×
Ad

ಮೇಲ್ದರ್ಜೆಗೇರಿದ ಪುರಸಭೆಯಿಂದ ಪಟ್ಟಣದ ಜನತೆಗೆ ವಂಚನೆ: ಸರಕಾರದ ನಿರ್ಲಕ್ಷ್ಯ

Update: 2016-08-24 22:07 IST

ವೀರಾಜಪೇಟೆ, ಆ.24: ಅನೇಕ ವರ್ಷಗಳ ಹಿಂದೆ ಪುರಸಭೆಯಾಗಿ ಕಾರ್ಯ ನಿರ್ವಹಿಸುತ್ತಿದ್ದ ವೀರಾಜಪೇಟೆ ಪುರಸಭೆ ಜನಸಂಖ್ಯೆ ಆಧಾರದ ಮೇಲೆ ಮಂಡಲ ಪಂಚಾಯತ್ ನಂತರ ಪಟ್ಟಣ ಪಂಚಾಯತ್ ಆಗಿ ಪರಿವರ್ತನೆಗೊಂಡಿದೆ. ಮೂರು ವರ್ಷಗಳ ಹಿಂದೆಯೇ ಜನಸಂಖ್ಯೆ ಆಧಾರದಲ್ಲಿ ಮೇಲ್ದ ರ್ಜೆಯ ಪುರಸಭೆಯಾಗಬೇಕಾಗಿದ್ದರೂ ಸರಕಾರ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಈಗಲೂ ವೀರಾಜಪೇಟೆ ಪಟ್ಟಣ ಪಂಚಾಯತ್ ಆಗಿಯೇ ಮುಂದುವರಿದಿರುವುದು ದುರದೃಷ್ಟಕರ ಹಾಗೂ ಪಟ್ಟಣದ ಜನತೆಗೆ ಆದ ವಂಚನೆ ಎಂದು ಜಾತ್ಯತೀತ ಜನತಾದಳ ಕಾರ್ಯಾಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ದೂರಿದರು.

