×
Ad

ನಾರಿಮನ್ ಜೊತೆ ಸಿಎಂ ಮಾತುಕತೆ

Update: 2016-08-25 22:23 IST

ಬೆಂಗಳೂರು, ಆ.25: ಕೆಆರ್‌ಎಸ್‌ನಿಂದ 50 ಟಿಎಂಸಿ ನೀರು ಬಿಡುವಂತೆ ತಮಿಳುನಾಡಿನಿಂದ ಸುಪ್ರೀಂಕೋರ್ಟ್‌ಗೆ ಸಲ್ಲಿಸಲಾಗಿರುವ ವಿಶೇಷ ಅರ್ಜಿ ಸಂಬಂಧ ಕರ್ನಾಟಕದ ಕಾನೂನು ತಜ್ಞರ ತಂಡದ ಮುಖ್ಯಸ್ಥ ಪಾಲಿನಾರಿಮನ್ ಅವರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ದೂರವಾಣಿ ಕರೆ ಮೂಲಕ ಮಾತುಕತೆ ಆಡಿದರು.

ತಮಿಳುನಾಡು ಸರಕಾರ 50 ಟಿಎಂಸಿ ನೀರಿಗಾಗಿ ತಕರಾರು ಅರ್ಜಿ ಸಲ್ಲಿಸಿದೆ. ಕಾವೇರಿ ನ್ಯಾಯಾಧೀಕರಣದ ತೀರ್ಪಿನ ಹಿನ್ನೆಲೆಯಲ್ಲಿ ತಮಿಳುನಾಡು ಪಾಲಿನ ನೀರನ್ನು ಕರ್ನಾಟಕ ಹರಿಯಬಿಡಬೇಕು. ಇಲ್ಲದಿದ್ದಲ್ಲಿ, ಸುಪ್ರೀಂಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆಯ ಪ್ರಕರಣವನ್ನು ಎದುರಿಸಬೇಕಾಗುತ್ತದೆ ಎಂದು ನಾರಿಮನ್ ದೂರವಾಣಿಯಲ್ಲಿ ಸಿದ್ದರಾಮಯ್ಯ ಅವರಿಗೆ ಹೇಳಿದ್ದಾರೆ ಎನ್ನಲಾಗಿದೆ.

ಆದರೆ, ಕರ್ನಾಟಕದ ಜಲಾಶಯಗಳ ಸ್ಥಿತಿ ಉತ್ತಮವಾಗಿಲ್ಲ, ಬೆಳೆ ಒಣಗಿ ಹೋಗಿವೆ. ನೀರು ಬಿಡುವ ಸ್ಥಿತಿಯಲ್ಲಿ ಕರ್ನಾಟಕ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪರಿಸ್ಥಿತಿಯನ್ನು ನಾರಿಮನ್‌ಗೆ ವಿವರಿಸಿದ್ದಾರೆ ಎಂದು ಗೊತ್ತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News