×
Ad

ಗ್ರಾಪಂ ಅಧ್ಯಕ್ಷ ಉಪಾಧ್ಯಕ್ಷ್ಷರ ಒಕ್ಕೂಟದ ಸಭೆ

Update: 2016-08-26 22:24 IST

ತರೀಕೆರೆ, ಆ.26: ಪಟ್ಟಣದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ ತಾಲೂಕು ಗ್ರಾಮ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷ್ಷರ ಒಕ್ಕೂಟದ ಸಭೆ ನಡೆಯಿತು.

 ಸಭೆಯಲ್ಲಿ ಭಾಗವಹಿಸಿದ್ದ ಶಾಸಕ ಜಿ.ಎಚ್.ಶ್ರೀನಿವಾಸ್ ಮಾತನಾಡಿ, ತಾಲೂಕಿನ ಗ್ರಾಪಂಗಳಿಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಅಂಬೇಡ್ಕರ್ ಯೋಜನೆಯಡಿ 939, ಪಿಎಂಎವೈಎ ಯೋಜನೆಯಡಿ 562, ಬಸವ ವಸತಿ ಯೋಜನೆಯಡಿ 290 ಮನೆಗಳು ಮಂಜೂರಾಗಿದ್ದು, ಗ್ರಾಪಂಗಳಲ್ಲಿ ನಿವೇಶನ ಹೊಂದಿರುವ ಫಲಾನುಭವಿಗಳನ್ನು ಆಯ್ಕೆ ಮಾಡಿಕೊಂಡು ಶೀಘ್ರ ಮನೆಗಳನ್ನು ನಿರ್ಮಾಣ ಮಾಡಿಕೊಳ್ಳುವಂತೆ ತಿಳಿಸಿದರು.

 ತಾಲೂಕಿನಾದ್ಯಂತ ಕುಡಿಯುವ ನೀರು ಸಮರ್ಪಕವಾಗಿ ಒದಗಿಸಲಾಗಿದ್ದು, ಯಾವುದೇ ರೀತಿಯ ತೊಂದರೆಗಳು ಉಂಟಾಗದಂತೆ ಅಧಿಕಾರಿಗಳು ನಿಗಾ ವಹಿಸಲು ತಿಳಿಸಿದ ಅವರು, ತಾಲೂಕಿನ ಬಗ್ಗವಳ್ಳಿ, ನೇರಲಕೆರೆ, ನಾರಣಾಪುರ, ಬೇಲೇನಹಳ್ಳಿ ಗ್ರಾಪಂಗಳಿಗೆ ಶುದ್ಧ ಕುಡಿಯುವ ನೀರಿನ ಘಟಕ ಮಂಜೂರಾಗಿದೆ ಎಂದರು.

ಗ್ರಾಪಂ ಅಧ್ಯಕ್ಷ ಉಪಾಧ್ಯಕ್ಷರುಗಳ ಒಕ್ಕೂಟದ ಅಧ್ಯಕ್ಷ ಸಿ.ದೇವರಾಜ್ ಮಾತನಾಡಿ, ಮಂಜೂರಾಗಿರುವ ಮನೆಗಳ ದಾಖಲೆಗಳನ್ನು ಹೊಂದಿರುವ ಫಲಾನುಭವಿಗಳನ್ನು ಮಾತ್ರ ಆಯ್ಕೆ ಮಾಡಿಕೊಂಡು ಮಂಜೂರು ಮಾಡಿದರೆ ಮಾತ್ರ ಗುರಿ ತಲುಪಬಹುದು ಎಂದರು.

ತಾಲೂಕಿನಾದ್ಯಂತ ಶಿಥಿಲಗೊಂಡಿರುವ ಕೆಲವು ಗ್ರಾಪಂ ಕಟ್ಟಡಗಳನ್ನು ನಿರ್ಮಿಸಲು ಎನ್‌ಆರ್‌ಈಜಿ ಯೋಜನೆಯಲ್ಲಿ ಸಾಧ್ಯವಾಗುತ್ತಿಲ್ಲ, ಸರಕಾರ ವಿಶೇಷ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಿದರು.

ಸಭೆಯಲ್ಲಿ ಭಾಗವಹಿಸಿದ್ದ ಅಧ್ಯಕ್ಷ-ಉಪಾಧ್ಯಕ್ಷರು ಸರಕಾರ ಗೌರವಧನ ಹೆಚ್ಚಿಸುವಂತೆ ತಿಳಿಸಿದರು. ಇಒ ಗಂಗಾಧರಮೂರ್ತಿ ಮಾತನಾಡಿ, ತಾಲೂಕಿನ 16 ಗ್ರಾಪಂಗಳಲ್ಲಿ ಪಿಡಿಒ ಹುದ್ದೆಗಳು ಖಾಲಿ ಇರುವುದರಿಂದ ಕೆಲಸ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ, ಶಾಸಕರು ಹುದ್ದೆಗಳ ಭರ್ತಿಗೆ ಸರಕಾರದ ಗಮನ ಸೆಳೆಯಬೇಕೆಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಲಕ್ಕವಳ್ಳಿ ಗ್ರಾಪಂ ಅಧ್ಯಕ್ಷ ಶಿವಕಿರಣ್, ಉಪಾಧ್ಯಕ್ಷೆ ವೀಣಾಕುಮಾರ್, ಹಾಗೂ ಗ್ರಾಪಂಗಳ ಅಧ್ಯಕ್ಷ- ಉಪಾಧ್ಯಕ್ಷರುಗಳು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News