ವೀರಾಜಪೇಟೆ ಪಟ್ಟಣ ಪಂಚಾಯತ್ ವ್ಯಾಪ್ತಿಯ ಆರನೆ ಬ್ಲಾಕ್ ಶಾಂತಿನಗರದಲ್ಲಿ ಪಕ್ಷದ ಸದಸ್ಯತ್ವ ನೋಂದಣಿಯ ಅಂಗವಾಗಿ ನಡೆದ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಧರ್ಮದ ಮೂಲಕ ಸಮಾಜವನ್ನು ಒಡೆದು ಆಳುವ ಪಕ್ಷವನ್ನು ಬೆಂಬಲಿಸಿದರೆ ಸಮಾಜ ನೆಮ್ಮದಿ, ಶಾಂತಿ-ಸುಖವನ್ನು ಕಳೆದುಕೊಂಡು ದುಸ್ತರ ಜೀವನ ಸಾಗಿಸಬೇಕಾಗುತ್ತದೆ. ಇಂದು ಸರಕಾರ ನಡೆಸುತ್ತಿರುವ ಆಡಳಿತ ಪಕ್ಷವು ನಾಮಕಾವಸ್ಥೆಗೆ ಮಾತ್ರ ಜಾತ್ಯತೀತ ಬಣ್ಣವನ್ನು ಲೇಪಿಸಿಕೊಂಡಿದೆ. ಈ ಸರಕಾರ ಅಲ್ಪಸಂಖ್ಯಾತರಿಗೆ ರಕ್ಷಣೆ ನೀಡಲು ವಿಫಲಗೊಂಡಿದೆ. ಜಾತ್ಯತೀತ ತತ್ವ ಸಿದ್ಧಾಂತಗಳ ಆಧಾರದ ಮೇಲೆ ಮುಂದುವರಿದಿರುವ ಜನತಾದಳ ಪಕ್ಷವನ್ನು 18ವರ್ಷ ತುಂಬಿದ ಯುವಕ, ಯುವತಿಯರು ಮತದಾರರ ಪಟ್ಟಿಗೆ ಸೇರ್ಪಡೆಗೊಂಡು ಜಾತ್ಯತೀತತೆಗೆ ಸಮಾನ ಅವಕಾಶ ಕೊಡುತ್ತಿರುವ ಜನತಾದಳವನ್ನು ಬೆಂಬಲಿಸುವಂತೆ ತಿಳಿಸಿದರು. ಪಕ್ಷದ ಮುಖಂಡ ಹಾಗೂ ವೀರಾಜಪೇಟೆ ಪಟ್ಟಣ ಪಂಚಾಯತ್ ಹಿರಿಯ ಸದಸ್ಯ ಎಸ್.ಎಚ್. ಮತೀನ್ ಮಾತನಾಡಿ, ಈಗಿನ ಸರಕಾರದ ಅನುದಾನದ ಕೊರತೆಯಿಂದಾಗಿ ಬಡಾವಣೆಗಳಲ್ಲಿ ಕೈಗೊಳ್ಳಬೇಕಾದ ಅಭಿವೃದ್ಧಿ ಕಾಮಗಾರಿಗೆ ಹಿನ್ನಡೆ ಉಂಟಾಗಿದೆ. ಅನುದಾನದ ಕೊರತೆ ಇದ್ದರೂ ಜನಪರ ಕಾಮಗಾರಿಗಳನ್ನು ಆದ್ಯತೆ ಮೇರೆ ಕೈಗೊಳ್ಳಲಾಗುತ್ತಿದೆ. ಆರನೆ ವಾರ್ಡ್‌ನ ಜನತೆಯ ಸಮಸ್ಯೆಗಳಿಗೆ ಪರಿಹಾರ ಹಾಗೂ ಬೇಡಿಕೆಗಳಿಗೆ ನಿರಂತರವಾಗಿ ಸ್ಪಂದಿಸಲಾಗುತ್ತಿದೆ ಎಂದರು.

ಸುಣ್ಣದ ಬೀದಿ ಹಾಗೂ ಶಾಂತಿನಗರದಲ್ಲಿ ಪಕ್ಷದ ಸದಸ್ಯತ್ವ ನೋಂದಣಿಗೆ ಮತೀನ್ ಚಾಲನೆ ನೀಡಿದರು. ಮತದಾರರ ಪಟ್ಟಿಗೆ ಸೇರ್ಪಡೆಗೊಂಡಿರುವ ಯುವಕ, ಯುವತಿಯರನ್ನು ಪಕ್ಷದ ಸದಸ್ಯರಾಗಿ ನೋಂದಾಯಿಸಲಾಯಿತು. ಅಲ್ಪಸಂಖ್ಯಾತರು ಅಧಿಕವಾಗಿರುವ ಶಾಂತಿನಗರದಲ್ಲಿ ಪುರುಷರು, ಮಹಿಳೆಯರು ಸಭೆಯಲ್ಲಿ ಭಾಗವಹಿಸಿದ್ದರು.

ಪಕ್ಷದ ಮುಖಂಡ ಸಿ.ಎ. ನಾಸರ್ ಮಾತನಾಡಿದರು.

ವೇದಿಕೆಯಲ್ಲಿ ಪಕ್ಷದ ಎಸ್ಸಿ, ಎಸ್ಟಿ ಮೋರ್ಚಾದ ಜಿಲ್ಲಾ ಸಮಿತಿ ಅಧ್ಯಕ್ಷ ಎಚ್.ಎನ್.

ಗೀಶ್, ಉಪಾಧ್ಯಕ್ಷ ಎಚ್.ಜಿ. ಗೋಪಾಲ್, ಖಾದರ್, ಪಟ್ಟಣ ಪಂಚಾಯತ್ ಸದಸ್ಯೆ ನಾಗಮ್ಮ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News