ಸ್ವಾತಂತ್ರ ಹೋರಾಟಗಾರನಿಗೆ ಸನ್ಮಾನ
Update: 2016-08-27 00:06 IST
102ನೆ ವರ್ಷಕ್ಕೆ ಕಾಲಿಟ್ಟ ಸ್ವಾತಂತ್ರ ಹೋರಾಟಗಾರ ಕೆ.ಮಾಧವನ್‌ರನ್ನು ನೆಲ್ಲಿಕ್ಕೋಡ್‌ನಲ್ಲಿರುವ ಅವರ ಸ್ವಗೃಹದಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ವಾರ್ತಾ ಇಲಾಖೆ ವತಿಯಿಂದ ಶುಕ್ರವಾರ ಸನ್ಮಾನಿಸಲಾಯಿತು. ಈ ಸಂದರ್ಭ ಜಿಲ್ಲಾಧಿಕಾರಿ ಜೀವನ್ ಬಾಬು ಕೆ., ಜಿಲ್ಲಾ ಸಹಾಯಕ ವಾರ್ತಾಧಿಕಾರಿ ಎಂ.ಮಧುಸೂಧನ್, ಕೆ.ರತೀಶ್, ಟಿ.ಕೆ.ಕೃಷ್ಣನ್, ಮಹಾಲಿಂಗ ನಾಯಕ್ ಉಪಸ್ಥಿತರಿದ್ದರು.