ಪೊಲೀಸರ ದೌರ್ಜನ್ಯ ಖಂಡಿಸಿ ವಕೀಲರಿಂದ ಕಲಾಪ ಬಹಿಷ್ಕಾರ
ಕುಶಾಲನಗರ, ಆ. 25: ಪಟ್ಟಣದ ಸಿವಿಲ್ ನ್ಯಾಯಾಧೀಶರು ಹಾಗೂ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಲಯದ ವಕೀಲರು ಕೋಟ್ ಕಲಾಪವನ್ನು ಬಹಿಷ್ಕರಿಸಿ ನ್ಯಾಯಾಲಯದ ಮುಂದೆ ಇಂದು ಬೆಳಗ್ಗೆ 11:30 ಕ್ಕೆ ಮೌನ ಪ್ರತಿಭಟನೆ ಮಾಡಿದರು.
ಈ ಸಂದರ್ಭದಲ್ಲಿ ವಕೀಲರ ಸಂಘದ ಉಪಾಧ್ಯಕ್ಷ ವೆಂಕಟರಮಣ ಮಾತನಾಡಿ, ಚನ್ನರಾಯಪಟ್ಟಣ ನ್ಯಾಯಾಲಯದಲ್ಲಿ ನ್ಯಾಯಧೀಶರ ಅದೇಶವನ್ನು ಧಿಕ್ಕರಿಸಿ ಅವರನ್ನೆ ಪೊಲೀಸರು ದಿಗ್ಬಂಧನಕ್ಕೆ ಇಟ್ಟಿರುವ ಘಟನೆ ನಡೆದಿದೆ. ನ್ಯಾಯಧೀಶರ ಆದೇಶವನ್ನು ಪಾಲಿಸಬೇಕಾದ ಪೊಲೀಸರೇ ನ್ಯಾಯಾಂಗ ಪಾಲನೆ ಮಾಡದಿದ್ದರೆ ಸಾಮಾನ್ಯ ಜನರ ಪಾಡೇನು ಎಂದು ಮಾಧ್ಯಮದ ಮುಂದೆ ತಿಳಿಸಿದರು.
ನಂತರ ಕುಶಾಲನಗರದ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಮೋಹನ್ ುಮಾರ್ ಮಾತನಾಡಿ, ಚನ್ನರಾಯಪಟ್ಟಣ ನ್ಯಾಯಾಲಯದಲ್ಲಿ ನ್ಯಾಯಧೀಶರು ಪೊಲೀಸ್ ಅಧಿಕಾರಿಯನ್ನು ನ್ಯಾಯಾಂಗ ವಶಕ್ಕೆ ನೀಡುವಂತೆ ಆದೇಶಿಸಿದಾಗ ಭಾರತದ ಕಾನೂನನ್ನೇ ಧಿಕ್ಕರಿಸಿ ನ್ಯಾಯಾಧೀಶರನ್ನು ದಿಗ್ಬಂಧನದಲ್ಲಿ ಇಟ್ಟಿರುವುದು ಖಂಡನೀಯ ವೆಂದರು.
ಈ ವೇಳೆ ವಕೀಲರಾದ ಶಿವಮೂರ್ತಿ, ಸಂತೋಷ, ಪಾಲಾಕ್ಷ, ರಾಘವೇಂದ್ರ, ಪದ್ಮನಾಭ, ಸರಿನಾ, ರಾಬಿನ್ ಮತ್ತಿತರರು ಉಪಸ್ಥಿತರಿದ್ದರು.