ಸರಕಾರಿ ಬಸ್ ನಿಲ್ದಾಣಕ್ಕೆ ಎಂಪಿ ಸುನೀಲ್ ಸುಬ್ರಮಣಿ ದಿಢೀರ್ ಭೇಟಿ, ಪರಿಶೀಲನೆ
Update: 2016-08-26 22:35 IST
ಕುಶಾಲನಗರ, ಆ.26: ಪಟ್ಟಣದ ಸರಕಾರಿ ಬಸ್ ನಿಲ್ದಾಣದ ಆವರಣದಲ್ಲಿ ಅಶುಚಿತ್ವ ತಾಂಡವವಾಡುತ್ತಿದ್ದ ಬಗ್ಗೆ ಪತ್ರಿಕೆಯ ವರದಿಯಿಂದ ಎಚ್ಚೆತ್ತ ಸಾರಿಗೆ ಹಾಗೂ ಪಟ್ಟಣ ಪಂಚಾಯತ್ ಅಧಿಕಾರಿಗಳು ಬಸ್ ನಿಲ್ದಾಣದ ಆವರಣದಲ್ಲಿ ಶುಚಿತ್ವದ ಕಾಮಗಾರಿ ಕೈಗೊಳ್ಳುತ್ತಿದ್ದಂತೆೆ ಬಸ್ ನಿಲ್ದಾಣಕ್ಕೆ ಎಂಪಿ ಸುನೀಲ್ ಸುಬ್ರಮಣಿ ದಿಢೀರ್ ಭೇಟಿ ನೀಡಿ, ಪರಿಶೀಲಿಸಿದರು.
ಬಳಿಕ ಗುಂಡೂರಾವ್ ಬಡಾವಣೆಯಲ್ಲಿರುವ ದೇವರಾಜ ಅರಸು ವಸತಿನಿಲಯಕ್ಕೆ ಭೇಟಿ ನೀಡಿ ಅಡುಗೆಮನೆ ಹಾಗೂ ಊಟದ ಕೋಣೆಗಳ ಶುಚಿತ್ವದ ಪರಿಶೀಲನೆ ನಡೆಸಿದರು. ನಂತರ ಬಸವನಹಳ್ಳಿಯ ಮೊರಾರ್ಜಿ ದೇಸಾಯಿ ವಸತಿನಿಲಯಕ್ಕೆ ಭೇಟಿ ನೀಡಿದರು. ನಿಲಯದ ಒಳ ಹಾಗೂ ಹೊರಗೆ ಶುಚಿತ್ವವನ್ನು ಕಾಪಾಡಿಕೊಳ್ಳುವಂತೆ ಪ್ರಾಂಶುಪಾಲ ಚಂದ್ರಶೇಖರ ರೆಡ್ಡಿ ಅವರಿಗೆ ತಾಕೀತು ಮಾಡಿದರು.
ಈ ವೇಳೆ ಕುಶಾಲನಗರ ಬಿಜೆಪಿ ಅಧ್ಯಕ್ಷ ಕೆ.ಜೆ. ಮನು, ತಾಲೂಕು ಕಾರ್ಯದರ್ಶಿ ಎಂ.ಡಿ.ಕೃಷ್ಣಪ್ಪ, ಕುಶಾಲನಗರ ಪಪಂ ಅಧ್ಯಕ್ಷ ಎಂ.ಎಂ.ಚರಣ್, ಭಾಸ್ಕರ್ ನಾಯಕ್, ಎಚ್.ಎಂ.ರಘು ಇನ್ನಿತರರು ಹಾಜರಿದ್ದರು.