆ ಕಾರಣವಾಗಿದೆ.
ಈ ಜಮೀನಿಗೆ  ದಾಖಲೆ ಸೃಷ್ಟಿಸಲು ಮುಖ್ಯ ಕಾರ್ಯದರ್ಶಿ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆಂಬ ಆರೋಪವೂ  ಕೇಳಿಬಂದಿದೆ. ಜೂನ್‌ ತಿಂಗಳಲ್ಲಿ ನಿವೃತ್ತರಾಗಿದ್ದ ಜಾಧವ್‌ ಅವರ ಸೇವಾವಧಿ ಮೂರು ತಿಂಗಳು ವಿಸ್ತರಣೆಯಾಗಿತ್ತು.
ಈ ವಿವಾದಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿರುವ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರು" ಜಾಧವ್‌ ಖರೀಸಿರುವ ಜಮೀನಿನ ಪರಿಶೀಲನೆ ಕಂದಾಯ ಇಲಾಖಾ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಜಮೀನನ್ನು ತಾರಾಬಾಯಿ ಮಾರುತಿರಾವ್ ಜಾಧವ್‌  ಅವರ ಹೆಸರಿಗೆ ಗ್ರಾಂಟ್‌ ಮಾಡಲಾಗಿದೆಯೋ ? ಅಥವಾ ಮಾರಾಟ ಮಾಡಲಾಗಿದೆಯೋ ಎಂಬ ಬಗ್ಗೆ ತನಿಖೆ ನಡೆಸುವಂತೆ ಕಂದಾಯ ಇಲಾಖಾ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News