ಬೈಕ್-ಪಿಕ್‌ಅಪ್ ಢಿಕ್ಕಿ: ಓರ್ವ ಮೃತ್ಯು
Update: 2016-08-24 22:02 IST
ಸಿದ್ದಾಪುರ, ಆ.24: ಬೈಕ್ ಮತ್ತು ಪಿಕ್‌ಅಪ್ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ಸಮೀಪದ ಹೇರೂರು ಬಳಿ ಬುಧವಾರ ಬೆಳಗ್ಗೆ ಸಂಭವಿಸಿದೆ.
ಮಾಲ್ದಾರೆಯ ಗೇಟ್ ಹಾಡಿಯ ನಿವಾಸಿ ಮಂಜು(36)ಮೃತ ವ್ಯಕ್ತಿ. ಸಿದ್ದಾಪುರ ಕಡೆಗೆ ಬೈಕ್‌ನಲ್ಲಿ ಬರುತ್ತಿದ್ದ ಸಂದರ್ಭ ಸಿದ್ದಾಪುರದಿಂದ ಮಾಲ್ದಾರೆಗೆ ತೆರಳುತ್ತಿದ್ದ ಪಿಕ್‌ಅಪ್ ಢಿಕ್ಕಿ ಹೊಡೆದಿದೆ. ಪರಿಣಾಮ ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಮಂಜು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದರು. ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.